ವೈದ್ಯರ ನಿಂದನೆ ಖಂಡಿಸಿ ಆರೋಗ್ಯ ಇಲಾಖೆ ಡಿ ಗ್ರೂಪ್ ನೌಕರರ ಪ್ರತಿಭಟನೆ
ಮೈಸೂರು

ವೈದ್ಯರ ನಿಂದನೆ ಖಂಡಿಸಿ ಆರೋಗ್ಯ ಇಲಾಖೆ ಡಿ ಗ್ರೂಪ್ ನೌಕರರ ಪ್ರತಿಭಟನೆ

June 1, 2021

ಮೈಸೂರು ಮೇ 31(ಎಂಕೆ) ಇತ್ತೀಚೆಗೆ ನಡೆದ ಕೊರೊನಾ ನಿಯಂತ್ರಣ ಸಭೆಯೊಂದರಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಅವ ರನ್ನು ಕೆಲವು ಜನಪ್ರತಿನಿಧಿಗಳು ಅವಾಚ್ಯ ಪದಗಳಿಂದ ನಿಂದಿ ಸಿರುವುದನ್ನು ಖಂಡಿಸಿ, ಮೈಸೂರು ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗ್ರೂಪ್-ಡಿ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ನಜರ್‍ಬಾದ್‍ನಲ್ಲಿರುವ ಡಿಹೆಚ್‍ಒ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿ ಯೊಬ್ಬರನ್ನು ಮನಬಂದಂತೆ ನಿಂದಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ಕೊರತೆ ಇದ್ದರೂ ಪರಿಸ್ಥಿತಿಯನ್ನು ನಿಭಾಯಿಸ ಲಾಗುತ್ತದೆ. ಪ್ರೋತ್ಸಾಹಿಸಬೇಕಾದವರೇ ನಿಂದಿಸಿದರೆ, ಕೆಲಸ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಕೊರೊನಾ ನಿಯಂತ್ರಣಕ್ಕೆ ಕಳೆದ ಒಂದೂವರೆ ವರ್ಷದಿಂದ ವೈದ್ಯರು ಹರಸಾಹಸಪಡುತ್ತಿದ್ದಾರೆ. ಕೆಲ ವೈದ್ಯರು ಕೊರೊನಾ ಸೋಂಕಿಗೆ ಪ್ರಾಣ ಬಿಟ್ಟಿದ್ದಾರೆ. ಸೋಂಕಿತ ಸಂಬಂಧಿಕರಿಂದ ಹಲ್ಲೆಗೂ ಒಳಗಾಗಿದ್ದಾರೆ. ಇಷ್ಟೆಲ್ಲಾ ಕಷ್ಟಗಳನ್ನು ಎದುರಿಸಿ ಸೇವೆ ಮಾಡುತ್ತಿರುವ ವೈದ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸು ವುದು ಮುಂದುವರೆದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು. ಮೈಸೂರು ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗ್ರೂಪ್-ಡಿ ನೌಕರರ ಸಂಘದ ಉಪಾಧ್ಯಕ್ಷ ಪಿ.ಕೆಂಪರಾಜು, ಸರ್ದಾರ್ ಇನ್ನಿತರರಿದ್ದರು.

Translate »