ಮೈಸೂರಲ್ಲಿ 504 ಗ್ರಾಂ ಗಾಂಜಾ ವಶ;   ಇಬ್ಬರ ಸೆರೆ, ಮೂವರಿಗಾಗಿ ಶೋಧ
ಮೈಸೂರು

ಮೈಸೂರಲ್ಲಿ 504 ಗ್ರಾಂ ಗಾಂಜಾ ವಶ;  ಇಬ್ಬರ ಸೆರೆ, ಮೂವರಿಗಾಗಿ ಶೋಧ

September 14, 2020

ಮೈಸೂರು, ಸೆ.13(ಎಂಕೆ)- ಮೂವರು ಆಟೊದಲ್ಲಿ ಗಾಂಜಾ ಪೆÇಟ್ಟಣಗಳನ್ನು ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಎನ್. ಆರ್.ಠಾಣೆ ಪೊಲೀಸರು ಇಬ್ಬರು ಆರೋಪಿ ಗಳನ್ನು ಬಂಧಿಸಿ, 504 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬನ್ನಿಮಂಟಪದ ರಿಯಾನ್ (22), ಕೆ.ಆರ್.ಪೇಟೆಯ ಮದನ್ (22) ಬಂಧಿತರು. ಸೆ.11ರಂದು ಮೈಸೂ ರಿನಿಂದ ಕೆ.ಆರ್.ಪೇಟೆಗೆ ಆಟೊದಲ್ಲಿ ಗಾಂಜಾ ಪೊಟ್ಟಣಗಳನ್ನು ಸಾಗಿಸುತ್ತಿದ್ದ ಆರೋಪಿ ಗಳು ಟಿಪ್ಪು ವೃತ್ತದ ಬಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಒಬ್ಬ ಆರೋಪಿ ಪರಾರಿ ಯಾಗಿದ್ದಾನೆ. ಆಟೊ ತಪಾಸಣೆ ನಡೆಸಿ ದಾಗ ಪೊಲೀಸರಿಗೆ ಪ್ಲಾಸ್ಟಿಕ್ ಕವರ್ ನಲ್ಲಿದ್ದ 504 ಗ್ರಾಂನ ಗಾಂಜಾ ಪೊಟ್ಟಣಗಳು ಸಿಕ್ಕಿವೆ. ಬಂಧಿತರಾದ ಇಬ್ಬರನ್ನೂ ವಿಚಾ ರಣೆಗೆ ಒಳಪಡಿಸಿದಾಗ, ಗಾಂಜಾ ವಹಿವಾಟಿ ನಲ್ಲಿ ಇನ್ನೂ ಇಬ್ಬರು ಭಾಗಿಯಾಗಿರುವು ದಾಗಿ ತಿಳಿಸಿದ್ದಾರೆ. ಪರಾರಿಯಾದವನ ಜೊತೆಗೆ ಇನ್ನಿಬ್ಬರ ಮಾಹಿತಿ ಯನ್ನೂ ನೀಡಿದ್ದಾರೆ. ಮೂವರು ಆರೋಪಿಗಳಿಗಾಗಿ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಎನ್.ಆರ್.ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಶೇಖರ್ ಮಾಹಿತಿ ನೀಡಿದ್ದಾರೆ.

 

Translate »