ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಜಾಗೃತಿ ಆಂದೋಲನ
ಮಂಡ್ಯ

ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಜಾಗೃತಿ ಆಂದೋಲನ

October 30, 2020

ಮಂಡ್ಯ ಅ.29- ಕೋವಿಡ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮತ್ತು ಜನರಿಗೆ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಲು ಹಾಗೂ ಭ್ರಷ್ಟಾ ಚಾರ ಜಾಗೃತಿ ಅರಿವು ಆಂದೋಲನವನ್ನು ಜಿಲ್ಲಾ ನ್ಯಾಯಾಂಗ ಇಲಾಖೆ ವತಿಯಿಂದ ಹಮ್ಮಿಕೊಂಡಿರುವುದಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಬಿ.ವಸ್ತ್ರಮಠ ತಿಳಿಸಿದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೆÇಲೀಸ್ ಇಲಾಖೆ ಮತ್ತು ಮಂಡ್ಯ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾ ಡಿದ ಅವರು, ಸಾಂಕೇತಿಕವಾಗಿ ಜಿಲ್ಲೆಯ ಕೊತ್ತತ್ತಿ, ಹನಕೆರೆ, ಸಾತನೂರು, ಇಂಡು ವಾಳು ಮತ್ತು ಹೊಳಲು ಗ್ರಾಮದಲ್ಲಿ ಈ ಆಂದೋಲನ ವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಗ್ರಾಮ ಪಂಚಾಯಿತಿ ಅಧಿಕಾರಿಗಳು, ಕಾರ್ಯದರ್ಶಿಗಳು, ಸಾರ್ವಜನಿಕರು ಮತ್ತು ನ್ಯಾಯಾಧೀಶರ ಸಹಯೋಗದಲ್ಲಿ ಸಾರ್ವಜನಿಕ ರಿಗೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ಯಾನಿಟೈ ಸರ್ ಬಳಸುವುದರ ಬಗ್ಗೆ ಸಾರ್ವಜನಿಕ ರಿಗೆ ಅರಿವು ಮೂಡಿಸುವುದಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ಈ ಕಾರ್ಯಕ್ರಮವು ಅರ್ಥಪೂರ್ಣ ವಾದ ಮತ್ತು ವಿಶಿಷ್ಟವಾಗಿರುತ್ತದೆ. ಇಡೀ ವಿಶ್ವದಲ್ಲೇ ಕೊರೊನಾ ಸಮಾಜವನ್ನು ತಲ್ಲಣಗೊಳಿಸಿದೆ. ಕೊರೊನಾ ಬಾರದ ಹಾಗೆ ತಡೆಗಟ್ಟುವುದೇ ಈ ಕೋವಿಡ್-19 ಗೆ ಪ್ರಮುಖ ಚಿಕಿತ್ಸೆ ಎಂದರು.

ನಂತರ ಜಿಲ್ಲಾ ಮುಖ್ಯಕಾರ್ಯ ನಿರ್ವ ಹಣಾಧಿಕಾರಿ ಜುಲ್ಫಿಕರ್ ಉಲ್ಲಾ ಮಾತ ನಾಡಿ, ವ್ಯಾಕ್ಸಿನ್ ಬರುವವರೆಗೂ ಸಾರ್ವ ಜನಿಕರು ಮಾಸ್ಕ್ ಧರಿಸುವುದರಲ್ಲಿ, ಸಾಮಾ ಜಿಕ ಅಂತರ ಕಾಯ್ದುಕೊಳ್ಳುವುದರಲ್ಲಿ ಉದಾ ಸೀನ ಮಾಡಬಾರದು ಎಂದರು. ಗ್ರಾಮ ಪಂಚಾ ಯಿತಿಯ ಹಂತದಲ್ಲಿ ಅರಿವು ಮೂಡಿ ಸುವ ಚಟುವಟಿಕೆಗಳು ನಡೆಯುತ್ತಿರುವುದು ಉತ್ತಮ ವಾಗಿದೆ ಎಂದರು. ಈ ಚಾಲನಾ ಕಾರ್ಯ ಕ್ರಮದಲ್ಲಿ ಅಪರ ಜಿಲ್ಲಾ ವರಿಷ್ಠಾಧಿಕಾರಿ ಗಳು, ವಕೀಲರ ಸಂಘದ ಅಧ್ಯಕ್ಷ ಸಿ.ಎಲ್. ಶಿವಕುಮಾರ್ ಮತ್ತು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಉಪಸ್ಥಿತರಿದ್ದರು.

Translate »