ನ್ಯಾಷನಲ್ ಕಾರ್ಪೋರೇಟ್ ಲಾ ಆಫ್ ಮೂಟ್  ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
ಮೈಸೂರು

ನ್ಯಾಷನಲ್ ಕಾರ್ಪೋರೇಟ್ ಲಾ ಆಫ್ ಮೂಟ್ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

April 10, 2023

ಮೈಸೂರು, ಏ.9(ಎಸ್‍ಪಿಎನ್)- ರಾಷ್ಟ್ರ ಮಟ್ಟದ ನ್ಯಾಷನಲ್ ಕಾರ್ಪೋರೇಟ್ ಲಾ ಮೂಟ್ ಸ್ಪರ್ಧೆ-2022 ಮತ್ತು ನ್ಯಾಷ ನಲ್ ಕಾರ್ಪೋರೇಟ್ ಲಾ ಜಡ್ಜ್‍ಮೆಂಟ್ ರೈಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ `ನಿರ್ಮ ಯೂನಿವರ್ಸಿಟಿಯ `ಇನ್ಸ್‍ಟಿ ಟ್ಯೂಟ್ ಆಫ್ ಲಾ’ ತಂಡ(ಸಿಎಲ್13)ಕ್ಕೆ ಪ್ರಥಮ ಬಹುಮಾನ ಹಾಗೂ ಗ್ರೆಟರ್ ನೋಯ್ಡಾ `ಲಾಯ್ಡ್ ಸ್ಕೂಲ್ ಆಫ್ ಲಾ’ ತಂಡಕ್ಕೆ `ರನ್ನರ್ ಅಪ್’ ಪ್ರಶಸ್ತಿ(ಸಿಎಲ್7)ಯನ್ನು ಹೈಕೋರ್ಟ್ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ವಿತರಿಸಿದರು.

ಮೈಸೂರಿನ ಜೆಎಸ್‍ಎಸ್ ಲಾ ಕಾಲೇಜು ಆವರಣದ ಸಿಲ್ವರ್ ಜೂಬಿಲಿ ಹಾಲ್‍ನಲ್ಲಿ ಜೆಎಸ್‍ಎಸ್ ಲಾ ಕಾಲೇಜು ಮತ್ತು ಚೆನ್ನೈನ ಸುರಾನಾ ಅಂಡ್ ಸುರಾನಾ ಅಂತರ ರಾಷ್ಟ್ರೀಯ ಅಟಾರ್ನಿಸ್‍ರವರ ಸಹಯೋಗ ದೊಂದಿಗೆ ನಡೆದ ರಾಷ್ಟ್ರ ಮಟ್ಟದ ಅಂತರ ಕಾನೂನು ಕಾಲೇಜು ಸ್ಪರ್ಧೆಯಲ್ಲಿ ಭಾಗ ವಹಿಸಿ, ವಿಜೇತರಾದವರಿಗೆ ಹೈಕೋರ್ಟ್ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‍ಪ್ರಸಾದ್ ವಿತರಿಸಿದರು. ರಾಜೀವ್ ಗಾಂಧಿ ನ್ಯಾಷ ನಲ್ ಯೂನಿವರ್ಸಿಟಿ ಆಫ್ ಲಾ ತಂಡ ಮೂರನೇ(ಸಿಎಲ್10) ಸ್ಥಾನ ಪಡೆದ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದರು.

ನಂತರ ಮಾತನಾಡಿದ ಅವರು, ಇತ್ತೀ ಚಿನ ದಿನಗಳಲ್ಲಿ ಕಾನೂನು ಅಧ್ಯಯನ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ದೊರಕುತ್ತಿವೆ. ಅಲ್ಲದೆ, ಕಾನೂನು ಅಧ್ಯಯನ ಮಾಡುವ ಸಂದರ್ಭ ದಲ್ಲಿ ವಕೀಲ ವೃತ್ತಿಯ ಕಲಿಕೆಗಳನ್ನು ಹಿರಿಯ ಮಾರ್ಗದರ್ಶನದ ಮೂಲಕ ಕಲಿತುಕೊಳ್ಳಲು ಪ್ರಯತ್ನಿಸಬೇಕು ಎಂದು ವಿದ್ಯಾರ್ಥಿಗಳು ಕಿವಿ ಮಾತು ಹೇಳಿದರು.

ವಿದ್ಯಾರ್ಥಿ ದಿಸೆಯಲ್ಲಿ ಸಮಯ ಪ್ರಜ್ಞೆ, ಶಿಸ್ತು, ಅಧ್ಯಯನ ಶೀಲತೆ ಅಳವಡಿಸಿಕೊಳ್ಳು ವುದರಿಂದ ವಕೀಲ ವೃತ್ತಿಯನ್ನು ಗಂಭೀರ ಪರಿಗಣಿಸಲು ಸಾಧ್ಯವಿದೆ. ಅಂತೆಯೇ ಕಕ್ಷಿ ದಾರರಿಗೆ ನ್ಯಾಯ ಒದಗಿಸ ಬೇಕಾದರೆ, ಪ್ರಕರಣ ಸಂಬಂಧ ಹೆಚ್ಚಿನ ಅಧ್ಯಯನ ನಡೆಸಿಕೊಂಡು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಯುವ ವಕೀಲರು ಪ್ರಯ ತ್ನಿಸಬೇಕು. ಇದರಿಂದ ನೊಂದ ಜನರಿಗೆ ನ್ಯಾಯ ಕೊಡಿಸಲು ಸಾಧ್ಯವಿದೆ. ಈ ಗುಣ ಗಳನ್ನು ಯುವ ವಕೀಲರು ವಿದ್ಯಾರ್ಥಿ ದಿಸೆಯಿಂದಲೇ ಕಲಿತುಕೊಂಡರೆ ಉತ್ತಮ ಎಂದು ಕಿವಿಮಾತು ಹೇಳಿದರು.

ಕರ್ನಾಟಕದ ಮಾಜಿ ಅಡ್ವೋಕೇಟ್ ಜನರಲ್ ಉದಯ ಹೊಳ್ಳ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ದೇಶಾಭಿ ಮಾನ ಮೂಡಿಸಲು ಶಿಕ್ಷಕರ ಪಾತ್ರ ಅತೀ ಮುಖ್ಯ. ಇಂಜಿನಿಯರ್, ಡಾಕ್ಟರ್, ವಕೀಲ ವೃತ್ತಿಯಲ್ಲೂ ಉತ್ತಮ ಹಣ ಗಳಿಕೆಯಿದೆ. ಇಂದು ನಾವು ಗಳಿಸಿದ ಹಣಕ್ಕೆ ಮೌಲ್ಯವಿಲ್ಲ. ಹಿಂದಿನ ಕಾಲದಲ್ಲಿ ಸಣ್ಣ ಮೊತ್ತದ ಹಣ ಗಳಿಸಿ ದರೂ ಅದರಲ್ಲಿ ತೃಪ್ತಿ ಇರುತ್ತಿತ್ತು ಎಂದರು.

ಈ ವೇಳೆ ಜೋಧ್‍ಪುರ ನ್ಯಾಷನಲ್ ಲಾ ವಿವಿ ವಿದ್ಯಾರ್ಥಿ ಅನಿಲ್ ಪಟೇಲ್ (ಸಿಎಲ್15) `ಬೆಸ್ಟ್ ಸ್ಟೂಡೆಂಟ್ ಅಡ್ವೋ ಕೇಟ್-1’ ಪ್ರಶಸ್ತಿ 10 ಸಾವಿರ ರೂ. ನಗದು ಬಹುಮಾನ, ಛತೀಸ್‍ಘಡ್ ಅಮೆಟಿ ವಿವಿಯ ವಿದ್ಯಾರ್ಥಿ(ಸಿಎಲ್6) ಹಿಮಾನಿ ಬೈದ್ `ಬೆಸ್ಟ್ ಸ್ಟೂಡೆಂಟ್ ಅಡ್ವೋಕೇಟ್-2’ ಪ್ರಶಸ್ತಿ, 5 ಸಾವಿರ ರೂ. ನಗದು, ಗ್ರೆಟರ್ ನೋಯ್ಡಾ ಲಾಯ್ಡ್ ಸ್ಕೂಲ್ ಆಫ್ ಲಾ ವಿದ್ಯಾರ್ಥಿ(ಸಿಎಲ್7) ಅದ್ವೈತ್ ಉಪ ದ್ಯಾಯ `ಬೆಸ್ಟ್ ಸ್ಟೂಡೆಂಟ್ ಅಡ್ವಕೇಟ್-3’, ಛತೀಸ್‍ಘಡ್ ಅಮೆಟಿ ವಿವಿಯ ವಿದ್ಯಾರ್ಥಿ(ಸಿಎಲ್6) ಡಿಂಪಲ್ `ಬೆಸ್ಟ್ ಸ್ಟೂಡೆಂಟ್ ಅಡ್ವೋಕೇಟ್-4’ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಮೊಹಾಲಿ ಆರ್ಮಿ ಇನ್ಸ್‍ಟಿಟ್ಯೂಟ್ ಲಾ ಕಾಲೇಜು ತಂಡಕ್ಕೆ `ಬೆಸ್ಟ್ ಮೆಮೊರಿಯಲ್ -1’ ಪ್ರಶಸ್ತಿ, ಮದುರೈ ಸರ್ಕಾರಿ ಲಾ ಕಾಲೇಜು ತಂಡಕ್ಕೆ `ಬೆಸ್ಟ್ ಮೆಮೊರಿ ಯಲ್-2’, ಮುಂಬೈ ಸರ್ಕಾರಿ ಲಾ ಕಾಲೇಜು ತಂಡಕ್ಕೆ `ಬೆಸ್ಟ್ ಮೆಮೊರಿಯಲ್-3’, ಕ್ರೈಸ್ಟ್ ಲಾ ಯೂನಿವರ್ಸಿಟಿ ತಂಡಕ್ಕೆ `ಬೆಸ್ಟ್ ಮೆಮೊರಿಯಲ್-4’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಜೆಎಸ್‍ಎಸ್ ಲಾ ಕಾಲೇಜು ಪ್ರೊ.ಕೆ.ಎಸ್.ಸುರೇಶ್, ಚೆನ್ನೈ ಎಸ್‍ಎಸ್ ಐಎ ಅಡ್ವೋಕೇಟ್ ಪ್ರೀತಂ ಸುರಾನಾ, ಜೆಎಸ್‍ಎಸ್ ಲಾ ಕಾಲೇಜು ಪ್ರಾಂಶು ಪಾಲ ಡಾ.ಎಸ್.ನಟರಾಜ್, ಜಿಎಸ್‍ಟಿ ಮೈಸೂರು ವಿಭಾಗದ ಕಮಿಷ್ನರ್ ವೈಸಿಎಸ್ ಸ್ವಾಮಿ ಉಪಸ್ಥಿತರಿದ್ದರು.

Translate »