ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳ  50ನೇ ದೀಕ್ಷಾ ಮಹೋತ್ಸವ
ಹಾಸನ

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳ 50ನೇ ದೀಕ್ಷಾ ಮಹೋತ್ಸವ

December 18, 2018

ಶ್ರವಣಬೆಳಗೊಳ: ಜೈನ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ 50ನೇ ವರ್ಷದ ದೀಕ್ಷಾ ಮಹೋತ್ಸವ ಸಮಾರಂಭವು ಶ್ರವಣಬೆಳಗೊಳದಲ್ಲಿ ವಿಜೃಂಭಣೆಯಿಂದ ನೆರವೇರಿತು.

ದೀಕ್ಷಾ ಸಮಾರಂಭದ ಸಾನಿಧ್ಯ ವಹಿ ಸಿದ್ದ ಮುನಿಶ್ರೀ ಅಮರಕೀರ್ತಿ ಮಹಾ ರಾಜರು ಮಾತನಾಡಿ, ಚಾರುಕೀರ್ತಿಯ ವರು ಕ್ಷೇತ್ರದ ಸರ್ವಾಂಗೀಣ ವಿಕಾಸ ದೊಂದಿಗೆ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ಸಾರ್ವಜನಿಕ ಆಸ್ಪತ್ರೆ, ಬಸದಿಗಳ ಜೀರ್ಣೋದ್ಧಾರ, ನಿರಂತರ ತ್ಯಾಗಿಗಳ ಸೇವೆ, 12 ವರ್ಷಗಳಿಗೊಮ್ಮೆ ಅಂತಾ ರಾಷ್ಷ್ರೀಯ ಮಟ್ಟದ ಮಹಾಮಸ್ತಕಾ ಭಿಷೇಕ ಮಹೋತ್ಸವಗಳ ನೇತೃತ್ವ ವಹಿಸಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ 50ನೇ ವರ್ಷದ ದೀಕ್ಷಾ ಸ್ಮರಣಾರ್ಥ ಸ್ವಾಮೀಜಿಯವರಂತೆ ಕಾವಿ ವಸ್ತ್ರ ಧರಿಸಿ, ಪಿಂಛಿ ಹಿಡಿದ ಮಕ್ಕಳು ಮೆರವಣಿಗೆಗೆ ಮೆರಗು ನೀಡಿದರು. ಸ್ವಾಮೀಜಿಯವರ 5 ದಶಕದ ದೀಕ್ಷಾ ಪರಂಪರೆಯ ವಿವಿಧ ಭಾವಚಿತ್ರಗಳನ್ನು ಹಿಡಿದ 50 ವಿದ್ಯಾರ್ಥಿ ಗಳು, ಶ್ವೇತ ವಸ್ತ್ರ ಮತ್ತು ಮೈಸೂರು ಪೇಟ ಧರಿಸಿ ಅಷ್ಟವಿಧಾರ್ಚನೆ ಸಾಮಗ್ರಿ ಸಹಿತ ಶ್ರೀಫಲ-ಪುಷ್ಪ ಬುಟ್ಟಿಗಳನ್ನು ಹಿಡಿದ 50 ಶ್ರಾವಕರು, ಮಂಗಲ ಕಲಶ ಹೊತ್ತ 50 ಶ್ರಾವಕಿಯರು, ಧರ್ಮ ಧ್ವಜವನ್ನು ಹಿಡಿದ 50 ಗುರುಕುಲದ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ವಿವಿಧ ಕಲಾ ತಂಡಗಳೊಂದಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿ ಸಿದ ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಮುನಿಶ್ರೀ ಅಮೋಘಕೀರ್ತಿ ಮಹಾ ರಾಜರ ಜನ್ಮಜಯಂತಿ ಕಾರ್ಯಕ್ರಮ ನಿಗದಿ ಯಾಗಿತ್ತು. ಆದರೆ ಮುನಿಶ್ರೀ ಅಮರ ಕೀರ್ತಿ ಮಹಾರಾಜರು ಹಾಗೂ ಮುನಿ ಶ್ರೀ ಅಮೋಘಕೀರ್ತಿ ಮಹಾರಾಜರ ಮಾರ್ಗದರ್ಶನದಂತೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ದೀಕ್ಷಾ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನಾ ಗಿಸುವ ಮೂಲಕ ಭಟ್ಟಾರಕ ಶ್ರೀಗಳಿಗೆ ಅಭಿನಂದನೆ ಸಮರ್ಪಿಸಲಾಯಿತು.

ಮುಂಬೈನ ವೀರಸೇವಾ ಟ್ರಸ್ಟ್, ತುಮ ಕೂರು ಜೈನ ಸಮಾಜ, ಶ್ರವಣಬೆಳಗೊಳ ಜೈನ ಸಮಾಜ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಸ್ವಾಮೀಜಿಯವರಿಗೆ ರಜತ ಜಿನವಾಣಿ, 16 ಸ್ವಪ್ನಗಳ ರಜತ ತೋರಣ, ರಜತ ಮಾನಸ್ಥಂಭ, ರಜತ ಅಷ್ಟಮಂಗಲಗಳು, ಸ್ವರ್ಣಲೇಪಿತ ರಜತ ಧರ್ಮದ್ವಜ, ಚಂದ್ರ ಕಾಂತ ಶಿಲೆಯ ಬಾಹುಬಲಿ ಮೂರ್ತಿ, ರಜತ ಅಷ್ಠಪ್ರತಿಹಾರ್ಯ, ರಜತ ನಂದೀ ಶ್ವರ ಮಂದಿರ ಪ್ರತಿಕೃತಿ ಸೇರಿದಂತೆ ವಿವಿಧ 50 ಮಂಗಲ ವಸ್ತುಗಳ ಜೊತೆಗೆ “ಧ್ಯಾನ ಚಿಂತಾಮಣಿ” ಗೌರವ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.

ಮುಂಬೈನ ವೀರಸೇವಾ ಟ್ರಸ್ಟ್ ಮತ್ತು ಮಥುಗಿರಿಯ ಆಚಾರ್ಯ ಶಾಂತಿ ಸಾಗರ ಗುರುಕುಲದ ವಿದ್ಯಾರ್ಥಿಗಳಿಂದ ಚಾರುಕೀರ್ತಿ ಶ್ರೀಗಳ ಸಾಧನೆಯ ಸಾಕ್ಷ್ಯ ಚಿತ್ರ ಹಾಗೂ ಶ್ರೀಗಳ ಚಿತ್ರಪಟವನ್ನು ಅನಾವರಣ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಮಸ್ತ ತ್ಯಾಗಿ ವೃಂದಾರ್ಯಿಕಾ ಮಾತಾಜಿಯವರು, ಮಹಾ ಮಸ್ತಕಾಭಿಷೇಕ ಮಹೋತ್ಸವ ರಾಷ್ಟ್ರೀಯ ಸಮಿತಿ ಅಧ್ಯಕ್ಷೆ ಸರಿತಾ ಎಂ.ಕೆ.ಜೈನ್, ಮುಂಬೈನ ವಾಲ್‍ಚಂದ್ ಜೈನ್, ಶ್ರವಣಬೆಳಗೊಳ ಜೈನ ಸಮಾ ಜದ ಅಧ್ಯಕ್ಷ ಜಿ.ಪಿ. ಪದ್ಮಕುಮಾರ್, ಕೂಷ್ಮಾಂಡಿನಿ ಮಹಿಳಾ ಸಮಾಜದ ಅಧ್ಯಕ್ಷೆ ಪೂರ್ಣಿಮಾ ಅನಂತಪದ್ಮನಾಭ್ ಮುಂತಾದವರಿದ್ದರು.

Translate »