ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹೊಸ ವಿಧಾನ ವಿದ್ಯಾರ್ಥಿಗಳ ಭವಿಷ್ಯತ್ತಿನ ದೃಷ್ಟಿಯಿಂದ ಸೂಕ್ತ ಎಲ್ಲರ ಉತ್ತೀರ್ಣ, ಎಬಿಸಿ ಗ್ರೇಡಿಂಗ್ ಫಲಿತಾಂಶ ಅವೈಜ್ಞಾನಿಕ
ಮೈಸೂರು

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹೊಸ ವಿಧಾನ ವಿದ್ಯಾರ್ಥಿಗಳ ಭವಿಷ್ಯತ್ತಿನ ದೃಷ್ಟಿಯಿಂದ ಸೂಕ್ತ ಎಲ್ಲರ ಉತ್ತೀರ್ಣ, ಎಬಿಸಿ ಗ್ರೇಡಿಂಗ್ ಫಲಿತಾಂಶ ಅವೈಜ್ಞಾನಿಕ

June 7, 2021

ಮೈಸೂರು, ಜೂ.6 (ಆರ್‍ಕೆಬಿ)- ಕೋವಿಡ್-19 ಸುಧಾ ರಣೆಯ ನಂತರ ಹೊಸ ವಿಧಾನ ಅಳವಡಿಸಿ ಎಸ್‍ಎಸ್ ಎಲ್‍ಸಿ ಪರೀಕ್ಷೆ ನಡೆಸುತ್ತಿರುವುದು ವಿದ್ಯಾರ್ಥಿಗಳ ಭವಿಷ್ಯತ್ತಿನ ದೃಷ್ಟಿ ಯಿಂದ ಸೂಕ್ತವಾಗಿದೆಯಾದರೂ, ಎಲ್ಲರನ್ನೂ ಉತ್ತೀರ್ಣಗೊಳಿಸುವುದು ಮತ್ತು ಎಬಿಸಿ ಗ್ರೇಡಿಂಗ್ ಮೂಲಕ ಫಲಿತಾಂಶ ಪ್ರಕಟಿಸುವುದು ಅವೈಜ್ಞಾ ನಿಕ. ಇದರ ಬಗ್ಗೆ ಇಲಾಖೆ ಪುನರ್ ಪರಿಶೀಲಿಸಿ ಕೂಡಲೇ ಸ್ಪಷ್ಟೀಕರಣ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಒತ್ತಾಯಿಸಿದ್ದಾರೆ.

ಈ ಸಾಲಿನ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆ ಮತ್ತು ಫಲಿತಾಂಶಗಳ ಬಗ್ಗೆ ಕಳೆದ ಒಂದು ತಿಂಗಳಿಂದ ನಾನು ಶಿಕ್ಷಣ ಸಚಿವರಿಗೆ ಪದವಿ ಹಾಗೂ ಶಿಕ್ಷಕ ಕ್ಷೇತ್ರದ ಶಾಸ ಕರು, ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಣ ತಜ್ಞರ ಜೊತೆ ಹೊಸ ಪರೀಕ್ಷಾ ಪದ್ಧತಿ ಬಗ್ಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳುವಂತೆ 3 ಪತ್ರಗಳನ್ನು ಬರೆದಿ ದ್ದೇನೆ. ಆದರೆ ಪರೀಕ್ಷೆ ಸಂಬಂಧ ಶಿಕ್ಷಣ ಸಚಿವರೇ ಸ್ವಯಂಪ್ರೇರಣೆಯಿಂದ ತೀರ್ಮಾನ ತೆಗೆದುಕೊಂಡಿ ರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸಿ, ಎಸ್‍ಎಸ್‍ಎಲ್‍ಸಿ ಮತ್ತು ಪ್ರಥಮ ಪಿಯುಸಿ ಅಂಕಗಳನ್ನು ಒಟ್ಟುಗೂಡಿಸಿ ಗ್ರೇಡಿಂಗ್ ರೂಪದಲ್ಲಿ ಫಲಿತಾಂಶ ಪ್ರಕಟಿ ಸುವುದು, ಅಪೇಕ್ಷೆ ಪಟ್ಟವರಿಗೆ ರಿಪೀಟರ್ಸ್ ಮತ್ತು ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದಾಗಿ ತೀರ್ಮಾ ನಿಸಿರುವುದರಲ್ಲಿ ಯಾವುದೇ ಸಾಮಾಜಿಕ ನ್ಯಾಯವಿಲ್ಲ. ಇದು ಅತ್ಯಂತ ಕಾನೂನು ಬಾಹಿರ ಕ್ರಮ. ಸರ್ಕಾರದ ಈ ಕ್ರಮ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಪ್ರವೇಶಾತಿ ಹಾಗೂ ನೌಕರಿ ಪಡೆಯುವ ಸಂದರ್ಭದಲ್ಲಿ ತುಂಬಾ ತೊಂದರೆ ಗೀಡು ಮಾಡುತ್ತದೆ ಎಂಬ ಅರಿವು ಸರ್ಕಾರಕ್ಕೆ, ಪೋಷಕ ರಿಗೆ ಹಾಗೂ ವಿದ್ಯಾರ್ಥಿಗಳಿಗೆ ಇಲ್ಲದಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಬ್ಬಗೆಯ ನೀತಿ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಿತದೃಷ್ಟಿ ಯಿಂದ ಈ ಸಾಲಿನಲ್ಲಿ ಸಿಇಟಿ ಪರೀಕ್ಷೆಗೆ ಅಂಕಗಳನ್ನು ಮಾತ್ರ ಆಧರಿಸಿ ತಾಂತ್ರಿಕ ಹಾಗೂ ಉನ್ನತ ಶಿಕ್ಷಣದ ಕೋರ್ಸ್‍ಗಳ ಪ್ರವೇಶಕ್ಕೆ ಪರಿಗಣಿಸುವ ಸಂಬಂಧ ಉನ್ನತ ಶಿಕ್ಷಣ ಸಚಿವರು ಕೂಡಲೇ ಆದೇಶಿಸಬೇಕೆಂದು ಒತ್ತಾಯಿಸಿ ದ್ದಾರೆ. ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬೋಧಕ-ಬೋಧಕೇತರ ಸಿಬ್ಬಂದಿಗೆ ತಲಾ 5 ಸಾವಿರ ರೂ. ಆರ್ಥಿಕ ನೆರವು ಘೋಷಣೆ ಮಾಡಿರುವುದರಲ್ಲಿ ತಾರತಮ್ಯವಿದೆ. ಏನೆಂದರೆ ಅನುದಾನರಹಿತ ಪದವಿ ಪೂರ್ವ ಕಾಲೇಜು ಸಿಬ್ಬಂದಿ, ಪದವಿ ಕಾಲೇಜು ಮತ್ತು ವಿಶ್ವ ವಿದ್ಯಾನಿಲಯದ ಅತಿಥಿ ಉಪನ್ಯಾಸಕರಿಗೆ ಯಾವುದೇ ಆರ್ಥಿಕ ನೆರವು ಘೋಷಣೆ ಮಾಡದಿರುವುದು ಇಬ್ಬಗೆಯ ನೀತಿಯಾಗಿದೆ ಎಂದಿದ್ದಾರೆ.

ಇತ್ತೀಚೆಗೆ ಶಿಕ್ಷಣ ಸಚಿವರ ಸಮ್ಮುಖದಲ್ಲಿ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಶಾಸಕರು ಸೇರಿದಂತೆ ಇಲಾಖೆಯ ಕಾರ್ಯದರ್ಶಿ ಮತ್ತು ಆಯುಕ್ತರೊಂದಿಗೆ ವೆಬಿನಾರ್ ನಡೆಸಿ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕಲ್ಯಾಣ ನಿಧಿ ಹಾಗೂ ಕಳೆದ ಸಾಲಿನಲ್ಲಿ ಶೇ.70ರಷ್ಟು ಅಂದರೆ ಸುಮಾರು 200 ಕೋಟಿ ಮತ್ತು 2021-22ನೇ ಸಾಲಿನ ಆಯವ್ಯಯದ ನಿರ್ವಹಣೆ ವೆಚ್ಚಕ್ಕೆ ನಿಗದಿಪಡಿಸಿರುವುದರಲ್ಲಿ ಸುಮಾರು 300 ಕೋಟಿಗಳನ್ನು ಅನುಮೋದನೆ ಪಡೆದು, ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಮತ್ತು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ಸಂಘದ ಸಂಘಟನೆಯ ಪದಾಧಿಕಾರಿಗಳ ಒಪ್ಪಿಗೆ ಮೇರೆಗೆ ಒಂದು ದಿನದ ವೇತನ ಹಾಗೂ ವಿಧಾನ ಪರಿಷತ್ ಸದಸ್ಯರ ಅಭಿವೃದ್ಧಿ ನಿಧಿಯಿಂದ ತಲಾ 50 ಲಕ್ಷ ಸೇರಿದಂತೆ ಒಟ್ಟು 500 ಕೋಟಿಯಷ್ಟು ಅನುದಾನ ರಹಿತ ಶಾಲಾ-ಕಾಲೇಜು ನೊಂದ ಬೋಧಕ-ಬೋಧ ಕೇತರ ಸಿಬ್ಬಂದಿಗೆ ನೀಡುವುದಾಗಿ ಚರ್ಚೆಯಿಂದ ತೀರ್ಮಾನಕ್ಕೆ ಬರಲಾಯಿತು. ಆದರೆ ಮುಖ್ಯಮಂತ್ರಿಗಳು ತಲಾ 5 ಸಾವಿರದಂತೆ 100 ಕೋಟಿ ರೂ. ಆರ್ಥಿಕ ನೆರವನ್ನು ಕೆಲವೇ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಿಬ್ಬಂದಿಗೆ ಮಾತ್ರ ನೀಡಿರುವಲ್ಲಿ ತಾರತಮ್ಯವಾಗಿದೆ. ಕೂಡಲೇ ಪರಿಶೀಲಿಸಿ, ಅನುದಾನ ರಹಿತ ಶಾಲಾ-ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಅತಿಥಿ ಉಪನ್ಯಾಸಕರಿಗೂ ಅನ್ವಯಿಸುವಂತೆ ಮತ್ತೊಂದು ಸೂಕ್ತವಾದ ಆರ್ಥಿಕ ನೆರವನ್ನು ಘೋಷಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.

Translate »