ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ  ಬಳಗದಿಂದ ವಕೀಲರಿಗೆ ದಿನಸಿ ಕಿಟ್ ವಿತರಣೆ
ಮೈಸೂರು

ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಬಳಗದಿಂದ ವಕೀಲರಿಗೆ ದಿನಸಿ ಕಿಟ್ ವಿತರಣೆ

June 1, 2021

ಮೈಸೂರು,ಮೇ 31(ಪಿಎಂ)- `ಲಾಗೈಡ್’ ಕನ್ನಡ ಕಾನೂನು ಮಾಸಪತ್ರಿಕೆ ಬಳಗದ ವತಿಯಿಂದ ಕೋವಿಡ್ ಸಂಕಷ್ಟದ ಹಿನ್ನೆಲೆ ಯಲ್ಲಿ ಮೈಸೂರು ಜಿಲ್ಲೆಯ ಕಿರಿಯರು ಹಾಗೂ ಅಗತ್ಯವುಳ್ಳ ವಕೀಲರ ಕುಟುಂಬಗಳಿಗೆ ನೆರ ವಾಗುವ ನಿಟ್ಟಿನಲ್ಲಿ ದಿನಸಿ ಕಿಟ್ ವಿತರಣೆಗೆ ಸೋಮವಾರ ಚಾಲನೆ ನೀಡಲಾಯಿತು.

ಮೈಸೂರಿನ ಚಾಮರಾಜಪುರಂನ ಖಾಸಗಿ ಹೋಟೆಲ್ ಆವರಣದಲ್ಲಿ ಸಾಂಕೇತಿಕವಾಗಿ ಕೆಲವರಿಗೆ ಕಿಟ್ ನೀಡುವ ಮೂಲಕ 800ಕ್ಕೂ ಹೆಚ್ಚು ಕಿಟ್‍ಗಳನ್ನು ವಿತರಿಸುವ ಕಾರ್ಯ ಕ್ರಮಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಗಳ ಸಮ್ಮುಖದಲ್ಲಿ ಚಾಲನೆ ದೊರೆಯಿತು.

25 ಕೆಜಿ ಅಕ್ಕಿ, 5 ಕೆಜಿ ಗೋಧಿಹಿಟ್ಟು, 1 ಕೆಜಿ ಕಡಲೆಬೇಳೆ, 1 ಕೆಜಿ ಕಡಲೆಕಾಳು, 1 ಕೆಜಿ ಉದ್ದಿನಬೇಳೆ, 4 ಕೆಜಿ ಸಕ್ಕರೆ, 1 ಲೀಟರ್ ಅಡುಗೆ ಎಣ್ಣೆ ಸೇರಿದಂತೆ ಇನ್ನಿತರ ದಿನಸಿ ಪದಾರ್ಥಗಳನ್ನು ಕಿಟ್ ಒಳಗೊಂ ಡಿದೆ. ಕಾರ್ಯಕ್ರಮದ ಬಳಿಕ ಸುಮಾರು 500 ಕಿಟ್‍ಗಳನ್ನು ವಿತರಣೆ ಮಾಡಲಾಯಿತು. ಸದ್ಯಕ್ಕೆ 800 ಕಿಟ್‍ಗಳನ್ನು ವಿತರಿಸುವ ಯೋಜನೆಯನ್ನು ಬಳಗ ರೂಪಿಸಿದೆ.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್, 2014ರ ಬ್ಯಾಚ್‍ನ ಐಎಎಸ್ ಅಧಿಕಾರಿ ಯಾಗಿರುವ ನಾನು ರಾಜ್ಯದ ಹಲವೆಡೆ ಸೇವೆ ಸಲ್ಲಿಸಿದ್ದೇನೆ. ಈ ಕೋವಿಡ್ ಸನ್ನಿ ವೇಶದಲ್ಲಿ ಮೈಸೂರಿನಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ನನ್ನ ಅದೃಷ್ಟವೇ ಸರಿ. ಕಾರಣ ಇಲ್ಲಿ ಸ್ಥಳೀಯ ಆಡಳಿತ ಮಾತ್ರ ವಲ್ಲದೆ ಅಧಿಕಾರಿಗಳು, ರಾಜಕಾರಣಿಗಳು, ಜನಪ್ರತಿನಿಧಿಗಳು ಉತ್ತಮವಾಗಿ ಜನತೆಗೆ ಸ್ಪಂದಿಸುತ್ತಿದ್ದಾರೆ. ಅದಕ್ಕೂ ಮಿಗಿಲಾಗಿ ಲಾಗೈಡ್ ನಂತಹ ಹಲವು ಸಂಘ-ಸಂಸ್ಥೆಗಳು ಸಂಕಷ್ಟದಲ್ಲಿರುವ ಜನತೆಗೆ ಸಹಾಯಹಸ್ತ ಚಾಚಿವೆ. ಯಾವುದೇ ಅಪೇಕ್ಷೆ ಇಲ್ಲದೆ ಸೇವೆ ನೀಡುತ್ತಿವೆ ಎಂದು ನುಡಿದರು.

ಮೈಸೂರಿನಲ್ಲಿ ಹಣವಂತರಿಗಿಂತ ಹೆಚ್ಚಾಗಿ ಹೃದಯವಂತರಿದ್ದಾರೆ. ಕೋವಿಡ್ ತಡೆ ಹಿನ್ನೆಲೆಯಲ್ಲಿ ರೂಪಿಸಿರುವ ಕೋವಿಡ್ ಮಿತ್ರ, ಟೆಲಿಕೇರ್, ಮನೆ ಮನೆ ಸಮೀಕ್ಷೆ ಸೇರಿ ದಂತೆ ಇಂತಹ ಅನೇಕ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳ ಮಾರ್ಗದರ್ಶನ ಮತ್ತು ಸಹಕಾರದ ದೊರೆಯುತ್ತಿದೆ. ಜೊತೆಗೆ ಮೈಸೂರಿನ ನಾಗರಿಕ ಸಮಾಜ ದೊಡ್ಡ ಮಟ್ಟದಲ್ಲಿ ಸ್ಪಂದಿಸುತ್ತಿದೆ ಎಂದರು.

ಮೈಸೂರಿನ ಸೇವಾವಧಿ ಮರೆಯಲಾರೆ: ಮೈಸೂರಿನಂತಹ ಸೇವಾ ಮನೋಭಾವದ ಸಮಾಜದಲ್ಲಿ ಎಲೆಮರೆಯಲ್ಲೂ ಸಾಕಷ್ಟು ಮಂದಿ ಸಮಾಜಕ್ಕೆ ಸಾರ್ಥಕ ಸೇವೆ ನೀಡುತ್ತಿ ದ್ದಾರೆ. ನನ್ನ ವೃತ್ತಿಜೀವನದಲ್ಲಿ ಮೈಸೂರಿ ನಲ್ಲಿ ಸೇವೆ ಸಲ್ಲಿಸಿದ ಅವಧಿ ಮರೆಯಲಾಗದು. ಒಂದಿಷ್ಟು ಹಣ ದಾನ ನೀಡಿ ಕೈತೊಳೆದು ಕೊಳ್ಳುವ ಮನೋಭಾವ ಇಲ್ಲದೆ ದಾನಿಗಳು ಪ್ರತಿದಿನ ನಮ್ಮೊಂದಿಗೆ ಇದ್ದು ಉದಾತ್ತ ಸೇವೆ ನೀಡುತ್ತಿದ್ದಾರೆ. ಹೀಗಾಗಿ ಪಾಲಿಕೆ ಮತ್ತು ವೈಯಕ್ತಿಕವಾಗಿ ತಮ್ಮಂತಹ ಎಲ್ಲಾ ಸಹೃಯಿ ಗಳಿಗೆ ಧನ್ಯವಾದ ಹೇಳಬಯಸುತ್ತೇನೆ ಎಂದು ಶಿಲ್ಪಾನಾಗ್ ತಿಳಿಸಿದರು.

ಡಿಸಿಪಿ ಡಾ.ಎ.ಎನ್.ಪ್ರಕಾಶ್‍ಗೌಡ ಮಾತ ನಾಡಿ, ಲಾಗೈಡ್ ಬಳಗ ಮೈಸೂರಿನಲ್ಲಿ ತನ್ನದೇ ಛಾಪು ಮೂಡಿಸಿದೆ. ಸದಾ ವಕೀಲ ಸಮುದಾಯಕ್ಕೆ ವಿಶೇಷ ಪ್ರಾತಿನಿಧ್ಯ ದೊರೆಯ ಬೇಕು ಎಂಬ ಸದುದ್ದೇಶದಿಂದ ಕೆಲಸ ಮಾಡು ತ್ತಿದೆ. ಕಳೆದ ಕೋವಿಡ್ ಸಂದರ್ಭದಲ್ಲೂ ಲಾಗೈಡ್ ಬಳಗ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲಾಗೈಡ್ ಸೇವೆ ಇತರರಿಗೂ ಪ್ರೇರಣೆ ಯಾಗಲಿ: ಕಳೆದ ಹಲವು ದಿನಗಳಿಂದ ಸಾಕಷ್ಟು ವಕೀಲರು ಕೋವಿಡ್‍ಗೆ ಬಲಿಯಾಗಿ ದ್ದಾರೆ. ಇಂತಹ ಸಂದರ್ಭದಲ್ಲಿ ವಕೀಲ ಸಮುದಾಯ ಸೇರಿದಂತೆ ನಾವು ನೀವೆಲ್ಲಾ ಮುನ್ನೆಚ್ಚರಿಕೆ ವಹಿಸಿ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿದೆ. ಮೈಸೂರು ತನ್ನದೇ ಘನತೆ ಹೊಂದಿರುವ ಸ್ಥಳ. ಇಲ್ಲಿ ನೊಂದ ಜನತೆಗೆ ಅತೀವ ಕಾಳಜಿಯಿಂದ ಕಳೆದ ಒಂದು ತಿಂಗಳಿಂದ ಸಹೃದಯಿಗಳು ಗಲ್ಲಿಗಲ್ಲಿಯಲ್ಲಿ ಆಹಾರ ವಿತರಣೆ ಮಾಡುತ್ತಿ ದ್ದಾರೆ. ಲಾಗೈಡ್ ಬಳಗದ ಈ ಕಾರ್ಯ ಕ್ರಮ ಇತರರಿಗೂ ಪ್ರೇರಣೆಯಾಗಲಿ ಎಂದು ಡಿಸಿಪಿ ಆಶಿಸಿದರು.

ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆನಂದಕುಮಾರ್ ಮಾತನಾಡಿ, ಲಾಗೈಡ್ ಬಳಗ ನಿರಂತರವಾಗಿ ಸಮಾಜಕ್ಕೆ ಸ್ಪಂದಿಸುತ್ತಿದೆ. ಕಳೆದ ಬಾರಿ ಕೋವಿಡ್ ವೇಳೆಯೂ ಅನೇಕ ವಕೀಲರು ಸಂಕಷ್ಟದಲ್ಲಿ ದ್ದಾಗ ಆರ್ಥಿಕ ಸಹಾಯ ಮಾಡಿದೆ. ಎಲ್ಲಾ ವಕೀಲರಿಗೆ ಲಕ್ಷಾಂತರ ವೆಚ್ಚದಲ್ಲಿ ಉಚಿತವಾಗಿ ಡೈರಿ ಹಂಚಿಕೆ ಮಾಡಿದೆ. ಕೋವಿಡ್ ಹಿನ್ನೆಲೆಯಲ್ಲಿ ಸಂಘದಿಂದ ಅಷ್ಟು ಹಣ ವೆಚ್ಚ ಮಾಡಲಾಗುತ್ತಿರಲಿಲ್ಲ ಎಂದು ಧನ್ಯವಾದ ಅರ್ಪಿಸಿದರು.
ಈವರೆಗೆ 40 ವಕೀಲರು ಕೋವಿಡ್‍ಗೆ ಬಲಿ: 2020ರ ಮಾರ್ಚ್‍ನಿಂದ ಈವರೆಗೆ ಮೈಸೂರು ವಕೀಲರ ಸಂಘವು ಸುಮಾರು 40 ಮಂದಿ ವಕೀಲರನ್ನು ಕೋವಿಡ್‍ನಿಂದ ಕಳೆದುಕೊಂಡಿದೆ. ಈಗಲೂ ಅನೇಕರು ಕೋವಿಡ್ ಸೋಂಕಿತರಾಗಿದ್ದಾರೆ. ಜೊತೆಗೆ ಆರ್ಥಿಕ ಸಂಕಷ್ಟ ಉದ್ಭವಿಸುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಲಾಗೈಡ್ ಬಳಗದ ಇಂತಹ ಸೇವೆ ಅನುಕರಣೀಯ ಎಂದು ಆನಂದಕುಮಾರ್ ಶ್ಲಾಘಿಸಿದರು.

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‍ಕುಮಾರ್‍ಗೌಡ ಅವರು ಸ್ವಯಂಪ್ರೇರಿತವಾಗಿ ಪ್ರಾಧಿಕಾರದಿಂದ 1 ಲಕ್ಷ ರೂ. ಮೌಲ್ಯದ ಔಷಧಗಳನ್ನು ಹೋಂ ಐಸೋಲೇಷನ್‍ನಲ್ಲಿರುವ ಸಂಘದ ಸದಸ್ಯರಿ ಗಾಗಿ ನೀಡಿದ್ದಾರೆ. ವಕೀಲರು ಇದರ ಸದುಪ ಯೋಗ ಪಡೆದುಕೊಳ್ಳಬಹುದು. ವಕೀಲ ಸಮುದಾಯಕ್ಕೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ನೀಡುವ ಸಂಬಂಧ ಅಧಿಕಾರಿ ಗಳೊಂದಿಗೆ ಮಾತನಾಡಿದ್ದೇನೆ. ಮೊದಲ ಆದ್ಯತೆಯಲ್ಲಿ ಲಸಿಕೆ ನೀಡುವ ಭರವಸೆ ನೀಡಿದ್ದಾರೆ. ಈ ಸಂಬಂಧ ಸಂಸದ ಪ್ರತಾಪ್ ಸಿಂಹ ಅವರೂ ನಮ್ಮ ಈ ಕೋರಿಕೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ಹಿರಿಯ ವಕೀಲ ಎಂ.ಡಿ.ಹರೀಶ್‍ಕುಮಾರ್ ಹೆಗಡೆ ಮಾತನಾಡಿ, ಕಳೆದ ಕೋವಿಡ್ ಸಂದರ್ಭದಲ್ಲಿ ಜನತೆ ಸಮಸ್ಯೆಗೆ ಸ್ಪಂದಿಸ ಬೇಕೆಂಬ ನಿಟ್ಟಿನಲ್ಲಿ ಲಾಗೈಡ್ ಬಳಗದಿಂದ ಮೆಡಿಕಲ್ ಕಿಟ್, ಆಹಾರ ಮತ್ತು ದಿನಸಿ ಕಿಟ್ ನೀಡಲಾಗಿತ್ತು. ಅಲ್ಲದೆ, ಕಳೆದ ಬಾರಿ ಗ್ರಾಮೀಣ ಪ್ರದೇಶದ ಕಿರಿಯ ವಕೀಲರಿಗೆ ಶಿಷ್ಯವೇತನ ನೀಡಲಾಗಿತ್ತು. ಇದೀಗ ಜಿಲ್ಲೆಯ ಎಲ್ಲಾ ಕಿರಿಯ ವಕೀಲರಿಗೆ ನೆರವಾಗಲು ದಿನಸಿ ಕಿಟ್ ವಿತರಣೆ ಮಾಡುತ್ತಿದ್ದು, ಇದನ್ನು ಸಹಾಯವೆಂದು ಭಾವಿಸಬೇಕಿಲ್ಲ. ಬದಲಿಗೆ ಅವರೊಟ್ಟಿಗೆ ನಾವು ಇದ್ದೇವೆ ಎಂಬ ಆತ್ಮ ಸ್ಥೈರ್ಯ ತುಂಬುವ ಉದ್ದೇಶ ಹೊಂದಲಾ ಗಿದೆ. ಏಕೆಂದರೆ ಇಡೀ ವಕೀಲ ಸಮುದಾಯ ನಮ್ಮ ಒಂದು ಕುಟುಂಬವಾಗಿದೆ ಎಂದರು. ಸಂಸದ ಪ್ರತಾಪ್‍ಸಿಂಹ, ಲಾಗೈಡ್ ಸಂಪಾದಕ ಹೆಚ್.ಎನ್.ವೆಂಕಟೇಶ್, ವಕೀಲ ಜಿ.ವಿ. ರಾಮಮೂರ್ತಿ ಮತ್ತಿತರರು ಹಾಜರಿದ್ದರು.

Translate »