ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ  ಸಾರ್ವಜನಿಕರ ಪ್ರವೇಶ ನಿರ್ಬಂಧ
ಮೈಸೂರು

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ

April 10, 2023

ಮೈಸೂರು,ಏ.9(ಎಂಟಿವೈ)- ಹುಲಿ ಸಮೀಕ್ಷಾ ವರದಿ ಬಿಡುಗಡೆ ಮಾಡಲು ಆಗಮಿಸಿದ್ದ ಪÀ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ಪ್ರವೇಶ ನಿರ್ಬಂಧಿಸಿದ್ದರಿಂದ ಸಾರ್ವಜನಿಕರು ನಿರಾಸೆ ಅನುಭವಿಸಿದರು. ಮೈಸೂರಿನ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2022ರ ಹುಲಿ ಗಣತಿ ವರದಿಯನ್ನು ಪ್ರಧಾನಿ ಬಿಡುಗಡೆಗೊಳಿಸಿದರು. ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್, ಕೇಂದ್ರದ ಪರಿಸರ ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಹೊರತು ಪಡಿಸಿ ಯಾರೂ ವೇದಿಕೆಯಲ್ಲಿ ಇರಲಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಆಹ್ವಾನಿತರು, ವಿದೇಶಗಳ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿತ್ತು. ಇವರನ್ನು ಹೊರತು ಪಡಿಸಿದರೆ ಯಾರೂ ಇರಲಿಲ್ಲ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪ್ರಧಾನಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರದಂತೆ ಪಾಲ್ಗೊಳ್ಳುವ ಮುಖ್ಯ ಮಂತ್ರಿ, ಸಚಿವರು, ಶಾಸಕರು, ಸಂಸದರು, ಹಿರಿಯ ಅಧಿಕಾರಿಗಳ ದಂಡೂ ಕಾರ್ಯಕ್ರಮ ದಿಂದ ದೂರ ಉಳಿಯಬೇಕಾಯಿತು. ಸಾರ್ವಜನಿಕರಿಗೂ ಪ್ರವೇಶ ಇರಲಿಲ್ಲ.

ವಿಧಾನಸಭಾ ಚುನಾವಣೆಯಿಂದಾಗಿ ಮೈಸೂರು ಸೇರಿದಂತೆ ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿ ಇದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಆಯೋಗದ ಅನುಮತಿ ಪಡೆದು ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಸ್ಥಳೀಯ ಜನಪ್ರತಿನಿಧಿಗಳು, ರಾಜಕಾರಣಿಗಳಿಗೆ ಅವಕಾಶ ಇರಲಿಲ್ಲ.

ಸವಾರರ ಪರದಾಟ: ಪ್ರಧಾನಮಂತ್ರಿ ವಾಸ್ತವ್ಯ ಹೂಡಿದ್ದ ರ್ಯಾಡಿಷನ್ ಬ್ಲ್ಯೂ ಹೋಟೆಲ್, ಸಂಚರಿಸಲಿರುವ ಪ್ರಮುಖ ರಸ್ತೆಗಳು, ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಿರುವ ಓವೆಲ್ ಮೈದಾನ, ಕಾರ್ಯಕ್ರಮ ನಡೆಯಲಿರುವ ಘಟಿಕೋತ್ಸವ ಭವನದ ಸುತ್ತಮುತ್ತ ಹಾಗೂ ಪ್ರಮುಖ ಜಂಕ್ಷನ್‍ಗಳಲ್ಲಿ ಭಾರಿ ಬಂದೋಬಸ್ತ್ ಮಾಡಲಾಗಿತ್ತು. ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿತ್ತು. ಅರೆಸೇನಾ ಪಡೆಯೊಂದಿಗೆ ನಗರ ಸಶಸ್ತ್ರ ಮೀಸಲು ಪಡೆ, ಕಮಾಂಡೊ ಪಡೆಯೊಂದಿಗೆ ಸಿವಿಲ್ ಮತ್ತು ಸಂಚಾರ ಪೆÇಲೀಸರು ಸೇರಿದಂತೆ ಸಾವಿರಕ್ಕೂ ಹೆಚ್ಚು ಪೆÇಲೀಸರು ಭದ್ರತೆಗೆ ನಿಯೋಜಿಸಲಾಗಿತ್ತು. ಕೆಲವೆಡೆ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರಕ್ಕೆ ನಿಬರ್ಂಧ ವಿಧಿಸಲಾಗಿತ್ತು. ವಾಹನಗಳ ಸಂಚಾರ ಮಾರ್ಗವನ್ನೂ ಬದಲಿಸಲಾಗಿತ್ತು. ಇದು ಸಾರ್ವಜನಿಕರಿಗೆ, ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿತು.

ಜನರಿಂದ ಅಸಮಾದಾನ : ಹಿನಕಲ್ ಜಂಕ್ಷನ್‍ನಿಂದ ಮೆಟ್ರೋಪೆÇೀಲ್ ವೃತ್ತದ ವರೆಗಿನ ಹುಣಸೂರು ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಹೀಗಾಗಿ, ಬದಲಿ ಮಾರ್ಗದಲ್ಲಿ ವಾಹನಗಳು ಸುತ್ತಿ ಬಳಸಿ ಬರುವಂತಾಯಿತು. ರಸ್ತೆಗಳು ಬಂದ್ ಆಗಿರುವುದು ಬಹಳಷ್ಟು ಸಾರ್ವಜನಿರಿಗೆ ತಿಳಿದಿರಲಿಲ್ಲ. ಅವರನ್ನು ಪೆÇಲೀಸರು ತಡೆದಿದ್ದರಿಂದ ಗಲಿಬಿಲಿಗೊಂಡರು. ಗೊಣಗುತ್ತಲೇ ಬೇರೆ ದಾರಿಯಲ್ಲಿ ಸಾಗಿದರು.
ಪರದಾಡಿದ ಚಿಣ್ಣರು: ಕುಕ್ಕರಹಳ್ಳಿ ಮುಖ್ಯದ್ವಾರದಿಂದ ಕಲಾಮಂದಿರದ ವರೆಗಿನ ರಸ್ತೆಯನ್ನೂ ಬಂದ್ ಮಾಡಲಾಗಿತ್ತು. ಇದರಿಂದ ರಂಗಾಯಣದಲ್ಲಿ ಆಯೋಜಿಸಿದ್ದ `ಕಿಶೋರೋಲ್ಲಾಸ’ ಚಿಣ್ಣರಮೇಳಕ್ಕೆ ತೆರಳುತ್ತಿದ್ದ ಮಕ್ಕಳಿಗೆ ತೊಂದರೆ ಆಯಿತು.

Translate »