ಹುಲಿ ಸಂರಕ್ಷಿತ ಪ್ರದೇಶಗಳ 50ನೇ ವಾರ್ಷಿಕೋತ್ಸವ
ಮೈಸೂರು

ಹುಲಿ ಸಂರಕ್ಷಿತ ಪ್ರದೇಶಗಳ 50ನೇ ವಾರ್ಷಿಕೋತ್ಸವ

April 10, 2023

ಮೈಸೂರು,ಏ.9(ಎಂಟಿವೈ)-ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ವಿಶ್ವದ ಹುಲಿಗಳ ಸಂಖ್ಯೆ ಯಲ್ಲಿ ಭಾರತದ ಪಾಲು ಶೇ.75ರಷ್ಟಿರುವುದು ಹೆಮ್ಮೆ ಪಡುವ ಸಂಗತಿ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಘಟಿ ಕೋತ್ಸವ ಭವನದಲ್ಲಿ ಅರಣ್ಯ ಇಲಾಖೆ, ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರಾಧಿಕಾರ(ಎನ್‍ಟಿಸಿಎ) ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಹುಲಿ ಸಂರಕ್ಷಿತ ಪ್ರದೇಶಗಳ 50ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ 2022ನೇ ಸಾಲಿನ ಹುಲಿ ಸಮೀಕ್ಷಾ ವರದಿ ಬಿಡುಗಡೆ ಮಾಡಿ ಮಾತನಾಡಿದ ಅವರು, ವಿಶ್ವದ ಹುಲಿಗಳ ಸಂಖ್ಯೆಯಲ್ಲಿ ಶೇ.75ರಷ್ಟು ಹುಲಿಗಳು ಭಾರತದಲ್ಲಿ ನೆಲೆಸಿರುವುದು ಸಂತೋಷ ವನ್ನುಂಟು ಮಾಡಿದೆ. ಅಳಿವಿ ನಿಂಚಿನಲ್ಲಿದ್ದ ಹುಲಿಗಳ ಸಂರಕ್ಷಣೆಗಾಗಿ 1973ರಲ್ಲಿ ಹುಲಿ ಯೋಜನೆ ಜಾರಿ ಗೊಳಿಸ ಲಾಯಿತು. ಈ ಹುಲಿ ಯೋಜನೆಗೆ 50 ವರ್ಷ ಸಂದಿದ್ದು, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದಿದೆ. ಈ ಸಂದರ್ಭ ದಲ್ಲಿ ಹುಲಿ ಸಂರಕ್ಷಿತ ಪ್ರದೇಶಗಳ ಸಂಖ್ಯೆಯೂ ಹೆಚ್ಚಾಗಿದೆ. ಹುಲಿಗಳ ಸಂಖ್ಯೆಯೂ ಹೆಚ್ಚಾಗಿದೆ. ಅಲ್ಲದೆ, ಹುಲಿ ಸೇರಿ ದಂತೆ ವನ್ಯಜೀವಿಗಳ ಸಂರಕ್ಷಣೆಗಾಗಿ ದೇಶದಲ್ಲಿ ಕೈಗೊಂಡಿ ರುವ ಕ್ರಮದಿಂದಾಗಿ ನಮ್ಮ ದೇಶದಲ್ಲಿ ಹುಲಿಗಳು ಸೇರಿದಂತೆ ವಿವಿಧ ಪ್ರಾಣಿಗಳ ಸಂಖ್ಯೆಯಲ್ಲಿ ಗಮನಾರ್ಹ ಸುಧಾರಣೆ ಕಂಡಿದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.

ವಿಶ್ವದ ಅನೇಕ ರಾಷ್ಟ್ರಗಳ ವನ್ಯಜೀವಿ ಪ್ರೇಮಿಗಳಲ್ಲಿ ಆತಂಕ ಮನೆ ಮಾಡಿದೆ. ಆ ದೇಶದಲ್ಲಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿ ಹಾಗೂ ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಅಲ್ಲಿನ ಜನರ ಚಿಂಗೆಗೀಡು ಮಾಡಿದೆ. ಆದರೆ, ನಮ್ಮಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಅನೇಕ ಕಾರಣವಿದೆ.

ಭಾರತ ತನ್ನದೇ ಆದ ಸಂಸ್ಕøತಿ ಮತ್ತು ಆಚರಣೆ ಹೊಂದಿರುವ ರಾಷ್ಟ್ರವಾಗಿದೆ. ಉತ್ತಮ ವಾದ ಜೀವವೈವಿದ್ಯತೆ ಹೊಂದಿದೆ. ಬುಡ ಕಟ್ಟು ಸಮುದಾಯ ಸೇರಿದಂತೆ ಕೆಲವು ಜಾತಿ, ಜನಾಂಗದವರು ಇಂದಿಗೂ ಹುಲಿ ಯನ್ನು ಆರಾಧಿಸುವ ಸಂಪ್ರದಾಯ ಹೊಂದಿ ದ್ದಾರೆ. ಪ್ರಕೃತಿಯೊಂದಿಗೆ ಜೀವನ ನಡೆಸುವ ಪದ್ಧತಿಯೂ ನಮ್ಮಲ್ಲಿ ಕಾಣ ಬಹುದು. ಬುಡಕಟ್ಟು ಸಮುದಾಯ ವನ್ಯ ಸಂಪತ್ತಿಗೆ ಸಂರಕ್ಷಣೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ ಹತ್ತು ಸಾವಿರ ವರ್ಷ ಗಳಷ್ಟು ಹಳೆಯದಾದ `ರಾಕ್ ಆರ್ಟ್’ ನಲ್ಲಿ ಹುಲಿಗಳ ಚಿತ್ರಣಗಳಿವೆ. ಮಧ್ಯ ಭಾರತದ ಭರಿಯಾ (ಭಾಡಿಯಾ) ಸಮು ದಾಯ ಮತ್ತು ಮಹಾರಾಷ್ಟ್ರದ ವರ್ಲಿ ಸಮು ದಾಯದವರು ಹುಲಿಯನ್ನು ಪೂಜಿಸು ತ್ತಾರೆ ವಿವಿಧ ಸಮುದಾಯಗಳು ಹುಲಿಯನ್ನು ಬಂಧು, ಸ್ನೇಹಿತ ಮತ್ತು ಸಹೋದರ ಎಂದು ತಿಳಿಯುತ್ತಾರೆ. ದೇಶದಲ್ಲಿ ಆಧ್ಯಾ ತ್ಮಿಕವಾಗಿಯೂ ಹುಲಿಗೆ ಸ್ಥಾನಮಾನ ನೀಡಲಾಗಿದೆ. ದುರ್ಗ ಮತ್ತು ಅಯ್ಯಪ್ಪ ಸ್ವಾಮಿಗೂ ಹುಲಿಯೇ ವಾಹನವಾಗಿದೆ. ಭಾರತದಲ್ಲಿ ಹುಲಿಗೆ ಪೂಜನೀಯ ಸ್ಥಾನಮಾನ ಇದೆ ಎಂದರು.

ಈ ಹಿಂದೆ ದೇಶದ ಪವಿತ್ರ ನದಿ ಯಾಗಿರುವ ಗಂಗಾ ನದಿ ಮಲೀನಗೊಂ ಡಿತ್ತು. ಅದು ಅಪಾಯದ ಸ್ಥಿತಿಯಲ್ಲಿತ್ತು. ಅದರಲ್ಲಿದ್ದ ಜಲಚರಗಳಿಗೆ ಸಂಕಷ್ಟ ಒದ ಗಿತ್ತು. ಆದರೆ, ಗಂಗಾ ನದಿಯನ್ನು ಸ್ವಚ್ಛ ಗೊಳಿಸಿದ ಹಿನ್ನೆಲೆಯಲ್ಲಿ ಇದೀಗ ಅದರ ಮಹತ್ವ ಹಾಗೂ ಪಾವಿತ್ರತೆ ಕಾಪಾಡು ವುದರೊಂದಿಗೆ ಜಲಚರಗಳ ಹಿತ ಕಾಯ ಲಾಗಿದೆ. ಈ ಸಾಧನೆಗಳಿಗೆ ಜನರ ಸಹ ಭಾಗಿತ್ವ ಮತ್ತು ಸಂರಕ್ಷಣಾ ಸಂಸ್ಕೃತಿ ಅಗತ್ಯ. ಪರಿಸರ ಸಂರಕ್ಷಣೆಯಾದಂತೆ ಜೀವವೈ ವಿದ್ಯತೆ ಸಂರಕ್ಷಣೆ ಸಾಧ್ಯ. ದೇಶದಲ್ಲಿ ಹೊಸದಾಗಿ 11 ಜೌಗು ಪ್ರದೇಶಗಳನ್ನು ರಾಮ್‍ಸರ್‍ಸೈಟ್ ಪಟ್ಟಿಗೆ ಸೇರಿಸಲಾಗಿದ್ದು, ಇದೀಗ ದೇಶದಲ್ಲಿ ರಾಮ್‍ಸರ್ ಸೈಟ್‍ಗಳ ಸಂಖ್ಯೆಯನ್ನು 75ಕ್ಕೆ ಏರಿದೆ. 2019ಕ್ಕೆ ಹೋಲಿಸಿದರೆ 2021ರ ವೇಳೆಗೆ ಭಾರತ ದಲ್ಲಿ 2200 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅರಣ್ಯ ಬೆಳೆಸಿ, ಮರಗಳ ಹೊದಿಕೆಯಾಗುವಂತೆ ಕ್ರಮ ಕೈಗೊಳ್ಳ ಲಾಗಿದೆ. ಕಮ್ಯುನಿಟಿ ರಿಸರ್ವ್ (ಸಮು ದಾಯ ಮೀಸಲು ಅರಣ್ಯ)ಸಂಖ್ಯೆಯು 43ರಿಂದ 100ಕ್ಕೆ ಹೆಚ್ಚಳವಾಗಿದೆ. ಪರಿಸರ ಸೂಕ್ಷ್ಮ ವಲಯ, ಅಧಿಸೂಚಿಸಲಾದ ರಾಷ್ಟ್ರೀಯ ಉದ್ಯಾನವನಗಳು ಹಾಗೂ ಅಭಯಾರಣ್ಯಗಳ ಸಂಖ್ಯೆಯು 9 ರಿಂದ 468 ಕ್ಕೆ ಹೆಚ್ಚಾಗಿದೆ ಎಂದು ವಿವರಿಸಿದರು.

ನಾನು ಗುಜರಾತಿನ ಮುಖ್ಯಮಂತ್ರಿ ಯಾಗಿದ್ದಾಗ ವನ್ಯಜೀವಿ ಸಂರಕ್ಷಣೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದೆ. ಸಿಂಹಗಳ ಸಂತತಿ ಉಳಿವಿಗಾಗಿ ಕಾರ್ಯಕ್ರಮ ರೂಪಿಸ ಲಾಯಿತು. ಯಾವುದೇ ಒಂದು ಭೌಗೋ ಳಿಕ ಪ್ರದೇಶಕ್ಕೆ ಕಾಡು ಪ್ರಾಣಿಗಳನ್ನು ಸೀಮಿತಗೊಳಿಸುವುದರಿಂದ ಅವುಗಳನ್ನು ಉಳಿಸಲು ಸಾಧ್ಯವಿಲ್ಲ. ಅನೇಕ ಕಾಡಂ ಚಿನ ಗ್ರಾಮಗಳ ಜನ, ಹಾಡಿಗಳಲ್ಲಿರುವ ಆದಿವಾಸಿಗಳು ಹಾಗೂ ಸ್ಥಳೀಯ ಜನರು ಪ್ರಾಣಿಗಳ ನಡುವೆ ಭಾವನಾತ್ಮಕ ಮತ್ತು ಆರ್ಥಿಕತೆಯ ಸಂಬಂಧವನ್ನು ಹೊಂದಿ ದ್ದಾರೆ. ಇದಕ್ಕಾಗಿಯೇ ಗುಜರಾತ್‍ನಲ್ಲಿ ವನ್ಯಜೀವಿ ಮಿತ್ರ ಕಾರ್ಯಕ್ರಮವನ್ನು ಆರಂ ಭಿಸಲಾಗಿದೆ. ಅಲ್ಲಿ ಬೇಟೆಯಂತಹ ಚಟು ವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ನಗದು ಬಹುಮಾನದ ಪೆÇ್ರೀತ್ಸಾಹವನ್ನು ನೀಡಲಾಯಿತು. ಘಿರ್ ಪ್ರದೇಶದಲ್ಲಿ ಸಿಂಹ ಗಳ ಪುನರ್ವಸತಿ ಕೇಂದ್ರವನ್ನು ತೆರೆಯ ಲಾಗಿದೆ. ಅರಣ್ಯ ಇಲಾಖೆಯಲ್ಲಿ ಮಹಿಳಾ ಬೀಟ್ ಗಾರ್ಡ್ ಮತ್ತು ಫಾರೆಸ್ಟರ್‍ಗಳನ್ನು ನೇಮಿಸುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಗಿರ್‍ನಲ್ಲಿ ಪ್ರವಾಸೋದ್ಯಮ ಮತ್ತು ಪರಿಸರ ಪ್ರವಾಸೋದ್ಯಮದ ಬೃಹತ್ ಪರಿಸರ ವ್ಯವಸ್ಥೆಯಾಗಿ ರೂಪು ಗೊಂಡಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಕೇಂದ್ರದ ಪರಿಸರ ಹಾಗೂ ಅರಣ್ಯ ಸಚಿವ ಭೂಪೇಂದ್ರ ಯಾದವ್, ಕೇಂದ್ರದ ಪರಿಸರ ಮತ್ತು ಅರಣ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಭೆ ಉಪಸ್ಥಿತರಿದ್ದರು.

Translate »