ಏಳು ವರ್ಷ ಪೂರ್ಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಲವು ಸೇವಾ ಕಾರ್ಯಗಳಿಗೆ ಶಾಸಕ ರಾಮದಾಸ್ ಚಾಲನೆ
ಮೈಸೂರು

ಏಳು ವರ್ಷ ಪೂರ್ಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಲವು ಸೇವಾ ಕಾರ್ಯಗಳಿಗೆ ಶಾಸಕ ರಾಮದಾಸ್ ಚಾಲನೆ

June 1, 2021

ಮೈಸೂರು, ಮೇ 31(ಆರ್‍ಕೆಬಿ)- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತಕ್ಕೆ 7 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ವಿದ್ಯಾರಣ್ಯಪುರಂನ ಬಿಜೆಪಿ ಕಚೇರಿ ಎದುರು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಹಲವು ಸೇವಾ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಇದೇ ವೇಳೆ ಉಚಿತ ಸೇವೆಯ ಆಕ್ಸಿಜನ್ ಸೌಲಭ್ಯ ಹೊಂದಿರುವ 2 ಆಂಬುಲೆನ್ಸ್ ನೀಡಿದರು.

ಕಾರ್ಮಿಕ ಇಲಾಖೆಯ ವತಿಯಿಂದ ಹಲವು ಫಲಾನು ಭವಿಗಳಿಗೆ ವಿವಿಧ ಯೋಜನೆಗಳಾದ ಸಾಮಾಜಿಕ ಭದ್ರತೆ, ಗುರುತಿನ ಚೀಟಿ, ಮನಸ್ವಿನಿ ಯೋಜನೆ, ಹಿರಿಯ ನಾಗರಿಕರ ಪಿಂಚಣಿ, ಸಂಧ್ಯಾ ಸುರಕ್ಷಾ ಯೋಜನೆಯ ಆದೇಶದ ಪತ್ರವನ್ನು ಸಾಂಕೇತಿಕವಾಗಿ 5 ಜನರಿಗೆ ನೀಡಿ ಮುಂದೆ ಅವರ ಮನೆ ಬಾಗಿಲಿಗೆ ಆದೇಶದ ಪ್ರತಿಯನ್ನು ತಲು ಪಿಸುವ ಕಾರ್ಯಕ್ಕೂ ಚಾಲನೆ ನೀಡಿದರು.

ಮಹಿಳಾ ದಿನಾಚರಣೆ ಅಂಗವಾಗಿ ಶಾಸಕರ ಗೃಹ ಕಚೇರಿಯಲ್ಲಿ ಕಣ್ಣಿನ ತಪಾಸಣಾ ಶಿಬಿರ ನಡೆಯಿತು. ಒಟ್ಟು 234 ಜನರಿಗೆ ಕನ್ನಡಕ ಮತ್ತು 37 ಜನರಿಗೆ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಬಗ್ಗೆ ವೈದರು ಸೂಚಿಸಿದ ಹಿನ್ನೆಲೆಯಲ್ಲಿ 234 ಕನ್ನಡಕವನ್ನು ನೀಡುತ್ತಿದ್ದು, ಆದರೆ ಕೋವಿಡ್ ನಿಯಮ ಜಾರಿಯಲ್ಲಿರುವುದರಿಂದ 5 ಜನರಿಗೆ ಕನ್ನಡಕ ಹಾಗೂ ಉಚಿತ ಶಸ್ತ್ರ ಚಿಕಿತ್ಸೆಗಾಗಿ ಮಹಾವೀರ ಆಸ್ಪತ್ರೆಗೆ ಅನು ಮತಿ ಪತ್ರವನ್ನು ಸಾಂಕೇತಿಕವಾಗಿ ನೀಡಲಾಗುತ್ತಿದೆ ಎಂದರು. ಬಳಿಕ ಫಲಾನುಭವಿಗಳಿಗೆ ಕನ್ನಡಕಗಳನ್ನು ಮನೆ ಮನೆಗೆ ತಲುಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಮೋದಿ ಯವರ ಸರ್ಕಾರ 7 ವರ್ಷ ಪೂರೈಸಿದೆ. ಕೋವಿಡ್ ಸಂದರ್ಭ ದಿಂದಾಗಿ ನಾವು ಮನೆ ಬಾಗಿಲಿಗೆ ಸೇವೆ ಎಂಬ ಕಾರ್ಯ ಕ್ರಮದಡಿ ಕ್ಷೇತ್ರದ ಎಲ್ಲಾ ಮನೆಗೂ ಭೇಟಿ ನೀಡಲಾಗು ತ್ತಿದೆ. ಫಲಾನುಭವಿಗಳಿಗೆ ಮನೆ ಬಾಗಿಲಿಗೆ ಯೋಜನೆಗಳನ್ನು ತಲುಪಿಸುವ ಸೇವಾ ಕೆಲಸಕ್ಕೆ ಚಾಲನೆ ನೀಡಲಾಗಿದೆ. ವಿಶೇಷವಾಗಿ ಮೈಸೂರಿನಲ್ಲಿ ಅಧಿಕಾರಿಗಳು ಕಚೇರಿ ಮುಚ್ಚಿದ್ದರೂ ತಮ್ಮ ಮನೆಯಲ್ಲೇ ಈ ಕಾರ್ಯಗಳನ್ನು ಮಾಡಿ ಫಲಾನುಭವಿಗಳ ಮನೆಗೆ ಯೋಜನೆಗಳನ್ನು ಕೊಂಡೊಯ್ಯುವ ಅವರ ಕಾರ್ಯ ಶ್ಲಾಘನೀಯ ಎಂದರು.

ನಗರಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಕೆ.ಆರ್.ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಂ.ವಡಿವೇಲು, ಉಪಾಧ್ಯಕ್ಷರಾದ ಸಂತೋಷ್ ಶಂಭು, ಎಂ.ಆರ್.ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಜೆ.ನಾಗೇಂದ್ರಕುಮಾರ್, ಯುವಮೋರ್ಚಾ ಕ್ಷೇತ್ರ ಅಧ್ಯಕ್ಷ ಮನು ಶೈನ್ (ಅಪ್ಪಿ), ಪ್ರಸಾದ್‍ಬಾಬು, ಆಶ್ರಯ ಸಮಿತಿ ಸದಸ್ಯ ಹೇಮಂತ್‍ಕುಮಾರ್, ಮುಖಂಡರಾದ ನೂರ್ ಫಾತಿಮಾ, ಪುನೀತ್, ಅನಿಲ್, ಸಂಜಯ್ ಮುರುಳಿ, ಅನ್ನಪೂರ್ಣ ಇನ್ನಿತರರು ಉಪಸ್ಥಿತರಿದ್ದರು.

ಮನೆ ಮನೆ ಸಮೀಕ್ಷೆ; ಜನರ ಆರೋಗ್ಯ ಪರೀಕ್ಷೆ

ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಶಾಸಕ ಎಸ್.ಎ.ರಾಮ ದಾಸ್ ಪಾಲಿಕೆ ಸದಸ್ಯರÀ ನೇತೃತ್ವದಲ್ಲಿ ವಲಯ ಕಚೇರಿ 1 ಮತ್ತು 2ರ ವ್ಯಾಪ್ತಿಯ ಶ್ರೀರಾಂಪುರ ಮತ್ತು ವಿದ್ಯಾರಣ್ಯಪುರಂ ಭಾಗದಲ್ಲಿ ಪ್ರತಿ ಮನೆ ಮನೆಗೂ ಭೇಟಿ ನೀಡಿ ಜನರ ಆರೋಗ್ಯ ಪರೀಕ್ಷಿಸಲಾಯಿತು. ಜನರ ಆರೋಗ್ಯದ ಹಿತದೃಷ್ಟಿಯಿಂದ ಆಕ್ಸಿಮೀಟರ್ ಮತ್ತು ಥರ್ಮಾಸ್ಕ್ಯಾನ್ ನಡೆಸಿ ಆರೋಗ್ಯದಲ್ಲಿ ಏರುಪೇರು ಕಂಡು ಬಂದವರಿಗೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಳುಹಿಸಿ, ವೈದ್ಯಕೀಯ ಚಿಕಿತ್ಸೆ ಕೊಡಿಸುವ ಕಾರ್ಯ ಕೈಗೊಂ ಡರು. ಈ ವೇಳೆ ಮಾತನಾಡಿದ ಶಾಸಕ ರಾಮದಾಸ್, ಕೋವಿಡ್ ಲಕ್ಷಣ ಇರುವವರು ಹತ್ತಿರದ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇನ್ನೂ ಕೆಲವರಿಗೆ ಲಕ್ಷಣಗಳೇ ಇರುವುದಿಲ್ಲ. ಹಾಗಾಗಿ ಮನೆ ಮನೆ ಸಮೀಕ್ಷಾ ಕಾರ್ಯ ನಡೆಸಲಾಗುತ್ತಿದೆ. ಸದ್ಯದಲ್ಲೇ ಕೆ.ಆರ್.ಕ್ಷೇತ್ರದ ಸರ್ವೆ ಕಾರ್ಯ ಪೂರ್ಣಗೊಳ್ಳಲಿದೆ. ಬೀದಿಬದಿ ವ್ಯಾಪಾರಿUಳ ಆರೋಗ್ಯ ವನ್ನು ಪರೀಕ್ಷಿಸಲಾಗಿದೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಕೊರೊನಾ ಮುಕ್ತಗೊಳಿ ಸಲು ಸಹಕಾರ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಗೀತಾಶ್ರೀ ಯೋಗಾ ನಂದ, ಬಿಜೆಪಿ ಪ್ರಮುಖರಾದ ಯೋಗಾನಂದ, ಕೆ.ಆರ್. ಕ್ಷೇತ್ರದ ಬಿಜೆಪಿ ಕಾರ್ಯದರ್ಶಿ ಗಿರೀಶ್, ಭರತ್ ಕುಮಾರ್, ಕೃಷ್ಣ, ಮಂಜು, ರವೀಂದ್ರ, ಲೋಕೇಶ್, 61ನೇ ವಾರ್ಡ್ ಉಸ್ತುವಾರಿ ಮುರುಳೀಧರ್, ಶಿವಪ್ರಸಾದ್, ಕಾರ್ಯದರ್ಶಿ ಚಂದ್ರಶೇಖರ್, ಸಿಂಧ್ಯಾ, ಕೇಬಲ್ ಉಮೇಶ್ ಇತರರಿದ್ದರು.

Translate »