ಕಲಾಮಂದಿರದ ಅಂಗಳದಲ್ಲಿ 471 ಭದ್ರತಾ, ಸ್ವಚ್ಛತಾ ಸಿಬ್ಬಂದಿಗೆ ಲಸಿಕೆ
ಮೈಸೂರು

ಕಲಾಮಂದಿರದ ಅಂಗಳದಲ್ಲಿ 471 ಭದ್ರತಾ, ಸ್ವಚ್ಛತಾ ಸಿಬ್ಬಂದಿಗೆ ಲಸಿಕೆ

June 2, 2021

ಮೈಸೂರು, ಜೂ.1(ಎಂಟಿವೈ)- ಕೊರೊನಾ ಸೋಂಕಿನಿಂದ ಪಾರಾಗಲು ಮೈಸೂರಿನ ವಿವಿಧ ಖಾಸಗಿ ಕಂಪನಿಗಳ ಭದ್ರತಾ ಸಿಬ್ಬಂದಿ ಹಾಗೂ ಹೌಸ್ ಕೀಪಿಂಗ್ ಸಿಬ್ಬಂದಿಗೆ ಆದ್ಯತಾ ವಲಯ ದಲ್ಲಿ ಲಸಿಕೆ ಹಾಕಿಸಲು ಕಾರ್ಮಿಕ ಇಲಾಖೆ ಆಯೋಜಿಸಿದ್ದ ಅಭಿಯಾನದಲ್ಲಿ 471 ಮಂದಿ ಲಸಿಕೆ ಪಡೆದರು.
ಮೈಸೂರಿನ ಕಲಾಮಂದಿರದ ಕಿರು ರಂಗ ಮಂದಿರದ ಆವರಣದಲ್ಲಿ ಮಂಗಳ ವಾರ ಕಾರ್ಮಿಕ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಲಸಿಕಾ ಅಭಿಯಾನದಲ್ಲಿ ಮೈಸೂರಿನ ವಿವಿಧೆಡೆ ಭದ್ರತಾ(ಸೆಕ್ಯುರಿಟಿ ಗಾರ್ಡ್) ಹಾಗೂ ಸ್ವಚ್ಛತಾ ಸಿಬ್ಬಂದಿ(ಹೌಸ್‍ಕೀಪಿಂಗ್) ಯಾಗಿ ಕೆಲಸ ಮಾಡುತ್ತಿರುವ 18-44 ವರ್ಷದೊಳಗಿನವರಿಗೆ ಲಸಿಕೆ ನೀಡಲಾ ಯಿತು. ಕಾರ್ಮಿಕ ಇಲಾಖೆಯಲ್ಲಿ ನೋಂದಾ ಯಿತರಾಗಿರುವ 3 ಸಾವಿರ ಮಂದಿ ಭದ್ರತಾ ಹಾಗೂ ಹೌಸ್‍ಕೀಪಿಂಗ್ ಸಿಬ್ಬಂದಿಯಿದ್ದು, ಮೊದಲ ಹಂತದಲ್ಲಿ 1500 ಮಂದಿ ಲಸಿಕೆ ಪಡೆಯಲು ಕಾರ್ಮಿಕ ಇಲಾಖೆಗೆ ಪಟ್ಟಿ ಸಲ್ಲಿಸಿದ್ದಾರೆ. ಇನ್ನು 1500 ಮಂದಿ ಸಿಬ್ಬಂದಿ ಗಳಿದ್ದು ಹೆಸರು ನೋಂದಾಯಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದ್ಯತಾ ವಲಯ ದಲ್ಲಿ ಗುರುತಿಸಲ್ಪಟ್ಟ ಭದ್ರತಾ ಸಿಬ್ಬಂದಿ ಹಾಗೂ ಹೌಸ್‍ಕೀಪಿಂಗ್ ಸಿಬ್ಬಂದಿ ಲಸಿಕೆ ಪಡೆ ಯಲು ಕಾತುರದಿಂದ ಕಲಾಮಂದಿರಕ್ಕೆ ಆಗಮಿಸಿ ದ್ದರು. ಸಾವಿರಕ್ಕೂ ಹೆಚ್ಚು ಮಂದಿ ಏಕಕಾಲಕ್ಕೆ ಬಂದ ಹಿನ್ನೆಲೆಯಲ್ಲಿ ಪುರುಷರು ಹಾಗೂ ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ಆಧಾರ್ ಕಾರ್ಡ್, ಸಂಸ್ಥೆ ಯಲ್ಲಿ ಕೆಲಸ ಮಾಡುವ ಗುರುತಿನ ಚೀಟಿ ತಂದಿದ್ದವರಿಗೆ ಮಾತ್ರ ಲಸಿಕೆ ಹಾಕಲು ಆದ್ಯತೆ ನೀಡಲಾಯಿತು. ಬೆಳಗಿನಿಂದ ಸಂಜೆ ವರೆಗೂ ನಡೆದ ಲಸಿಕಾಕರಣದ ಅಭಿಯಾನ ದಲ್ಲಿ ಮೊದಲ ದಿನ 471 ಮಂದಿಗೆ ಲಸಿಕೆ ಹಾಕಲಾಯಿತು. ಕಾರ್ಮಿಕ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿ ಗಳು ಮೇಲ್ವಿಚಾರಣೆ ನಡೆಸಿದರು.

Translate »