ಹುಲಿ ಸಂರಕ್ಷಿತ ಯೋಜನೆಗೆ 380 ಕೋಟಿ ರೂ ಮೀಸಲು
ಮೈಸೂರು

ಹುಲಿ ಸಂರಕ್ಷಿತ ಯೋಜನೆಗೆ 380 ಕೋಟಿ ರೂ ಮೀಸಲು

April 10, 2023

ಮೈಸೂರು, ಏ.9(ಜಿಎ)-ಹುಲಿ ಸಂರಕ್ಷಿತ ಯೋಜನೆಗೆ 2014ರಲ್ಲಿ ಕೇವಲ 185 ಕೋಟಿ ರೂಪಾಯಿಗಳನ್ನು ಮೀಸಲಿಡ ಲಾಗಿತ್ತು. ಆದರೆ, ಈಗ ಬಜೆಟ್‍ನಲ್ಲಿ 380 ಕೋಟಿ ರೂ.ಗಳನ್ನು ನೀಡುವ ಮೂಲಕ ಹುಲಿ ಸಂರಕ್ಷಣೆಗೆ ಹಣವನ್ನು ದ್ವಿಗುಣಗೊಳಿಸಲಾಗಿದೆ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಸಚಿವ ಭೂಪೇಂದ್ರ ಯಾದವ್ ತಿಳಿಸಿದರು.

ಹುಲಿ ಯೋಜನೆಯ 50ನೇ ವರ್ಷಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ ಆವರಣದ ಕಾವೇರಿ ಸಭಾಂ ಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಾ ಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರ ಸರಕಾರ ಬಜೆಟ್‍ನಲ್ಲಿ ನೀಡಿರುವ ವಿಶೇಷ ಅನುದಾನ ಬಳಕೆ ಮಾಡಿ ಕೊಂಡು ಹುಲಿ ಸಂರಕ್ಷಣೆಗೆ ಎದುರಾ ಗಿರುವ ಸಮಸ್ಯೆಗಳನ್ನು ಜಾಗತಿಕವಾಗಿ ಎಲ್ಲರೂ ಒಟ್ಟಾಗಿ ಪರಿಹರಿಸಬೇಕಿದೆ. ಕೇಂದ್ರ ಸರಕಾರ ಬಜೆಟ್‍ನಲ್ಲಿ 380 ಕೋಟಿ ರೂ.ಗಳನ್ನು ನೀಡಿದ್ದು, ಹುಲಿ ಜಾತಿಗೆ ಸೇರಿದ ಪ್ರಾಣಿಗಳನ್ನು ಹೆಚ್ಚಾಗಿ ಹೊಂದಿರುವ ರಾಷ್ಟ್ರಗಳ ಸಹಕಾರ ಹಾಗೂ ಸಲಹೆ ಪಡೆದು ಸಮಸ್ಯೆಗಳನ್ನು ಪರಿಹರಿಸಲು ಮುಂದಾಗೋಣ ಎಂದರು.

1973ರಲ್ಲಿ ಹುಲಿ ಯೋಜನೆ ಪ್ರಾರಂ ಭಿಸಿದ್ದಾಗ ಕೇವಲ 9 ಹುಲಿ ಸಂರಕ್ಷಿತ ಪ್ರದೇಶಗಳು ಮಾತ್ರ ಇದ್ದವೂ, ಕಳೆದ ಐದು ದಶಕಗಳಲ್ಲಿ ಅವು 53 ಹುಲಿ ಸಂರಕ್ಷಿತ ಪ್ರದೇಶಗಳಾಗಿ ಬೆಳೆದಿವೆ. ಇದು ಪ್ರಮುಖ ಜಾತಿಗಳಿಗೆ ಮಾತ್ರವಲ್ಲದೆ ಇತರ ಅಳಿವಿನಂಚಿನಲ್ಲಿರುವ ಸಸ್ಯಗಳು ಮತ್ತು ಇತರೆ ಪ್ರಾಣಿಗಳ ಸುರಕ್ಷಿತ ಸ್ವರ್ಗವಾಗಿದೆ. ಈ ಹಿಂದೆ ಹುಲಿ ಸಂರಕ್ಷಿತ ಯೋಜನೆಗೆ 2014ರಲ್ಲಿ ಕೇವಲ 185 ಕೋಟಿ ರೂಪಾಯಿ ಗಳನ್ನು ಮೀಸಲಿಡಲಾಗಿತ್ತು. ಆದರೆ, ಈಗ ಬಜೆಟ್‍ನಲ್ಲಿ 380 ಕೋಟಿ ರೂ.ಗಳನ್ನು ನೀಡುವ ಮೂಲಕ ಹುಲಿ ಸಂರಕ್ಷಣೆಗೆ ಹಣವನ್ನು ದ್ವಿಗುಣಗೊಳಿಸಲಾಗಿದೆ ಎಂದರು.

ಸುಮಾರು 1.3 ಶತಕೋಟಿ ಜನರನ್ನು ಹೊಂದಿರುವ ಮತ್ತು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಯನ್ನು ಹೊಂದಿರುವ ದೇಶವು ಹುಲಿ ಸಂತತಿಯನ್ನು ಉಳಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಭಾರತವು ಪ್ರಪಂಚದಲ್ಲಿ ಹುಲಿ ಸಂರಕ್ಷಣೆಗೆ ಶೇ.70 ರಷ್ಟು ಬೆಂಬಲಿಸಿದೆ. ಹುಲಿಗಣತಿಯ ವಾರ್ಷಿಕ ದರದಲ್ಲಿ ಶೇ.6 ರಷ್ಟು ಹೆಚ್ಚಾಗಿದ್ದು, ಹುಲಿ ಬೇಟೆಯನ್ನು ಶೂನ್ಯಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಹುಲಿ ಯೋಜನೆಯು ಅಳಿವಿನಂಚಿನಲ್ಲಿ ರುವ ಹುಲಿಗಳ ಸಂರಕ್ಷಣೆ ಮತ್ತು ಅವುಗಳ ಸಂತತಿ ಹೆಚ್ಚಿಸುವುದು, ಆವಾಸ ಸ್ಥಾನದ ರಕ್ಷಣೆ, ಹುಲಿ ಸ್ಥಿತಿ ಗತಿ ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಅದರಂತೆ ಗುಜರಾತ್‍ನಲ್ಲಿರುವ ಸೌರಾಷ್ಟ್ರ ಏಷ್ಯಾಟಿಕ್ ಸಿಂಹಗಳ ಏಕೈಕ ನೆಲೆಯಾಗಿದ್ದು, ದೇಶದ ಹೆಮ್ಮೆಯೂ ಆಗಿದೆ. ಸಿಂಹಗಳನ್ನು ರಕ್ಷಿಸಲು ಮತ್ತು ಅವುಗಳ ಸಂರಕ್ಷಣೆಯನ್ನು ಮತ್ತಷ್ಟು ಬಲಪಡಿಸಲು, ಕೇಂದ್ರ ಸರಕಾರ ಆಗಸ್ಟ್ 2020ರಲ್ಲಿ ಸಿಂಹ ಸಂರಕ್ಷಿತ ಯೋಜನೆ ಪ್ರಾರಂಭಿಸಿದೆ. ಒಂದು ಕಾಲಘಟ್ಟದಲ್ಲಿ 20ಕ್ಕಿಂತ ಕಡಿಮೆ ಇದ್ದ ಸಿಂಹಗಳ ಸಂಖ್ಯೆ, ಪ್ರಸ್ತುತ 700 ರಷ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು.

2014ರಲ್ಲಿ 7ಸಾವಿರವಿದ್ದ ಚಿರತೆ ಸಂಖ್ಯೆ, 2019 ವೇಳೆ 12 ಸಾವಿರ ಆಗಿದೆ. ಇತ್ತೀಚಿನ ಗಣತಿ ನಡೆಯುತ್ತಿದೆ. ಚಿರತೆಯನ್ನು ಭಾರತದಲ್ಲಿ ವನ್ಯಜೀವಿ (ರಕ್ಷಣೆ) ಕಾಯಿದೆಯ ಶೆಡ್ಯೂಲ್ ಐ ಅಡಿಯಲ್ಲಿ ಪಟ್ಟಿಮಾಡ ಲಾಗಿದೆ. ಈ ಮೂಲಕ ಅವುಗಳಿಗೆ ಅತ್ಯುನ್ನತ ಮಟ್ಟದ ರಕ್ಷಣೆಯನ್ನು ಒದಗಿಸಲಾಗುತ್ತಿದೆ. ಹಾಗೇ ಕೇಂದ್ರ ಸರಕಾರ ಹಿಮ ಚಿರತೆ ಉಳಿವಿಗೆ ಶ್ರಮಿಸುತ್ತಿದೆ. ಹಿಮಾಲಯದ ಮೇಲ್ಭಾಗದಲ್ಲಿ ಹಿಮ ಚಿರತೆ ಮತ್ತು ಅದರ ಆವಾಸಸ್ಥಾನ ವನ್ನು ರಕ್ಷಿಸಲು ನಮ್ಮ ಪ್ರಾಜೆಕ್ಟ್ ‘ಸ್ನೋ ಲೆಪರ್ಡ್’ ಪ್ರಾರಂಭಿಸಿದೆ. ಭಾರತವು ಇತ್ತೀಚೆಗೆ 12 ಹಿಮ ಚಿರತೆಯನ್ನು ವನ್ಯಜೀವಿ (ರಕ್ಷಣೆ) ಕಾಯಿದೆಯ ಶೆಡ್ಯೂಲ್ ಐ ಅಡಿಯಲ್ಲಿ ಪಟ್ಟಿಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹುಲಿ ಸಂರಕ್ಷಣೆ ಯಲ್ಲಿ ತೊಡಗಿಸಿಕೊಂಡಿರುವ 19 ದೇಶಗಳ ಅರಣ್ಯ ಖಾತೆ ಸಚಿವರು ತಮ್ಮ ದೇಶದಲ್ಲಿ ಹುಲಿ ಸಂರಕ್ಷಣೆಗೆ ಕೂಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿದರು. ಅರಣ್ಯ ತಜ್ಞರು ಮತ್ತು ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Translate »