ಕಂಡ ಕಂಡವರಿಗೆ ಸಾಲ ಕೊಡಿಸಿ  ದೇಶವನ್ನು ದಿವಾಳಿ ಮಾಡಿದ್ದು ಕಾಂಗ್ರೆಸ್
ಮೈಸೂರು

ಕಂಡ ಕಂಡವರಿಗೆ ಸಾಲ ಕೊಡಿಸಿ ದೇಶವನ್ನು ದಿವಾಳಿ ಮಾಡಿದ್ದು ಕಾಂಗ್ರೆಸ್

June 2, 2021

ಮೈಸೂರು, ಜೂ.1(ವೈಡಿಎಸ್)- ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು 70 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆರೋಪಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ಅವರ ಮೆದುಳು 70 ವರ್ಷ ಹಿಂದಕ್ಕೆ ಹೋಗಿದೆಯೋ? ಅಥವಾ ಆಲೋಚನಾ ಶಕ್ತಿಯನ್ನೇ ಕಳೆದುಕೊಂಡಿದೆಯೋ? ಎಂದು ಪ್ರಶ್ನಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಪಿಇ ಕಿಟ್, ಎನ್95 ಮಾಸ್ಕ್ ತಯಾರಾಗದಿದ್ದ ಭಾರತದಲ್ಲಿ ಇಂದು ಇವುಗಳ ತಯಾರಿಸುತ್ತಿದ್ದು, ವಿದೇಶಕ್ಕೂ ರಫ್ತಾ ಗುತ್ತಿವೆ. ಕೇವಲ 1 ವರ್ಷದಲ್ಲಿ ಲಸಿಕೆಯನ್ನು ನಮ್ಮ ವಿಜ್ಞಾನಿಗಳು ತಯಾರಿಸಿ ಸಾಧನೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಸಹಯೋಗದಲ್ಲಿ ವಿವಿಧ ರಾಜ್ಯಗಳಿಗೆ 141 ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಿ ದ್ದಾರೆ. ಸ್ಮಾರ್ಟ್ ಸಿಟಿ ಮೂಲಕ ಜನ ಜೀವನ ಸುಧಾರಿ ಸುವ ಕೆಲಸ ಮಾಡಿದ್ದಾರೆ. ಜನ್‍ಧನ್ ಖಾತೆ ಮೂಲಕ ಸಾಮಾನ್ಯ ಬಡವರನ್ನು ಬ್ಯಾಂಕಿಂಗ್ ಸಿಸ್ಟಂನೊಂದಿಗೆ ಜೋಡಿಸಿ, 1 ರೂ. ಸೋರಿಕೆಯಾಗದಂತೆ ನೇರವಾಗಿ ಅವರ ಖಾತೆಗೆ ಹಣ ಕಳುಹಿಸುವಂತೆ ಮಾಡಿದ್ದಾರೆ. ಇದು ದೇಶವನ್ನು 70 ವರ್ಷ ಹಿಂದಕ್ಕೆ ತೆಗೆದು ಕೊಂಡು ಹೋಗಿರುವುದಾ? ಎಂದು ಪ್ರಶ್ನಿಸಿದರು.

ಯುಪಿಎ 10 ವರ್ಷದ ಆಡಳಿತ ಅವಧಿಯಲ್ಲಿ ವಿಜಯ್‍ಮಲ್ಯ, ನೀರವ್ ಮೋದಿ, ಜತಿನ್ ಮೆಹ್ತಾ, ಲಲಿತ್ ಮೋದಿ, ರತೇಶ್ ಜೈನ್, ಸಭಾಸೇಠ್ ಸೇರಿ ದಂತೆ ಹಲವು ಉದ್ಯಮಿಗಳಿಗೆ 10 ಲಕ್ಷ ಕೋಟಿ ರೂ. ಅನ್ನು ಬ್ಯಾಂಕ್‍ನಿಂದ ಸಾಲ ಕೊಡಿಸಿ ಓಡಿ ಹೋಗಲು ಬಿಟ್ಟವರು ಯಾರು?. ಅವರೆಲ್ಲಾ ನರೇಂದ್ರಮೋದಿ ಅವರ ಸಂಪರ್ಕದಲ್ಲಿ ಇದ್ದವರಲ್ಲ. ನಿಮ್ಮ ಅಧಿನಾಯಕಿ ಸೋನಿಯಾಗಾಂಧಿ, ಚಿದಂಬರಂ ಅವರ ಸ್ನೇಹ ಸಂಪರ್ಕದಲ್ಲಿದ್ದವರು. ಎಸ್‍ಎಂಎಸ್ ಮತ್ತು ಚೀಟಿ ಯಲ್ಲಿ ಬಂದ ಶಿಫಾರಸ್ಸಿಗೆ ಬ್ಯಾಂಕ್‍ಗಳಿಂದ ಮೋಸ ಮಾಡುವವರಿಗೆ ಸಾಲ ನೀಡಿ ದಿವಾಳಿ ಮಾಡಿ, 70 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗುವಂತೆ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಆರೋಪ ಮಾಡಿದರು.

ಚರ್ಚೆಗೆ ಬನ್ನಿ: ಮೋದಿ ಅವರು ಜನರಿಗೆ ಅನು ಕೂಲ ಮಾಡಿಕೊಡಲು ಜನ್‍ಧನ್, ಕೃಷಿ ಸನ್ಮಾನ್, ಅಲ್ಲದೇ ಉದ್ದಿಮೆದಾರರ, ಸಣ್ಣ ಕೈಗಾರಿಕೋದ್ಯಮಿ ಗಳಿಗೆ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜï ನೀಡಿ ಅಭಿವೃದ್ಧಿಗೆ ಕಾರಣವಾಗಿದ್ದಾರೆ. ಆದರೆ, ಹಳದಿ ಕನ್ನಡಕ ಹಾಕಿಕೊಂಡವರಿಗೆ ಪ್ರಗತಿ ಕಾಣುವುದಿಲ್ಲ. ಮಾನಸಿಕ ಗುಲಾಮಗಿರಿಯಿಂದ ಹೊರಬಂದು ವಸ್ತು ನಿಷ್ಠವಾಗಿ ಆಲೋಚಿಸಿದರೆ ಸತ್ಯ ಗೊತ್ತಾಗುತ್ತದೆ. ಸಿದ್ದರಾಮಯ್ಯ ಅವರಿಗೂ ಸತ್ಯ ಗೊತ್ತಿದೆ. ಆದರೆ, ಒಪ್ಪಿಕೊಂಡರೆ ಕಾಂಗ್ರೆಸ್‍ನಿಂದ ಹೊರಹಾಕುತ್ತಾರೆಂಬ ಭಯ ಕಾಡುತ್ತಿದೆ. ಬೇಕಾದರೆ ಚರ್ಚೆಗೆ ಬನ್ನಿ. ನಿಮ್ಮ ಆಡಳಿತಾವಧಿಯಲ್ಲಿ ಮಾಡಿರುವ ಸಾಲ, ಅದರಿಂದ ಎಷ್ಟು ಆಸ್ತಿ ನಿರ್ಮಾಣವಾಗಿದೆ ಎಂದು ಗೊತ್ತಾ ಗುತ್ತದೆ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಎದೆತಟ್ಟಿ ಹೇಳಬಹುದು: ಸಿದ್ದರಾ ಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕೊರೊನಾ ಸಂಕಷ್ಟ ಇರಲಿಲ್ಲ. ಆದರೂ ಹೆಚ್ಚು ಸಾಲ ಮಾಡಿ ದ್ದಾರೆ. ಅತೀ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿ ಯಾರೆಂದು ಕೇಳಿದರೆ ಸಿದ್ದರಾಮಯ್ಯ ನಾನೆಂದು ಎದೆತಟ್ಟಿ ಹೇಳಬಹುದು. ಯಾವುದೇ ಶಾಶ್ವತ ಯೋಜನೆ ಗಳನ್ನು ರೂಪಿಸದಿದ್ದರೂ ಹೆಚ್ಚು ಸಾಲ ಮಾಡಿದ್ದೀರಿ. ರಾಜ್ಯದಿಂದ ಹೈಕಮಾಂಡ್‍ಗೆ ಕಪ್ಪಕಾಣಿಗೆ ನೀಡುವ ಎಟಿಎಂ ಅಗಿದ್ದು, ನಿಮ್ಮ ಮಿತ್ರರು ಎಟಿಎಂ ತುಂಬಿ ಸುವ ಕೆಲಸವನ್ನು ಸಮರ್ಥವಾಗಿ ಮಾಡಿದರು. ನಿಮಗೆ ಗೊತ್ತಿದ್ದರೂ ಗೊತ್ತಿಲ್ಲದಂತೆ ಅವರಿಗೆ ಬೆಂಬಲ ನೀಡುವ ಅನಿವಾರ್ಯತೆ ಇತ್ತು. ಅದಕ್ಕಾಗಿ ಸಾಲ ಮಾಡಿ ದ್ದಲ್ಲವಾ? ಎಂದು ಪ್ರಶ್ನಿಸಿದ ಅವರು, ಮೋದಿಗೆ ಅಂಥ ದುಸ್ಥಿತಿ ಇಲ್ಲ. ಅವರು ದೇಶವನ್ನು ಪ್ರಗತಿ ಯತ್ತಾ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.

ಗುಲಾಮಗಿರಿಗೆ ರಾಜಕೀಯ ಭವಿಷ್ಯ: ಕಾಂಗ್ರೆಸ್‍ನಲ್ಲಿ ಗುಲಾಮಗಿರಿಗೆ ಮಾತ್ರ ರಾಜಕೀಯವಾಗಿ ಭವಿಷ್ಯ. ಸತ್ಯ ಹೇಳುವವರಿಗೆ ರಾಜಕೀಯ ಭವಿಷ್ಯವಿಲ್ಲ. ಹಾಗಾಗಿ ನಿಮ್ಮಲ್ಲಿರುವ ಗುಲಾಮಗಿರಿಯ ಮಾನಸಿ ಕತೆಯನ್ನು ಒಪ್ಪಿಕೊಂಡು ದೇಶವನ್ನು 70 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋದರೆಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದ್ದಾರೆ. ದೇಶವನ್ನು ಹಿಂತೆಗೆದುಕೊಂಡು ಹೋಗುವ ಯಾವ ಆಲೋಚನೆ ಯನ್ನು ಮಾಡುವವರಲ್ಲ. ಸ್ವಂತ ಹಾಗೂ ಸ್ವಾರ್ಥಕ್ಕಾಗಿ ದೇಶವನ್ನು ಬಲಿ ಕೊಡವವರಲ್ಲ ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿಯೇ ಜನತೆ ಕಾಂಗ್ರೆಸ್‍ಗೆ ತಕ್ಕಪಾಠ ಕಲಿಸಿದ್ದಾರೆ. ಚುನಾವಣೆಯಲ್ಲಿ ತಿಣುಕಾಡಿ ಒಂದು ಸ್ಥಾನ ಗಳಿಸಿದೆ. ಸಿದ್ದರಾಮಯ್ಯ ಅವರ ಚಾಮುಂ ಡೇಶ್ವರಿ, ಬಾದಾಮಿಯಲ್ಲಿಯೂ ಬಿಜೆಪಿ ಲೀಡ್ ಬಂದಿದೆ. ಈ ಸತ್ಯ ಗೊತ್ತಿದ್ದರೂ ಸಿದ್ದರಾಮಯ್ಯ ಅದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಟೀಕಿಸಿದರು.

ಸಾವಿನ ತನಿಖೆಯಾಗಲಿ: ಕೊರೊನಾದಿಂದ ಮೃತ ಪಟ್ಟವರ ಸಂಖ್ಯೆಯನ್ನು ಮುಚ್ಚಿಡಲಾಗುತ್ತಿದೆ ಎಂಬ ಪ್ರಶ್ನೆಗೆ ಸಿ.ಟಿ.ರವಿ ಪ್ರತಿಕ್ರಿಯಿಸಿ, ಕೋವಿಡ್‍ನಿಂದ ಮೃತ ಪಟ್ಟವರ ಸಂಖ್ಯೆ ಮುಚ್ಚಿಟ್ಟು ಸರ್ಕಾರಕ್ಕೆ ಆಗಬೇಕಾಗಿ ರುವುದು ಏನಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲವೂ ತೆರೆದಿಟ್ಟ ಪುಸ್ತಕವಾಗಿರುವಾಗ ವಿನಾ ಕಾರಣ ಆರೋಪ ಮಾಡು ವುದು ಸರಿಯಲ್ಲ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯ ದಲ್ಲಿ ಮಾತ್ರ ಸಾವಿನ ಸಂಖ್ಯೆ ಕಡಿಮೆ ತೋರಿಸುತ್ತಿಲ್ಲ. ಬಿಜೆಪಿಯೇತರ ರಾಜ್ಯಗಳಲ್ಲಿಯೂ ಸಾವಿನ ಪ್ರಮಾಣ ಕಡಿಮೆಯಾಗಿದೆ. ಪ್ರತಿ ಆಸ್ಪತ್ರೆಯಲ್ಲಿ ರೋಗಿಯ ವರದಿ ಇದ್ದು, ಅದನ್ನು ಪರಿಶೀಲಿಸಬಹುದು. ಒಂದು ವೇಳೆ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿದ್ದರೆ ಆ ಬಗ್ಗೆ ತನಿಖೆ ನಡೆಯಲಿ. ಅಗ ಸತ್ಯಾಸತ್ಯತೆ ಹೊರ ಬೀಳಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಂಗ್ರೆಸ್‍ನಿಂದ ಭಾರತಕ್ಕೆ ಅವಮಾನ: ಕೊರೊನಾ ವನ್ನು ಚೈನಿಸ್ ವೈರಸ್ ಎಂದು ಕರೆಯಲು ಕಾಂಗ್ರೆಸ್‍ಗೆ ಧೈರ್ಯವಿಲ್ಲದೆ ಭಾರತದ ವೈರಸ್ ಎಂದು ಕರೆದು ಅಪಮಾನ ಮಾಡಿದೆ. ಕೊರೊನಾದಿಂದ ಸಾವು ಗಳಾಗಿವೆ. ಆದರೆ, ಶೇ.99ರಷ್ಟು ಗುಣಮುಖರಾಗಿದ್ದು, 1ರಷ್ಟು ಮಾತ್ರ ಮೃತಪಟ್ಟಿದ್ದಾರೆ. ಆದರೆ, ಕಾಂಗ್ರೆಸ್ ಸಾವನ್ನೇ ವಿಜೃಂಭಿಸುವ ಷಡ್ಯಂತ್ರ ನಡೆಸಿ ಆರಾಜಕತೆ ಹುಟ್ಟುಹಾಕುವ ಸಂಚು ಮಾಡಿರುವುದು ದುರಾದೃಷ್ಟ ಕರ ಎಂದು ಬೇಸರ ವ್ಯಕ್ತಪಡಿಸಿದರು. ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜಂಗಲ್ ರೆಸಾರ್ಟ್ ಅಧ್ಯಕ್ಷ ಅಪ್ಪಣ್ಣ, ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್, ಬಿಜೆಪಿ ರಾಜ್ಯ ವಕ್ತಾಕ ಎಂ.ಜಿ.ಮಹೇಶ್, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್ ಮತ್ತಿತರಿದ್ದರು.

Translate »