ಕೊರೊನಾದಿಂದ ಕುಲಕಸುಬು, ಉದ್ಯೋಗ ನಷ್ಟ; ಅರಸು ನಿಗಮದ ಹೊಸ ಸಹಾಯಹಸ್ತ ಯೋಜನೆ
ಮೈಸೂರು

ಕೊರೊನಾದಿಂದ ಕುಲಕಸುಬು, ಉದ್ಯೋಗ ನಷ್ಟ; ಅರಸು ನಿಗಮದ ಹೊಸ ಸಹಾಯಹಸ್ತ ಯೋಜನೆ

June 6, 2021

ಮೈಸೂರು, ಜೂ.5(ಎಂಟಿವೈ)- ಕೊರೊನಾ ಹಾವಳಿ ಯಿಂದಾಗಿ ಕುಲಕಸುಬು, ಉದ್ಯೋಗ ನಷ್ಟವಾಗಿ ಸಂಕಷ್ಟದಲ್ಲಿರುವ ಮಹಿಳೆ ಯರು, ನಿರುದ್ಯೋಗಿ ಯುವಜನರಿಗೆ ಸಹಾಯಹಸ್ತ ಚಾಚಲು `ಕೊರೊನಾ ಕಾಲದ ಆಪತ್ ಯೋಜನೆ’ ಹೆಸರಿನಲ್ಲಿ ಪ್ರತಿ ಜಿಲ್ಲೆಯಲ್ಲಿ 1 ಸಾವಿರ ಹೊಲಿಗೆ ಯಂತ್ರ ಹಾಗೂ 500 ಮಂದಿಗೆ ಉಚಿತ ಕಂಪ್ಯೂಟರ್ ನೀಡಲು ನಿರ್ಧರಿಸ ಲಾಗಿದೆ. ಕೊರೊನಾದಿಂದಾಗಿ ಕುಟುಂಬದ ದುಡಿಮೆಗಾರ ರನ್ನು ಕಳೆದುಕೊಂಡ ಮಹಿಳೆಯರು, ಉದ್ಯೋಗ ನಷ್ಟದಿಂದ ಸಂಕಷ್ಟಕ್ಕೀಡಾಗಿರುವ ಯುವಕ-ಯುವತಿಯರಿಗೆ ಈ ಯೋಜನೆಯ ಸೌಲಭ್ಯ ದೊರೆಯಲಿದೆ ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ ತಿಳಿಸಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ನಾಡು ಕಂಡ ಶ್ರೇಷ್ಠ ಮುಖ್ಯ ಮಂತ್ರಿ ಎನಿಸಿದ ದಿ. ಡಿ.ದೇವರಾಜ ಅರಸು ಅವರ 39ನೇ ಪುಣ್ಯಸ್ಮರಣೆಯನ್ನು ಜೂ.6ರ ಭಾನುವಾರ ಸರಳವಾಗಿ ಆಯೋಜಿಸಲಾಗುತ್ತಿದೆ. ಬೆಂಗಳೂರಿನ ವಿಧಾನಸೌಧ ಮುಂದಿನ ಡಿ.ದೇವರಾಜ ಅರಸು ಪ್ರತಿಮೆಗೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಳಗ್ಗೆ ಮಾಲಾ ರ್ಪಣೆ ಮಾಡಲಿದ್ದಾರೆ. ಇದೇ ವೇಳೆ ಮೈಸೂರಲ್ಲಿ ಡಿ.ದೇವ ರಾಜ ಅರಸು ಪ್ರತಿಮೆ ಹಾಗೂ ಸಮುದಾಯ ಭವನ ನಿರ್ಮಾಣ ಸಂಬಂಧ ನಾಳೆ ಸಿಎಂಗೆ ಮನವಿ ಸಲ್ಲಿಸಲಾಗು ತ್ತದೆ. ಕೊರೊನಾದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗುವ ಎರಡು ಹೊಸ ಕಾರ್ಯಕ್ರಮಗಳನ್ನೂ ಆರಂಭಿಸಲಾಗುವುದು ಎಂದು ಹೇಳಿದರು.

ಒಂದೂವರೆ ವರ್ಷದಿಂದ ಕೊರೊನಾ ಹಾವಳಿಯಿಂ ದಾಗಿ ಬಡವರು, ಹಿಂದುಳಿದ ಸಮುದಾಯದ ಬಹಳಷ್ಟು ಜನರು ತತ್ತರಿಸಿದ್ದಾರೆ. ಶ್ರಮಿಕವರ್ಗ ಹಾಗೂ ಅಸಂಘ ಟಿತ ವಲಯದ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿ ದ್ದಾರೆ. ಬಹಳಷ್ಟು ಮಂದಿ ಉದ್ಯೋಗ ಕಳೆದುಕೊಂಡಿ ದ್ದಾರೆ. ಲಾಕ್‍ಡೌನ್‍ನಿಂದಾಗಿ ಬಡವರು, ಕುಲಕಸುಬು ಅವಲಂಬಿಸಿದ್ದವರ ಸ್ಥಿತಿಯಂತೂ ಶೋಚನೀಯವಾಗಿದೆ. ಹಾಗಾಗಿಯೇ ಅರಸು ಪುಣ್ಯಸ್ಮರಣೆ ವೇಳೆ 2 ಮಹತ್ವದ ಯೋಜನೆ ಪ್ರಕಟಿಸಲಾಗುವುದು. ಈ ವಿಚಾರವನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಅವರು ಸಮ್ಮತಿಸಿದ್ದಾರೆ. ಈ ಸಂಬಂಧ ಸರ್ಕಾರವೇ ಒಂದೆರಡು ದಿನದಲ್ಲಿ ಅಧಿಕೃತ ಆದೇಶ ಹೊರಡಿಸಲಿದೆ. ಬಳಿಕ ನಿಗಮದ ವ್ಯಾಪ್ತಿಗೆ ಬರುವ ಸಮುದಾಯಗಳಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿ ಸುವ ಕಾರ್ಯ ಆರಂಭವಾಗಲಿದೆ ಎಂದು ವಿವರಿಸಿದರು.

ಬೀದಿಬದಿ ವ್ಯಾಪಾರಿಗಳಿಗೆ ಹಾಗೂ ಸಣ್ಣ ವರ್ತಕರಿಗೆ ನೆರವಾಗಲೆಂದೇ ಕಡಿಮೆ ಬಡ್ಡಿದರದಲ್ಲಿ 5 ಸಾವಿರದಿಂದ 10 ಸಾವಿರ ರೂ.ವರೆಗೂ ಸಾಲ ನೀಡಲಾಗುವುದು. ಲಾಕ್ ಡೌನ್ ಕೊನೆಗೊಂಡ ಬಳಿಕ ಅರ್ಜಿ ಅಹ್ವಾನಿಸಲಾಗುವುದು. ಅಲ್ಲದೆ ವೃತ್ತಿ ಆಧಾರಿತ ಸಮುದಾಯಕ್ಕೆ ತರಬೇತಿ ನೀಡಲು ಅರಸು ಹೆಸರಿನಲ್ಲಿ ಪ್ರತಿ ಜಿಲ್ಲೆಯಲ್ಲೂ ತರಬೇತಿ ಕೇಂದ್ರ ಆರಂಭಿಸಲು ಸರ್ಕಾರವನ್ನು ಕೋರಲಾಗುತ್ತದೆ ಎಂದರು. ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಹೆಚ್.ಗಿರಿಧರ್, ಜೋಗಿ ಮಂಜು, ಗೋಪಾಲ್‍ರಾಜು ಇದ್ದರು.

Translate »