ಆಂಧ್ರದ ರಾಜಮಂಡ್ರಿಯಿಂದ ಮೈಸೂರಿಗೆ 3 ಸಾವಿರ ಗಿಡಗಳು
ಮೈಸೂರು

ಆಂಧ್ರದ ರಾಜಮಂಡ್ರಿಯಿಂದ ಮೈಸೂರಿಗೆ 3 ಸಾವಿರ ಗಿಡಗಳು

June 6, 2021

ಮೈಸೂರು, ಜೂ.5(ಪಿಎಂ)- ಮೈಸೂರು ನಗರದ ಹಸಿರೀಕರಣಕ್ಕೆ ಮುಂದಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, 15ರಿಂದ 20 ಅಡಿ ಎತ್ತರಕ್ಕೆ ಬೆಳೆದಿ ರುವ 3 ಸಾವಿರ ಗಿಡಗಳನ್ನು ಆಂಧ್ರ ಪ್ರದೇಶದ ರಾಜಮಂಡ್ರಿಯಿಂದ ತಂದು ನಗರದಲ್ಲಿ ನೆಡಲು ಉದ್ದೇಶಿಸಿದೆ.

ಈಗಾಗಲೇ 20 ಅಡಿ ಎತ್ತರಕ್ಕೆ ಈ ಗಿಡಗಳು ಬೆಳೆದಿ ರುವ ಹಿನ್ನೆಲೆಯಲ್ಲಿ ಅವುಗಳ ಬದುಕುಳಿದು, ಬೆಳೆಯುವ ಪ್ರಮಾಣ ಶೇ.80ರಷ್ಟು ಇರುವ ಕಾರಣಕ್ಕೆ ರಾಜಮಂಡ್ರಿ ಯತ್ತ ಮುಡಾ ಮುಖ ಮಾಡಿದೆ. ಮೈಸೂರಿನ ಹೊರ ವಲಯದ ನಂಜನಗೂಡು ರಸ್ತೆಯ ದೇವರಾಯನ ಕೆರೆ ಪಕ್ಕದ ಹಸಿರು ಮೈಸೂರು ಸಂಸ್ಥೆಯ ನರ್ಸರಿ ಯಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಬಳಿಕ ಸುದ್ದಿ ಗಾರರಿಗೆ ಮುಡಾ ಆಯುಕ್ತ ಡಿ.ಬಿ.ನಟೇಶ್ ಈ ವಿಷಯ ತಿಳಿಸಿದರು. ಆಂಧ್ರ ಪ್ರದೇಶದ ರಾಜಮಂಡ್ರಿಯಿಂದ 15ರಿಂದ 20 ಅಡಿ ಬೆಳೆದಿರುವ ಹೂ, ಹಣ್ಣು ಸೇರಿದಂತೆ ವಿವಿಧ ಜಾತಿ ಗಿಡಗಳನ್ನು ತರಿಸಲು ಮುಂದಾಗಿದ್ದೇವೆ. ಮುಡಾದ ನಗರ ಹಸಿರೀಕರಣ ಯೋಜನೆಯಡಿ ಇಂತಹ 3 ಸಾವಿರ ಗಿಡಗಳನ್ನು ತರಿಸಲಾಗುತ್ತಿದೆ. ಈ ಗಿಡಗಳು ಶೇ.80ರಷ್ಟು ಬದುಕುಳಿಯುವ ಪ್ರಮಾಣ ಹೊಂದಿರುತ್ತವೆ ಎಂದರು.

ಗಿಡ ಪೋಷಣೆಗೆ 10 ಹುದ್ದೆಗಳು: ಗಿಡ ನೆಟ್ಟ ಬಳಿಕ ಅವುಗಳ ಪೋಷಣೆಗೆ ಸಂಘ-ಸಂಸ್ಥೆಗಳು ಮುಂದೆ ಬಂದರೆ ಅವರಿಗೆ ಒಡಂಬಡಿಕೆ ಮೂಲಕ ಜವಾ ಬ್ದಾರಿ ನೀಡಲಾಗುವುದು. ನಿರ್ವಹಣೆ ವೆಚ್ಚ ಅವರೇ ಭರಿಸಬೇಕಾಗುತ್ತದೆ. ಜೊತೆಗೆ ಹಸಿರೀಕರಣದಲ್ಲಿ ತೊಡ ಗಿಸಿಕೊಳ್ಳುವ ಆಸಕ್ತ ನಿರುದ್ಯೋಗಿಗಳಿಗೆ ಗಿಡಗಳ ಪೋಷಣೆ ಮತ್ತು ನಿರ್ವಹಣೆ ಕೆಲಸ ನೀಡಲು ಮುಡಾ ಉದ್ದೇ ಶಿಸಿದೆ. ಈ ಸಂಬಂಧ ಹೊರಗುತ್ತಿಗೆಯಡಿ ಮುಡಾದ 8 ವಲಯಕ್ಕೆ ತಲಾ ಒಬ್ಬರು ಸೇರಿದಂತೆ ಹೆಚ್ಚುವರಿ ಯಾಗಿ 10 ಹುದ್ದೆಗಳನ್ನು ಸೃಜಿಸಲು ಚಿಂತನೆ ನಡೆಯು ತ್ತಿದೆ. ಆದರೆ ಅವರಿಗೆ ಪರಿಸರದ ಬಗ್ಗೆ ಅತೀವ ಕಾಳಜಿ ಇರಬೇಕು ಎಂದು ಅವರು ಹೇಳಿದರು.

Translate »