ಮೈಸೂರು, ಸೆ.13(ಪಿಎಂ)- ರಾಜ್ಯದಲ್ಲಿ ಈವರೆಗೆ 7 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಎಂದರೆ ರಾಜ್ಯದಲ್ಲಿ ಸರ್ಕಾರ ಇದೆಯೋ? ಇಲ್ಲ ಸತ್ತು ಹೋಗಿದೆಯೋ? ಎಂದು ಆಕ್ರೋಶ ವ್ಯಕ್ತ ಪಡಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಮುಖ್ಯ ಮಂತ್ರಿ ಯಡಿಯೂರಪ್ಪ ಸರ್ಕಾರಕ್ಕೆ ಅಧಿ ಕಾರದಲ್ಲಿರಲು ಅರ್ಹತೆ ಇಲ್ಲ. ರಾಜೀ ನಾಮೆ ಕೊಟ್ಟು ರಾಜ್ಯಪಾಲರ ಆಡಳಿತ ಜಾರಿ ಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂ ತ್ರಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಮೈಸೂ ರಿನ ಜಯಚಾಮರಾಜ ವೃತ್ತದಲ್ಲಿ ಭಾನು ವಾರ ಪ್ರತಿಭಟನೆ ನಡೆಸಿ, ಬಳಿಕ ಮಾಧ್ಯಮ ದವರೊಂದಿಗೆ ಅವರು ಮಾತನಾಡಿದರು.
ಯಡಿಯೂರಪ್ಪ ಸರ್ಕಾರ ಕೊರೊನಾ ವನ್ನೇ ಮೆರೆತುಬಿಟ್ಟಿದೆ. ರಾಜ್ಯದಲ್ಲಿ ದಿನಕ್ಕೆ 100-150 ಮಂದಿ ಸಾವನ್ನಪ್ಪುತ್ತಿದ್ದಾರೆ. ಈವರೆಗೆ 7,100 ಮಂದಿ ಸೋಂಕಿಗೆ ಬಲಿ ಯಾಗಿದ್ದಾರೆ. ಆಸ್ಪತ್ರೆಗಳಲ್ಲಿ ಖಾಲಿ ಹಾಸಿಗೆ ಗಳಿಲ್ಲ, ವೆಟಿಲೇಟರ್ ಇಲ್ಲ. ಇಷ್ಟು ಸಮಸ್ಯೆ ಗಳಿದ್ದರೂ ಸರ್ಕಾರ ಜನರ ನೆರವಿಗೆ ಧಾವಿ ಸಿಲ್ಲ. ಯಡಿಯೂರಪ್ಪ ಅವರು ಕೊರೊನಾ ನಿಯಂತ್ರಣ ಸಂಬಂಧ ಶ್ವೇತಪತ್ರ ಹೊರ ಡಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಸಾವಿನ ಮನೆ ಆಗುತ್ತಿದೆ. ಇದು ನಿಮಗೆ ಗೌರವವೇ? ಎಂದು ಬಿಎಸ್‍ವೈ ಅವರನ್ನು ಪ್ರಶ್ನಿಸಿದ ವಾಟಾಳ್, ಕೊರೊನಾ ದಿಂದ ಮೃತಪಟ್ಟ ಬಡವರನ್ನು ಗುರುತಿಸಿ ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿ ಹಾರ ನೀಡಬೇಕು ಎಂದು ಆಗ್ರಹಿಸಿದರು.
ಹಿಂದಿ ಹೇರಿದರೆ ಕ್ರಾಂತಿ: ಇದೇ ವೇಳೆ ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ವ್ಯಕ್ತಪ ಡಿಸಿದ ವಾಟಾಳ್ ನಾಗರಾಜ್, ಬಿಜೆಪಿ ಹಾಗೂ ಆರ್‍ಎಸ್‍ಎಸ್‍ಗೆ ಹಿಂದಿ ಮೇಲೆ ಪ್ರೀತಿ ಇದೆ. ಆದರೆ ಹಿಂದಿ ಹೇರಲು ಹೊರಟರೆ ಕ್ರಾಂತಿ ಯಾಗಲಿದೆ. ಮೈಸೂರಿನಿಂದಲೇ ಕ್ರಾಂತಿ ಆರಂಭವಾಗಲಿದೆ ಎಂದು ಎಚ್ಚರಿಕೆ ನೀಡಿ ದರು. ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರತಿಭಟನೆಯಲ್ಲಿದ್ದರು.