ಬೇವುಕಲ್ಲು ಗ್ರಾಮದಲ್ಲಿ ವೃದ್ಧನ ಕೊಲೆ: ರೌಡಿಶೀಟರ್‍ನಿಂದ ದುಷ್ಕøತ್ಯ
ಮಂಡ್ಯ

ಬೇವುಕಲ್ಲು ಗ್ರಾಮದಲ್ಲಿ ವೃದ್ಧನ ಕೊಲೆ: ರೌಡಿಶೀಟರ್‍ನಿಂದ ದುಷ್ಕøತ್ಯ

October 30, 2020

ಮಂಡ್ಯ, ಅ.29- ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿ ಶೀಟರ್‍ವೊಬ್ಬ ವೃದ್ಧನನ್ನು ಇರಿದು ಕೊಲೆ ಮಾಡಿರುವ ಘಟನೆ ಬುಧವಾರ ರಾತ್ರಿ ತಾಲೂಕಿನ ಬೇವುಕಲ್ಲು ಗ್ರಾಮದಲ್ಲಿ ನಡೆದಿದೆ.

ಶಿವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬೇವುಕಲ್ಲು ಗ್ರಾಮದ ಚನ್ನವೀರಯ್ಯ(70) ಕೊಲೆಯಾದ ವೃದ್ಧ. ಅದೇ ಗ್ರಾಮದ ರೌಡಿ ಶೀಟರ್ ಮೋಹನ್ ಎಂಬಾತ ವೃದ್ಧನನ್ನು ಚಾಕುವಿ ನಿಂದ ಇರಿದು ಕೊಲೆ ಮಾಡಿದ್ದು, ಹಳೇ ವೈಷಮ್ಯವೇ ಕೊಲೆಗೆ ಕಾರಣ ಎಂದು ಚನ್ನವೀರಯ್ಯ ಅವರ ಅಣ್ಣನ ಮಗ ವಸಂತ್ ಕುಮಾರ್ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಘಟನೆ ವಿವರ: ಕಳೆದ ಆಗಸ್ಟ್ ತಿಂಗಳಿನಲ್ಲಿ ನಿವೇಶನವೊಂ ದಕ್ಕೆ ಸಂಬಂಧಿಸಿದಂತೆ ಚನ್ನವೀರಯ್ಯ ಅವರು ತನ್ನ ಮಗ ಬಾಲರಾಜು ವಿರುದ್ಧ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆ ಸಂದರ್ಭದಲ್ಲಿ ರೌಡಿಶೀಟರ್ ಮೋಹನ್ ಎಂಬಾತ ಬಾಲರಾಜುಗೆ ಬೆಂಬಲ ನೀಡಿದ್ದ. ಇದರಿಂದ ಬೇಸರಗೊಂ ಡಿದ್ದ ಚನ್ನವೀರಯ್ಯ, ಮೋಹನ್ ಮತ್ತು ಆತನ ತಾಯಿ ಸರೋಜಮ್ಮ ಅವರನ್ನು ನಿಂದಿಸುತ್ತಿದ್ದ. ಇದರಿಂದ ಎರಡು ಕುಟುಂಬ ಗಳ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಬುಧವಾರ ರಾತ್ರಿ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ವೃತ್ತದಲ್ಲಿ ಬರುತ್ತಿದ್ದ ಸರೋಜಮ್ಮ ಅವರನ್ನು ಚನ್ನವೀರಯ್ಯ ಅವಾಚ್ಯ ಶಬ್ಧ ಗಳಿಂದ ನಿಂದಿಸಿದ್ದಾನೆ ಎನ್ನಲಾಗಿದ್ದು, ಈ ವೇಳೆ ಅಲ್ಲಿಗೆ ಬಂದ ಮೋಹನ್ ತನ್ನ ತಾಯಿ ಯನ್ನು ನಿಂದಿಸುತ್ತಿದ್ದುದರಿಂದ ಆಕ್ರೋಶ ಗೊಂಡು ಚೆನ್ನವೀರಯ್ಯನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಡಿವೈಎಸ್‍ಪಿ ನವೀನ್, ವೃತ್ತ ನಿರೀಕ್ಷಕ ಮಹೇಶ್, ಎಸ್‍ಐ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಲೆಮರೆಸಿಕೊಂಡಿರುವ ಆರೋಪಿ ರೌಡಿಶೀಟರ್ ಮೋಹನ್, ಈ ಹಿಂದೆ ಮಂಡ್ಯ ರೌಡಿಯೊಬ್ಬನ ಕೊಲೆ ಯತ್ನದಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಇವನ ಮೇಲೆ ಒಂದು ಕೊಲೆ ಯತ್ನ ಪ್ರಕರಣವು ಕೂಡ ದಾಖಲಾಗಿದ್ದು, ಮೋಹನ್ ಇದರಲ್ಲಿ ಮೊದಲ ಆರೋಪಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.