ಜಿಲ್ಲಾಧಿಕಾರಿಗಳಿಗೆ ಶೀಘ್ರ ಪ್ರಸ್ತಾವನೆ ಸಲ್ಲಿಸಿ:   ಶಾಸಕ ನಾಗೇಂದ್ರ ಅಧಿಕಾರಿಗಳಿಗೆ ಸೂಚನೆ
ಮೈಸೂರು

ಜಿಲ್ಲಾಧಿಕಾರಿಗಳಿಗೆ ಶೀಘ್ರ ಪ್ರಸ್ತಾವನೆ ಸಲ್ಲಿಸಿ: ಶಾಸಕ ನಾಗೇಂದ್ರ ಅಧಿಕಾರಿಗಳಿಗೆ ಸೂಚನೆ

June 2, 2021

ಮೈಸೂರು, ಜೂ.1(ಪಿಎಂ)- ಮೈಸೂರಿನ ಚಾಮ ರಾಜ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಉಂಟಾಗಿ ರುವ ಔಷಧ, ವೈದ್ಯಕೀಯ ಸಲಕರಣೆಗಳ ಪೂರೈಕೆ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಕ್ಷೇತ್ರದ ಕೋವಿಡ್ ಟಾಸ್ಕ್‍ಫೋರ್ಸ್ ಅಧ್ಯಕ್ಷರೂ ಆದ ಶಾಸಕ ಎಲ್.ನಾಗೇಂದ್ರ ಸೂಚನೆ ನೀಡಿದರು.

ಮೈಸೂರು ಮಹಾನಗರ ಪಾಲಿಕೆಯ ಜಯಚಾಮ ರಾಜೇಂದ್ರ (ಹಳೇ ಕೌನ್ಸಿಲ್ ಸಭಾಂಗಣ) ಸಭಾಂಗಣದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಕೋವಿಡ್ ಟಾಸ್ಕ್ ಫೋರ್ಸ್ ಸಭೆ ನಡೆಸಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೊರತೆ ಉಂಟಾಗಿರುವ ಔಷಧ, ಸಲಕರಣೆ ವಿವರಗಳನ್ನು ಪಟ್ಟಿ ಮಾಡಿ ಕ್ರೋಢೀಕರಿಸಿ ಸಭಾ ನಡಾವಳಿಯನ್ನು ತಯಾ ರಿಸಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರಲ್ಲದೆ, ಈ ಕುರಿತಂತೆ ಎನ್‍ಡಿಆರ್‍ಎಫ್ ನಿಧಿ ಯಿಂದ ಅನುದಾನ ಬಿಡುಗಡೆಗೊಳಿಸುವಂತೆ ತಾವೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

ಚಾಮರಾಜ ಕ್ಷೇತ್ರದ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಾದ ಕೆ.ಆರ್.ಆಸ್ಪತ್ರೆ, ಪಿಕೆಟಿಬಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಪಂಚಕರ್ಮ ಆಯುರ್ವೇದ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯ ಔಷಧ, ವೈದ್ಯ ಕೀಯ ಸಲಕರಣೆ ಇಲ್ಲವೆಂಬ ದೂರುಗಳು ಸಾರ್ವಜನಿಕ ರಿಂದ ಕೇಳಿ ಬರುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು, ನೋಡಲ್ ಅಧಿಕಾರಿಗಳು, ವೈದ್ಯರು ಮತ್ತು ಜನಪ್ರತಿನಿಧಿಗಳು ಶ್ರಮಿಸುತ್ತಿದ್ದರೂ ಸೋಂಕಿತರ ಚಿಕಿತ್ಸೆಗೆ ಹತ್ತಾರು ಸಮಸ್ಯೆಗಳು ಉದ್ಬವಿಸಿರುವುದು ಪ್ರತಿನಿತ್ಯ ನನ್ನ ಗಮನಕ್ಕೆ ಬರುತ್ತಿವೆ. ಪ್ರಮುಖವಾಗಿ ಔಷಧಗಳು ದೊರೆಯುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ವೈದ್ಯಕೀಯ ಸಲಕರಣೆಗಳು, ಸ್ಕ್ಯಾನಿಂಗ್ ಸೌಲಭ್ಯಗಳು ಅಗತ್ಯವಿರುವವರಿಗೆ ಸರ್ಕಾರಿ ಕೋಟಾದಡಿ ದೊರೆಯುತ್ತಿಲ್ಲ ಮತ್ತು ಆಸ್ಪತ್ರೆಗಳಲ್ಲಿ ಬೆಡ್‍ಗಳನ್ನು ಮಂಜೂರು ಮಾಡುವುದರಲ್ಲೂ ಸಮಸ್ಯೆಗಳು ಇರುವುದರ ಬಗ್ಗೆಯೂ ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿವೆ. ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್, ಜಿಲ್ಲಾ ಶಸ್ತ್ರಚಿಕಿ ತ್ಸಕಿ ಡಾ.ರಾಜೇಶ್ವರಿ, ಕೆಆರ್ ಆಸ್ಪತ್ರೆ ಆರ್‍ಎಂಓ ಡಾ.ದಿನೇಶ್, ಟ್ರಾಮಾ ಕೇರ್ ಸೆಂಟರ್ ಆರ್‍ಎಂಓ ಡಾ.ರಾಜೇಶ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರ್‍ಎಂಓ ಡಾ.ಮೋಹನ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »