ವೈಜ್ಞಾನಿಕವಾಗಿ, ಹಂತ ಹಂತದ  ಅನ್‍ಲಾಕ್ ಪ್ರಕ್ರಿಯೆಗೆ ತಜ್ಞರ ಒಲವು
News

ವೈಜ್ಞಾನಿಕವಾಗಿ, ಹಂತ ಹಂತದ ಅನ್‍ಲಾಕ್ ಪ್ರಕ್ರಿಯೆಗೆ ತಜ್ಞರ ಒಲವು

June 7, 2021

ಬೆಂಗಳೂರು,ಜೂ.6-ಕೋವಿಡ್-19 ಅನ್ನು ನಿರ್ಬಂಧಿಸಲು ರಾಜ್ಯ ಸರ್ಕಾರ ಲಾಕ್‍ಡೌನ್ ಅನ್ನು ವಿಸ್ತರಿಸಿದ್ದು, ಮುಂದಿನ ದಿನಗಳಲ್ಲಿ ಹಂತಹಂತವಾಗಿ, ಗ್ರೇಡ್ ಮಾದರಿಯಲ್ಲಿ, ಸಮಯ ಮಿತಿಯೊಳಗೆ ಅನ್‍ಲಾಕ್ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಬೇಕೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅನ್‍ಲಾಕ್ ಪ್ರಕ್ರಿಯೆ ಯನ್ನು ಪರಿಣಾಮಕಾರಿ ಯಾಗಿ ನಡೆಸಿದರೆ ಕೊರೊನಾ 3ನೇ ಅಲೆಯಿಂದ ಅಷ್ಟೊಂದು ದುಷ್ಪರಿಣಾಮ ಬೀರಲಿಕ್ಕಿಲ್ಲ ಎಂಬ ಅಭಿ ಪ್ರಾಯ ತಜ್ಞರದ್ದು. ಕೋವಿಡ್-19 ಬಗ್ಗೆ ಕಾಲಕಾಲಕ್ಕೆ ಸೂಚನೆ, ಸಲಹೆ ನೀಡುವ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದ ಮೇಲೆ ರಾಜ್ಯದಲ್ಲಿ ಪಾಸಿಟಿವ್ ಪ್ರಕರಣಗಳ ದರ ಶೇ.5ಕ್ಕಿಂತ ಕಡಿಮೆ ಬಂದ ಮೇಲೆ ಮಾತ್ರ ಮತ್ತು ಪಾಸಿಟಿವ್ ಸಂಖ್ಯೆ 5 ಸಾವಿರಕ್ಕಿಂತ ಕಡಿಮೆ ಬಂದ ಮೇಲೆ ಅನ್‍ಲಾಕ್ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಲಿದೆ.

ನಿನ್ನೆ ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ವಿರುದ್ಧ ಹೋರಾಡಲು ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗಗಳ ಬಗ್ಗೆ ಸೇಜ್ ಸಮ್ಮೇಳನವೊಂದನ್ನು ಆಯೋ ಜಿಸಿತ್ತು. ಆ ವೇಳೆ ಅನ್‍ಲಾಕ್ ಪ್ರಕ್ರಿಯೆ ಬಗ್ಗೆ ಕೂಡ ಪ್ರಸ್ತಾಪವಾಯಿತು. ಸರ್ಕಾರ ಅನ್‍ಲಾಕ್‍ಗೆ ಚಾಲನೆ ನೀಡುವಾಗ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳ ಬೇಕು ಎಂದು ಹೇಳಿದೆ. ಕಳೆದ ವರ್ಷವಾದರೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ನಿರ್ಬಂಧಗಳನ್ನು ಸಡಿಲಗೊಳಿಸಿತ್ತು, ಆದರೆ ಈ ವರ್ಷ ರಾಜ್ಯ ಸರ್ಕಾರವೇ ನಿಯಮ ರೂಪಿಸಬೇಕಿದೆ. ಇಲ್ಲಿ ಗಮನಹರಿಸಬೇಕಾದ ಅಂಶಗಳು ಕೆಫೆಟೇರಿಯಾ ಗಳು, ಪಬ್‍ಗಳು ಮತ್ತು ಬಾರ್‍ಗಳು, ಸಿನೆಮಾ ಹಾಲ್‍ಗಳು, ಶಾಪಿಂಗ್ ಮಾಲ್‍ಗಳು, ಕಚೇರಿಗಳು, ಕಾರ್ಖಾನೆಗಳು, ಧಾರ್ಮಿಕ ಕೇಂದ್ರಗಳು, ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಿರುವ ಮುಚ್ಚಿದ ಸ್ಥಳಗಳಲ್ಲಿ ಸೋಂಕಿನ ಅಪಾಯ ಹೆಚ್ಚಾಗಿರುತ್ತವೆ. ರಾಜಕೀಯ ರ್ಯಾಲಿಗಳು, ಜಾತ್ರೆಗಳು ಮತ್ತು ಹಬ್ಬಗಳಂತಹ ದೊಡ್ಡ ಸಭೆಗಳನ್ನು ತಪ್ಪಿಸಬೇಕು. ಸ್ಥಳಗಳನ್ನು ಅನ್ಲಾಕ್ ಮಾಡುವುದು ಹೇಗೆ ಎಂದು ನಾವು ಮತ್ತಷ್ಟು ನೋಡಬೇಕಾಗಿದೆ – 30%, 50%, 70% ಆಕ್ಯುಪೆನ್ಸಿ ಯೊಂದಿಗೆ. ಹೆಚ್ಚಿನ ಪಬ್‍ಗಳು ರಾತ್ರಿಯಿಡೀ ತೆರೆದಿರುವುದರಿಂದ ಮತ್ತು ಜನಸಂದಣಿ ಇರುವುದರಿಂದ ರಾತ್ರಿ ಕಫ್ರ್ಯೂ ಜಾರಿಗೆ ತರಬೇಕಾಗಿದೆ ಎನ್ನುತ್ತಾರೆ ರಾಜ್ಯ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಎಂ.ಕೆ. ಸುದರ್ಶನ್.

ಸಾರ್ವಜನಿಕ ಆರೋಗ್ಯದ ಭಾರತೀಯ ಸಂಸ್ಥೆಯ ಸಾಂಕ್ರಾಮಿಕ ತಜ್ಞ ಡಾ ಗಿರಿಧರ ಬಾಬು, ಬೆಂಗಳೂರಿನಲ್ಲಿ ಕೊರೊನಾ ಸಂಪರ್ಕಿತರ ಪತ್ತೆ ಮತ್ತು ಪರೀಕ್ಷೆ, ಪತ್ತೆ ಹಚ್ಚುವಿಕೆ ಕೆಲಸ ಸರಿಯಾಗಿ ನಡೆಯುತ್ತಿಲ್ಲ, ಈ ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ನಗರದಲ್ಲಿ ಸಿಬ್ಬಂದಿ ಕೊರತೆಯಿದೆ ಎನ್ನುತ್ತಾರೆ.

ಸಕ್ರಿಯ ಸಂಖ್ಯೆಗಳನ್ನು ತಗ್ಗಿಸಲು ಲಸಿಕೆ ನೀಡುವುದು ಮುಖ್ಯವಾಗುತ್ತದೆ. ಲಸಿಕೆ ಮತ್ತು ಸರಿಯಾದ ಕಂಟೈನ್‍ಮೆಂಟ್ ತಂತ್ರಗಳು ಮಾತ್ರ ಕೋವಿಡ್-19 ಅನ್ನು ನಿಗ್ರಹಿಸಲು ಬೇರೆ ದೇಶಗಳಿಗೆ ಸಹಾಯ ಮಾಡಿದವು. ಇದು ಕೇವಲ ಲಾಕ್‍ಡೌನ್ ಅಲ್ಲ. ನಾವು ಸಾಮೂಹಿಕ ವ್ಯಾಕ್ಸಿನೇಷನ್ ನಡೆಸಬೇಕಾಗಿದೆ. ನವೆಂಬರ್ ವೇಳೆಗೆ ಹೆಚ್ಚಿನ ಜನಸಂಖ್ಯೆಗೆ ಲಸಿಕೆ ನೀಡದಿದ್ದರೆ, ಮೂರನೇ ತರಂಗ ಖಂಡಿತವಾಗಿಯೂ ಬೆಂಗಳೂರಿಗೆ ಅಪ್ಪಳಿಸುತ್ತದೆ ಎನ್ನುತ್ತಾರೆ ಅವರು.

Translate »