ಪ್ರಸಾದ ಸೇವಿಸಿ 50ಕ್ಕೂ ಅಧಿಕ ಮಂದಿ ಅಸ್ವಸ್ಥರಾದ ಪ್ರಕರಣ ಲಿಂಗಪಟ್ಟಣಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
ಮಂಡ್ಯ

ಪ್ರಸಾದ ಸೇವಿಸಿ 50ಕ್ಕೂ ಅಧಿಕ ಮಂದಿ ಅಸ್ವಸ್ಥರಾದ ಪ್ರಕರಣ ಲಿಂಗಪಟ್ಟಣಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

October 30, 2020

ಕೋವಿಡ್ ನಿಯಮ ಉಲ್ಲಂಘಿಸಿ ಪ್ರಸಾದ ವಿತರಣೆ: ಶಾಸಕ ಡಾ.ಅನ್ನದಾನಿ ವಿಷಾದ
ಮಳವಳ್ಳಿ ಅ.29- ತಾಲೂಕಿನ ಹಲಗೂರು ಹೋಬ ಳಿಯ ಲಿಂಗಪಟ್ಟಣ ಗ್ರಾಮದಲ್ಲಿರುವ ಮಾರಮ್ಮನ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ 50 ಮಂದಿ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ. ವಿ.ವೆಂಕಟೇಶ್ ಅವರು ಲಿಂಗಪಟ್ಟಣ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮ ಪಂಚಾಯಿತಿಯ ವ್ಯಾಪ್ತಿಗಳಲ್ಲಿ ಯಾವುದೇ ದೇವಾಲಯದಲ್ಲಿ ಪ್ರಸಾದ ವಿತರಣೆಯನ್ನು ಮಾಡಬಾರದು, ಗ್ರಾಮದ ಎಲ್ಲರಿಗೂ ಕೋವಿಡ್-19 ಪರೀಕ್ಷೆ ಮಾಡಿಸಿ ಹಾಗೂ ಸ್ಯಾನಿಟೈಸರ್ ಸಿಂಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಅಸ್ವಸ್ಥಗೊಂಡ ವ್ಯಕ್ತಿಗಳ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಹಾಗೂ ಗ್ರಾಮದಲ್ಲಿ ಆಚರಿಸುವ ಯಾವುದೇ ಧಾರ್ಮಿಕ ಆಚರಣೆಗಳನ್ನು ತಮ್ಮ ಮನೆಯಲ್ಲಿಯೇ ಆಚರಿಸುವಂತೆ ಜನರಿಗೆ ಸೂಚಿಸಿ ದರು. ಈ ಭೇಟಿಯ ಸಂದರ್ಭದಲ್ಲಿ ತಹಶೀಲ್ದಾರ್ ಚಂದ್ರಮೌಳಿ, ತಾಲೂಕು ವೈದ್ಯಾಧಿಕಾರಿ ಡಾ.ವೀರ ಭದ್ರಪ್ಪ ಮತ್ತು ಗ್ರಾಮಸ್ಥರು ಹಾಜರಿದ್ದರು.

ಶಾಸಕರ ವಿಷಾದ: ಕೋವಿಡ್-19 ಸಂಬಂಧ ದೇವಾ ಲಯಗಳಲ್ಲಿ ತೀರ್ಥ, ಪ್ರಸಾದ ವಿತರಣೆಯನ್ನು ನಿಷೇಧ ಮಾಡಿದ್ದರೂ ಸಹ ಅದನ್ನು ಉಲ್ಲಂಘಿಸಿ ಪ್ರಸಾದ ನೀಡಿ ರುವುದು ಸರಿಯಲ್ಲ ಎಂದು ಶಾಸಕ ಡಾ.ಕೆ.ಅನ್ನದಾನಿ ವಿಷಾದಿಸಿದರು. ಮಳವಳ್ಳಿ ತಾಲೂಕಿನ ಲಿಂಗಪಟ್ಟಣ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದರು. ಈ ಘಟನೆಯಿಂದ 50 ಮಂದಿ ಭಕ್ತರು ಅಸ್ವಸ್ಥರಾಗಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿ ದೇವಸ್ಥಾನದಲ್ಲಿ ಪ್ರಸಾದ ವಿತರಿಸಿರುವುದು ಸರಿಯಲ್ಲ. ಕೋವಿಡ್-19ನಿಂದಾಗಿ ತೀರ್ಥ ಪ್ರಸಾದ ವಿತರಣೆ ಮಾಡ ಬಾರದು ಎಂದು ಸರ್ಕಾರ ಹೇಳಿದೆ, ಆದರೂ ಸಹ ಅದನ್ನು ಉಲ್ಲಂಘಟನೆ ಮಾಡಲಾಗಿದೆ ಎಂದರು.

ಈ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕಾನೂನು ರೀತಿಯಲ್ಲಿ ಕ್ರಮ ಆಗಬೇಕು. ಸದ್ಯದ ಕಾನೂನಿನ ಚೌಕಟ್ಟಿ ನಲ್ಲಿ ಪ್ರಸಾದ ವಿತರಣೆ ಹಾಗೂ ಸಹಕರಿಸುವುದು ಸರಿಯಲ್ಲ, ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಪ್ರಕರಣ ನಂತರ ರಾಜ್ಯದಲ್ಲಿ ಇದು ನಾಲ್ಕನೇ ಪ್ರಕರಣವಾಗಿದೆ. ಪ್ರಸಾದ ಸೇವನೆಯಿಂದ ಅಸ್ವಸ್ಥಗೊಂಡವರಲ್ಲಿ 8 ಮಂದಿ ಯನ್ನು ಹಲಗೂರಿನಿಂದ ತಾಲೂಕು ಆಸ್ಪತ್ರೆಗೆ ಸ್ಥಳಾಂ ತರ ಮಾಡಲಾಗಿದೆ. ಉತ್ತಮವಾದ ಚಿಕಿತ್ಸೆ ನೀಡುತ್ತಿದ್ದು, ಎಲ್ಲರೂ ಆರೋಗ್ಯವಾಗಿ ಇದ್ದಾರೆ ಎಂದು ಹೇಳಿದರು.

ತಕ್ಷಣದಿಂದಲೇ ಮುಜರಾಯಿ ಸೇರಿದಂತೆ ಯಾವುದೇ ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆ ಮಾಡಬಾರದು. ಈ ಬಗ್ಗೆ ಸಾರ್ವಜನಿಕರು ಸಹ ಎಚ್ಚರಿಕೆಯಿಂದ ಇರ ಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗು ವುದು. ದೇವಾಲಯಗಳಲ್ಲಿನ ಪ್ರಮುಖರೂ ಕೂಡ ಜಾಗರೂಕರಾಗಿರಬೇಕು ಎಂದು ತಿಳಿಸಿದರು.

ಡಿಹೆಚ್‍ಓ ಡಾ.ಎಚ್.ಪಿ.ಮಂಚೇಗೌಡ ಮಾತನಾಡಿ, ಅ.27 ರಂದು ಪ್ರಸಾದ ವಿತರಣೆ ಮಾಡಿದ ನಂತರ ಬೆಳಗ್ಗೆ ವಾಂತಿ ಭೇದಿಯಾಗಿದೆ. ಚಿಕಿತ್ಸೆಗೆಂದು ಮೊದಲು 11 ಮಂದಿ ಹಲಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಳ್ಳುತ್ತಿರುವ ಮಾಹಿತಿ ತಿಳಿದ ಆರೋಗ್ಯ ಇಲಾಖೆ ಗ್ರಾಮಕ್ಕೆ ಭೇಟಿ ನೀಡಿದೆ. ಸುಮಾರು 60 ಮಂದಿ ಪ್ರಸಾದ ಸೇವಿಸಿದ್ದರ ಮಾಹಿತಿ ಇದೆ. ಪ್ರಸಾದ ವಿಷಾಹಾರವಾಗಿ ರುವ ಸಾಧ್ಯತೆಯೂ ಇದೆ. ಎಲ್ಲರಿಗೂ ಗ್ರಾಮದ ಶಾಲೆಯ ಆವರಣದಲ್ಲಿ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ ಹತ್ತು ಮಂದಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಳವಳ್ಳಿ ತಾಲೂಕು ಆಸ್ಪತ್ರೆಗೆ ಸ್ಥಳಾಂ ತರ ಮಾಡಲಾಗಿದೆ ಎಂದು ಹೇಳಿದರು.

ಲಿಂಗಪಟ್ಟಣ ಗ್ರಾಮದಲ್ಲಿಯೇ ಆರೋಗ್ಯ ತಂಡ ವೊಂದು ಮೊಕ್ಕಾಂ ಹೊಡಿದೆ. ತಾಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ನೇತೃತ್ವದಲ್ಲಿ ನಾಲ್ವರು ವೈದ್ಯರು, 9 ಮಂದಿ ಆರೋಗ್ಯ ಸಹಾಯಕರು, 30 ಆಶಾ ಕಾರ್ಯ ಕರ್ತೆಯರು ಮನೆ-ಮನೆಗೆ ತೆರಳಿ ಎಲ್ಲರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಎಲ್ಲರೂ ಆರೋಗ್ಯವಾಗಿ ದ್ದಾರೆ. ಪ್ರಸಾದ ತಯಾರಿಸಿದ ಕುಟುಂಬದ ವೈದ್ಯರು ರಾಮನಗರದ ಚನ್ನಪಟ್ಟಣದವರು ಎಂದು ತಿಳಿದು ಬಂದಿದೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು ಕಾನೂನು ಕ್ರಮದ ಚಿಂತನೆ ನಡೆಸಲಾಗುವುದು ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಆಸ್ಪತ್ರೆಯ ಆಡಳಿ ತಾಧಿಕಾರಿ ಡಾ.ಮಾಧವನಾಯಕ, ಪುರಸಭೆ ಉಪಾ ಧ್ಯಕ್ಷ ನಂದಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಮುಖಂಡರಾದ ಮಲ್ಲೇಗೌಡ, ನಾಗರಾಜು, ಕೃಷ್ಣ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

Translate »