ಸೆಸ್ಕ್ ಜಾಗೃತ ದಳದ ಪೊಲೀಸರಿಂದ  ವಿದ್ಯುತ್ ಕಳವು ಪ್ರಕರಣಗಳ ತನಿಖೆ
ಮೈಸೂರು

ಸೆಸ್ಕ್ ಜಾಗೃತ ದಳದ ಪೊಲೀಸರಿಂದ ವಿದ್ಯುತ್ ಕಳವು ಪ್ರಕರಣಗಳ ತನಿಖೆ

April 17, 2022

ಮೈಸೂರು,ಏ.15(ಆರ್‍ಕೆ)-ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಜಾಗೃತ ದಳ (ಗಿigiಟಚಿಟಿಛಿe Wiಟಿg)ದ ಪೊಲೀಸರು ಕಾರ್ಯಾಚರಣೆ ತೀವ್ರ ಗೊಳಿಸಿದ್ದು, ವಿದ್ಯುತ್ ಕಳವು ಪ್ರಕರಣಗಳ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಮೈಸೂರಿನ ಸೆಸ್ಕ್ ವಿಜಿಲನ್ಸ್ ವಿಂಗ್ ಎಸ್ಪಿ ವ್ಯಾಪ್ತಿಗೆ ಬರುವ ಮೈಸೂರು, ಚಾಮರಾಜ ನಗರ, ಕೊಡಗು, ಹಾಸನ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ರುವ ಜಾಗೃತ ದಳದ ಠಾಣೆಗಳ ಇನ್ಸ್‍ಪೆಕ್ಟರ್‍ಗಳು, ಸೆಸ್ಕ್ ತಾಂತ್ರಿಕ ಸಿಬ್ಬಂದಿಗಳ ಸಹಯೋಗದಲ್ಲಿ ಜಂಟಿ ಕಾರ್ಯಾ ಚರಣೆ ನಡೆಸಿ ಕೈಗಾರಿಕೆ, ಉದ್ದಿಮೆಗಳು, ವಾಣಿಜ್ಯ ಚಟು ವಟಿಕೆ ಘಟಕದಂತಹ ಅತೀ ಹೆಚ್ಚು ವಿದ್ಯುತ್ ಬಳಸುವ ಘಟಕಗಳ ಮೇಲೆ ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ.

ಗ್ರಾಹಕರು ಮಂಜೂರು ಮಾಡಿಸಿ ಕೊಂಡಿರುವ ಸಾಮಥ್ರ್ಯ ಬಳಸು ತ್ತಿರುವ ವಿದ್ಯುತ್ ಪ್ರಮಾಣ ಹಾಗೂ ಮಾಸಿಕ ಬಿಲ್ ಪಾವತಿಸುತ್ತಿರುವ ಶುಲ್ಕ ಇತ್ಯಾದಿಗಳ ಬಗ್ಗೆ ಪರಿಶೀಲಿಸುತ್ತಿರುವುದರಿಂದ ಕೆಲವರು ಅನ್ಯ ಮಾರ್ಗ ದಿಂದ ವಿದ್ಯುತ್ ಸಂಪರ್ಕ ಪಡೆದು ಅಕ್ರಮವಾಗಿ ಬಳಕೆ ಮಾಡುವ ಮೂಲಕ ನಿಗಮಕ್ಕೆ ವಂಚನೆ ಮಾಡುತ್ತಿರು ವುದು ಪತ್ತೆಯಾಗುತ್ತಿದೆ. ವಿದ್ಯುತ್ ಕಳ್ಳತನವಾಗುತ್ತಿರು ವುದನ್ನು ಸಾಕ್ಷಿ ಸಮೇತ ಪತ್ತೆ ಮಾಡಿದಾಗ ತಪ್ಪಿನ ಅರಿ ವಾಗುತ್ತಿದ್ದಂತೆಯೇ ಕಾನೂನಾತ್ಮಕ ತೊಡಕು ನಿಭಾಯಿ ಸುವುದರಿಂದ ತಪ್ಪಿಸಿಕೊಳ್ಳಲು ಬಹುತೇಕ ಗ್ರಾಹಕರು ಸ್ಥಳದಲ್ಲೇ ದಂಡ ಪಾವತಿಸಿ ಎಫ್‍ಐಆರ್ ಆಗದಂತೆ ಎಚ್ಚರ ವಹಿಸುತ್ತಿರುವುದು ಕಂಡು ಬರುತ್ತಿದೆ.

ಶೇ.60ಕ್ಕೂ ಹೆಚ್ಚು ಮಂದಿ ದಂಡ ಪಾವತಿ ಸುತ್ತಿರುವುದ ರಿಂದ ಎಫ್‍ಐಆರ್ ದಾಖಲಾಗುವುದು ತಪ್ಪಿದಂತಾಗಿ, ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುವುದು ತಪ್ಪುತ್ತಿದೆ. ಇತ್ತೀಚೆಗೆ ನಡೆದ ಲೋಕ ಅದಾಲತ್‍ನಲ್ಲಿ ನ್ಯಾಯಾಧೀಶರೇ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ದಂಡ ಪಾವತಿಸಲು ನಿರಾಕರಿಸಿ, ವಿದ್ಯುತ್ ಕಳವು ಸಂಬಂಧ ತಕರಾರು ಎತ್ತಿದ ಗ್ರಾಹಕರ ವಿರುದ್ಧ ಎಫ್‍ಐಆರ್ ದಾಖಲಿಸುವ ಪೊಲೀಸರು, ತನಿಖೆ ನಡೆಸಿ, ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾ ರೋಪಣಾ ಪಟ್ಟಿ ಸಲ್ಲಿಸುವರು ಎಂದು ಮೈಸೂರಿನ ಸೆಸ್ಕ್ ಜಾಗೃತ ದಳದ ಡಿವೈಎಸ್ಪಿ ಅನ್ಸರ್ ಅಲಿ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ತಮ್ಮ ಕಾರ್ಯಾಚರಣೆಯಿಂದ ಅನಧಿಕೃತವಾಗಿ ಸಂಪರ್ಕ ಪಡೆದು ವಿದ್ಯುತ್ ಕಳ್ಳತನ ವಾಗುವುದು ಪತ್ತೆಯಾದಂತಾಗಿ, ಸೆಸ್ಕ್‍ಗೆ ನಷ್ಟ ಉಂಟಾ ಗುವುದು ತಪ್ಪುತ್ತದೆಯಲ್ಲದೆ, ಈ ಬಗ್ಗೆ ಜಾಗೃತಿ ಮೂಡಿ ಬಳಸಿದ ವಿದ್ಯುತ್‍ಗೆ ದರ ಪಾವತಿಯಾಗಿ ನಿಗಮಕ್ಕೆ ವರಮಾನವೂ ಹೆಚ್ಚುತ್ತದೆ ಎಂದು ತಿಳಿಸಿದರು.

Translate »