ರಾಜ್ಯದಲ್ಲಿ ಒಂದೇ ದಿನ ದಾಖಲೆಯ 5030 ಮಂದಿಗೆ ಸೋಂಕು
ಮೈಸೂರು

ರಾಜ್ಯದಲ್ಲಿ ಒಂದೇ ದಿನ ದಾಖಲೆಯ 5030 ಮಂದಿಗೆ ಸೋಂಕು

July 24, 2020
  • 97 ಮಂದಿ ಸಾವು
  • ಒಟ್ಟು ಸೋಂಕಿತರು 80,863
  •  ಗುರುವಾರ 2071 ಜನ ಗುಣಮುಖ

ಬೆಂಗಳೂರು, ಜು.23-ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ಸೋಂಕಿತರ ಸಂಖ್ಯೆ ಗುರುವಾರ 5030ರಷ್ಟು ದಾಖಲಾಗಿದೆ. ಇದರೊಂ ದಿಗೆ ಸೋಂಕಿತರ ಸಂಖ್ಯೆ 80,863ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 97 ಮಂದಿ ಮೃತಪಟ್ಟಿದ್ದು, ಈವರೆಗೆ ಸೋಂಕಿನಿಂದ 1616 ಮಂದಿ ಸಾವನ್ನಪ್ಪಿದಂತಾಗಿದೆ.

ಇಂದು 2071 ಮಂದಿ ಗುಣಮುಖ ರಾಗಿದ್ದಾರೆ. ಇದರಿಂದಾಗಿ ಒಟ್ಟಾರೆ 29,310 ಮಂದಿ ಗುಣಮುಖರಾದಂ ತಾಗಿದೆ. 49,931 ಸಕ್ರಿಯ ಸೋಂಕಿ ತರ ಪೈಕಿ 640 ಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡ ಲಾಗುತ್ತಿದೆ. ಸೋಂಕಿತರ ಪ್ರಥಮ ಸಂಪರ್ಕದ 69,423 ಹಾಗೂ ದ್ವಿತೀಯ ಸಂಪರ್ಕದ 60,976 ಮಂದಿ ಸೇರಿ ದಂತೆ ಒಟ್ಟು 1,30,339 ಮಂದಿ ಯನ್ನು ಕ್ವಾರಂಟೈನ್ ಮಾಡಲಾಗಿದೆ.

ಬೆಂಗಳೂರಿನಲ್ಲಿ ಇಂದು 2207 ಮಂದಿಗೆ ಸೋಂಕು ತಗುಲಿದ್ದು, ರಾಜ ಧಾನಿಯಲ್ಲಿ ಸೋಂಕಿತರ ಸಂಖ್ಯೆ 39, 200ಕ್ಕೆ ಏರಿಕೆಯಾಗಿದೆ. ರಾಯಚೂರು 258, ಕಲಬುರಗಿ 229, ದಕ್ಷಿಣಕನ್ನಡ 218, ಬೆಳಗಾವಿ 214, ಧಾರವಾಡ 183, ಬಳ್ಳಾರಿ 164, ಬೆಂಗಳೂರು ಗ್ರಾಮಾಂ ತರ 161, ಉಡುಪಿ 160, ಮೈಸೂರು 116, ಹಾಸನ 108, ದಾವಣಗೆರೆ 107, ಬಾಗಲಕೋಟೆ 106, ಬೀದರ್ 94, ಉತ್ತರಕನ್ನಡ 83, ಶಿವಮೊಗ್ಗ 82, ಗದಗ 72, ಚಿಕ್ಕಬಳ್ಳಾಪುರ 65, ಚಿಕ್ಕ ಮಗಳೂರು 62, ತುಮಕೂರು 56, ಯಾದಗಿರಿ 55, ಮಂಡ್ಯ 50, ಕೋಲಾರ 40, ಚಾಮರಾಜನಗರ 28, ರಾಮನಗರ 26, ವಿಜಯಪುರ 20, ಹಾವೇರಿ 18, ಕೊಪ್ಪಳ 17, ಕೊಡಗು 13, ಚಿತ್ರದುರ್ಗ ದಲ್ಲಿ 10 ಪ್ರಕರಣ ದಾಖಲಾಗಿದೆ.

Translate »