ಮಕ್ಕಳಿಗಾಗಿ ಇಮ್ಯುನಿಟಿ ಬೂಸ್ಟಿಂಗ್ ಆಹಾರ ತಯಾರಿಕೆಗೆ ಸಿಎಫ್‍ಟಿಆರ್‍ಐನಲ್ಲಿ ಸಿದ್ಧತೆ
ಮೈಸೂರು

ಮಕ್ಕಳಿಗಾಗಿ ಇಮ್ಯುನಿಟಿ ಬೂಸ್ಟಿಂಗ್ ಆಹಾರ ತಯಾರಿಕೆಗೆ ಸಿಎಫ್‍ಟಿಆರ್‍ಐನಲ್ಲಿ ಸಿದ್ಧತೆ

June 6, 2021

ಮೈಸೂರು, ಜೂ. 5(ಆರ್‍ಕೆ)- ಆಹಾರ ಸಂಶೋಧನೆ ಮತ್ತು ಸಂಸ್ಕರಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ದೇಶದ ಪ್ರತಿಷ್ಠಿತ ಮೈಸೂರಿನ ಸಿಎಫ್‍ಟಿಆರ್‍ಐ, ಕೊರೊನಾದಿಂದ ರಕ್ಷಣೆ ಪಡೆಯಲು ಇಮ್ಯುನಿಟಿ ಬೂಸ್ಟಿಂಗ್ ಆಹಾರ ತಯಾ ರಿಸಲು ಸಿದ್ಧತೆ ನಡೆಸುತ್ತಿದೆ.

ಕೊರೊನಾ ಸೋಂಕಿನ 3ನೇ ಅಲೆಯು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರ ಲಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಎಚ್ಚೆತ್ತು ಕೊಂಡಿರುವ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ(ಅಈಖಿಖI) ಯು, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಇಮ್ಯುನಿಟಿ ಬೂಸ್ಟಿಂಗ್ ಆಹಾರವನ್ನು ತಯಾರಿಸಲು ಸಂಶೋಧನೆಗೆ ಮುಂದಾಗಿದೆ.

ಈ ಕುರಿತು ಸಂಸ್ಥೆಯ ಆಹಾರ ಸಂಶೋ ಧನೆ, ನ್ಯೂಟ್ರೀಷನ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಇಮ್ಯುನಿಟಿ ಬೂಸ್ಟಿಂಗ್ ಆಹಾರ ತಯಾರಿಕೆಗೆ ಅನು ಮೋದನೆ ನೀಡುವಂತೆ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್ (ಅSIಖ) ಕೇಂದ್ರ ಸ್ಥಾನಕ್ಕೆ ಪ್ರಸ್ತಾವನೆ ಸಲ್ಲಿಸಿ ದ್ದಾರೆ. ಈ ಕುರಿತು ‘ಮೈಸೂರು ಮಿತ್ರ’ ನೊಂದಿಗೆ ಮಾತ ನಾಡಿದ ಸಿಎಫ್‍ಟಿ ಆರ್‍ಐ ನಿರ್ದೇಶಕಿ ಡಾ.ಶ್ರೀದೇವಿ ಅನ್ನ ಪೂರ್ಣಸಿಂಗ್, ಕಳೆದ ವರ್ಷ ಕೊರೊನಾ ಮೊದಲ ಅಲೆ ಬಂದಿದ್ದಾಗಲೂ ಸಂಸ್ಥೆಯು ಸ್ಪಿರು ಲಿನಾ ಆಧರಿತ ಮೈಕ್ರೋ-ನ್ಯೂಟ್ರಿಯೆಂಟ್ಸ್ ಮತ್ತು ಪ್ರೋಟಿನ್‍ಯುಕ್ತ ಚಿಕ್ಕೀಸ್ ಪೂರೈ ಸಿತ್ತು ಎಂದರು. ದೇಶಾದ್ಯಂತ ಒಂದು ಸ್ಥಳ ದಿಂದ ಮತ್ತೊಂದು ಸ್ಥಳಕ್ಕೆ ತೆರಳಿದ ವಲಸೆ ಕಾರ್ಮಿಕರು, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ -19 ಲಾಕ್‍ಡೌನ್ ಸಂದರ್ಭ ಇಮ್ಯುನಿಟಿ ಬೂಸ್ಟಿಂಗ್ ಆಹಾರವನ್ನು ಸಿಎಫ್‍ಟಿಆರ್‍ಐ ಪೂರೈಸಿತ್ತು. ಇದೀಗ ಕೊರೊನಾ 3ನೇ ಅಲೆ ಯಲ್ಲಿ ಮಕ್ಕಳು ಸೋಂಕಿಗೊಳಗಾಗುತ್ತಾರೆ ಎಂಬ ಮಾಹಿತಿ ಇರುವುದರಿಂದ ಮಕ್ಕಳಿಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಘನ ಹಾಗೂ ಅನಿಲ ರೂಪದ ಆಹಾರವನ್ನು ತಯಾರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು. ಈಗಾಗಲೇ ಸಂಸ್ಥೆಯ ಮೂರ್ನಾಲ್ಕು ವಿಭಾಗಗಳಿಂದ ಸಿಎಸ್‍ಐಆರ್‍ಗೆ ಪ್ರಸ್ತಾ ವನೆ ಕಳುಹಿಸಲಾಗಿದ್ದು, ಅನುಮೋದನೆಗೆ ಎದುರು ನೋಡುತ್ತಿದ್ದೇವೆ. ಅನುಮತಿ ಸಿಕ್ಕಿದ ತಕ್ಷಣವೇ ಇಮ್ಯುನಿಟಿ ಬೂಸ್ಟಿಂಗ್ ಆಹಾರ ತಯಾರಿಸಿ ಮೊದಲು ಮಕ್ಕಳ ಮೇಲೆ ಪ್ರಯೋಗ ಮಾಡಿದ ನಂತರ ಕ್ಲಿನಿಕಲ್ ಅಧ್ಯಯನ ನಡೆಸಿ ಬಳಿಕ ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.

ಜಿಂಕ್, ವಿಟಮಿನ್ `ಸಿ’, ವಿಟಮಿನ್ ‘ಡಿ’ ಸೇರಿದಂತೆ ಇನ್ನಿತರ ಪ್ರೊಟೀನ್ ಯುಕ್ತ ಅಂಶಗಳನ್ನೊಳಗೊಂಡ ಆಹಾರ ತಯಾರಿಸಿ ಮಕ್ಕಳ ಸೇವನೆಗೆ ಪೂರೈಸ ಲಾಗುವುದು ಎಂದು ಸಿಎಫ್‍ಟಿಆರ್‍ಐ ವಿಜ್ಞಾನಿಗಳು ತಿಳಿಸಿದ್ದಾರೆ.

Translate »