ಮೈಸೂರು,ಏ.16(ಆರ್‍ಕೆ)-ಕೋವಿಡ್ -19 ಸೋಂಕು ಕಡಿಮೆಯಾಗಿ ನಿರ್ಬಂಧ ತೆರವುಗೊಳ್ಳುತ್ತಿದ್ದಂತೆಯೇ ಮೈಸೂರಲ್ಲಿ ನಿಯಮ ಉಲ್ಲಂಘಿಸುತ್ತಿರುವ ವಾಹನ ಸವಾರರ ವಿರುದ್ಧ ಸಂಚಾರ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
2022ರ ಜನವರಿ 1ರಿಂದ ಮಾರ್ಚ್ 31ರವರೆಗೆ ವಿವಿಧ ಸ್ವರೂಪದ ಒಟ್ಟು 3, 41,693 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾ ಲಯದಲ್ಲಿ ಪಾವತಿಸಿಕೊಂಡಿರುವ 17,48, 500 ರೂ. ಸೇರಿದಂತೆ ಒಟ್ಟು 1,10,25, 300 ರೂ. ದಂಡ ಸಂಗ್ರಹಿಸಲಾಗಿದೆ.
ಕಾರ್ಯಾಚರಣೆ ವೇಳೆ ಸ್ಥಳದಲ್ಲೇ 51,24,300 ರೂ. ದಂಡ ಸಂಗ್ರಹಿಸಲಾಗಿದೆ.
ಪ್ರಸಕ್ತ ಸಾಲಿನ 3 ತಿಂಗಳಲ್ಲಿ 5,612 ಹೆಲ್ಮೆಟ್ ಧರಿಸದೇ ವಾಹನ ಚಾಲನೆ, 1,024 ಸೀಟ್ ಬೆಲ್ಟ್ ಧರಿಸದಿರುವುದು, 3,629 ಹಿಂಬದಿ ಸವಾರ ಹೆಲ್ಮೆಟ್ ಧರಿಸದೆ ಇರು ವುದು, 3,27,365 ಎಫ್‍ಟಿವಿಆರ್ ಪ್ರಕರಣ ಸೇರಿದಂತೆ ಅಜಾಗರೂಕ ಚಾಲನೆ, ಅತೀ ವೇಗ, ಮದ್ಯಪಾನ ಮಾಡಿ ವಾಹನ ಚಾಲನೆ, ಮೊಬೈಲ್ ಬಳಸುತ್ತಾ ವಾಹನ ಚಾಲನೆ, ಸಿಗ್ನಲ್ ಜಂಪಿಂಗ್, ಫುಟ್‍ಪಾತ್ ಮೇಲೆ ವಾಹನ ಚಾಲನೆ, ಡಿಫೆಕ್ಟಿವ್ ಸೈಲನ್ಸರ್, ಸಮವಸ್ತ್ರ ಧರಿಸದೇ ವಾಹನ ಚಾಲನೆ, ಜಿಗ್‍ಜಾಗ್ ಡ್ರೈವಿಂಗ್, ತ್ರಿಬಲ್ ರೈಡಿಂಗ್ ಸೇರಿದಂತೆ ಒಟ್ಟು 40 ಬಗೆಯ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ 3,41,693 ಪ್ರಕರಣಗಳನ್ನು ಮೈಸೂರು ನಗರದಲ್ಲಿ ದಾಖಲಿಸಲಾಗಿದೆ. ಅದೇ ರೀತಿ ಕಳೆದ ವರ್ಷ 2021ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ 12,28,285 ಪ್ರಕರಣ ದಾಖ ಲಿಸಿ 5,77,32,650 ರೂ. ದಂಡ ಸಂಗ್ರಹಿ ಸಲಾಗಿತ್ತು. 2020ನೇ ಸಾಲಿನಲ್ಲಿ 10,90, 841 ಪ್ರಕರಣ ದಾಖಲಿಸಲಾಗಿದ್ದು, ಒಟ್ಟು 8,99,41,900 ರೂ. ದಂಡ ವಸೂಲಿ ಮಾಡಲಾಗಿದೆ. ಪ್ರಸಕ್ತ ಸಾಲಿನ 3 ತಿಂಗ ಳಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ 243 ಮಂದಿ ವಿರುದ್ಧ ಪ್ರಕರಣ ದಾಖಲಿಸಿರುವ ಸಂಚಾರ ಪೊಲೀ ಸರು, ಕೋವಿಡ್ ಪರಿಸ್ಥಿತಿಯಿಂದಾಗಿ ಕಾರ್ಯಾಚರಣೆ ನಡೆಸದಿರುವುದರಿಂದ ಕಳೆದ ವರ್ಷ ಕೇವಲ 9 ಹಾಗೂ 2020 ರಲ್ಲಿ 315 ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಕೋವಿಡ್ ನಿರ್ಬಂಧಗಳು ಸಂಪೂರ್ಣ ತೆರವುಗೊಂಡಿರುವುದರಿಂದ ಹಾಗೂ ಸೋಂಕಿನ ಪ್ರಕರಣಗಳೂ ಕಂಡುಬರು ತ್ತಿಲ್ಲ ವಾದ ಕಾರಣ, ಮೈಸೂರಲ್ಲಿ ನಿತ್ಯ ರಾತ್ರಿ ವೇಳೆ ಸಂಚಾರ ಠಾಣೆ ಪೊಲೀಸರು ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಿ ಪ್ರಕರಣ ದಾಖಲಿಸುತ್ತಿದ್ದಾರಲ್ಲದೆ, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧವೂ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.