ವಿಶ್ವಕ್ಕೆ ಅಂಟಿರುವ ಕೊರೊನಾ ಶೀಘ್ರ ತೊಲಗಲಿ
ಮಂಡ್ಯ

ವಿಶ್ವಕ್ಕೆ ಅಂಟಿರುವ ಕೊರೊನಾ ಶೀಘ್ರ ತೊಲಗಲಿ

October 30, 2020

ಭಾರತೀನಗರ, ಅ.29(ಅ.ಸತೀಶ್)- ವಿಶ್ವಕ್ಕೆ ಅಂಟಿರುವ ಕೊರೊನಾ ಬಹುಬೇಗ ತೊಲ ಗಲಿ, ಜನರು ನಿರ್ಭಯವಾಗಿ ಜೀವಿಸಲಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಗಣೇಶ್ ತಿಳಿಸಿದರು.

ಕೆ.ಎಂ.ದೊಡ್ಡಿ ಗ್ರಾಪಂ ಆವರಣದಲ್ಲಿ ವಕೀ ಲರ ಸಂಘ, ಆರೋಗ್ಯ ಇಲಾಖೆ, ಕೆ.ಎಂ. ದೊಡ್ಡಿ ಗ್ರಾಮ ಪಂಚಾಯಿತಿ ಸಹಯೋಗ ದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕಿನ ವಿವಿಧ ಸಂಘಟನೆ ಗಳಿಂದ ಕೋವಿಡ್-19 ಕುರಿತು ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಾರ್ವಜನಿಕರು ತಪ್ಪದೇ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಗ್ರಾಮೀಣ ಭಾಗದಲ್ಲೂ ಕೋವಿಡ್ ಹರಡು ತ್ತಿದೆ. ಸಾರ್ವಜನಿಕರು ಗುಂಪಾಗಿ ಯಾವುದೇ ಸಭೆ ಸಮಾರಂಭಗಳಲ್ಲಿ ಸೇರಬಾರದು. ಅಂತರ ಕಾಯ್ದುಕೊಂಡು ಆರೋಗ್ಯ ಕಾಪಾಡಿಕೊಳ್ಳ ಬೇಕು ಎಂದರು. ಸರ್ಕಾರದ ಮಾರ್ಗಸೂಚಿ ಗಳನ್ನು ಪ್ರತಿಯೊಬ್ಬರು ಅನುಸರಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಮುಂದಾಗಬೇಕು. ಪ್ರಸ್ತುತ ರೋಗ ನಿಯಂತ್ರಣಕ್ಕೆ ಬರುತ್ತಿದ್ದರು ಸಾರ್ವಜನಿಕರು ರೋಗದ ಬಗ್ಗೆ ನಿರ್ಲಕ್ಷ್ಯ ತೋರಬಾರದೆಂದು ಎಚ್ಚರಿಸಿದರು.

ತಾಲೂಕು ಕಾರ್ಯನಿರ್ವಹಣಾಧಿ ಕಾರಿ ಮುನಿರಾಜು ಮಾತನಾಡಿ, ಕೋವಿಡ್- 19 ಸಂಪೂರ್ಣವಾಗಿ ನಿರ್ಮೂಲನೆ ಯಾಗುವವರೆಗೂ ಹಾಗೂ ಔಷಧ ಸಿಗುವ ವರೆಗೆ ಸೂಕ್ತ ಮುಂಜಾಗ್ರತೆ ವಹಿಸಬೇಕು. ಕೊರೊನಾ ಸೋಂಕು ನಮ್ಮವರನ್ನೇ ಅನುಮಾನದಿಂದ ನೋಡುವಂತಹ ಸ್ಥಿತಿ ನಿರ್ಮಿಸಿದ್ದು, ಪ್ರತಿಯೊಬ್ಬರೂ ಮುಂಜಾ ಗ್ರತಾ ಕ್ರಮ ವಹಿಸಬೇಕೆಂದರು.

ನಂತರ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಗಣೇಶ್ ಸ್ಥಳದಲ್ಲಿದ್ದ ಆಶಾ ಮತ್ತು ಅಂಗನ ವಾಡಿ ಕಾರ್ಯಕರ್ತರಿಗೆ ಪ್ರತಿಜ್ಞಾವಿಧಿ ಬೋಧಿಸಿ ದರು. ಮದ್ದೂರು-ಮಳವಳ್ಳಿ ಮುಖ್ಯರಸ್ತೆ ಯಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.

ಇದೇ ವೇಳೆ ನ್ಯಾಯಾಧೀಶರಾದ ಸರ್ಪ ರಾಜ್‍ಹುಸೇನ್, ಸೋಮನಾಥ್, ಸರ್ಕಲ್ ಇನ್‍ಪೆಕ್ಟರ್ ಶಿವಮಲ್ಲಯ್ಯ, ಸಬ್‍ಇನ್ಸ್ ಪೆಕ್ಟರ್ ಶೇಷಾದ್ರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧಾ, ಕಾರ್ಯದರ್ಶಿ ನಿರ್ಮಲಾ ಸೇರಿದಂತೆ ಇತರರಿದ್ದರು.

 

 

Translate »