ಕೆಆರ್‍ಎಸ್‍ನಿಂದ ತ.ನಾಡಿಗೆ 5191 ಕ್ಯೂಸೆಕ್ ನೀರು
ಮಂಡ್ಯ

ಕೆಆರ್‍ಎಸ್‍ನಿಂದ ತ.ನಾಡಿಗೆ 5191 ಕ್ಯೂಸೆಕ್ ನೀರು

June 21, 2021

ಶ್ರೀರಂಗಪಟ್ಟಣ, ಜೂ.20 (ವಿನಯ್ ಕಾರೇಕುರ)- ತಾಲೂಕಿನ ಕೃಷ್ಣರಾಜ ಸಾಗರ ಅಣೆಕಟ್ಟೆ ಭರ್ತಿ ಯಾಗುವ ಮುನ್ನವೇ ಅಣೆಕಟ್ಟೆಯಿಂದ ತಮಿಳು ನಾಡಿಗೆ ನೀರು ಹರಿಸಲಾ ಗುತ್ತಿದೆ ಎಂದು ರೈತರು ಆರೋಪ ಮಾಡಿದ್ದಾರೆ. ಜಲಾಶಯದ ಒಳಹರಿವು ಹೆಚ್ಚಾಗಿ ನೀರಿನಮಟ್ಟ ಏರಿಕೆ ಯಾಗುತ್ತಿದ್ದಂತೆ ಜಲಾ ಶಯದಿಂದ ಕಾವೇರಿ ನದಿಗೆ 5191 ಕ್ಯೂಸೆಕ್ ನೀರು ಹರಿಸಲಾಗಿದೆ. ಮುಂಗಾರು ಮಳೆ ಚುರುಕುಗೊಂಡಿದ್ದು, ತಮಿಳುನಾಡಿಗೆ ಕಾವೇರಿ ನದಿ ಮೂಲಕ ಪ್ರತಿದಿನ ಜಲಾಶಯ ದಿಂದ 5191 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಸದ್ಯಜಲಾಶಯದಲ್ಲಿ 91 ಅಡಿ ನೀರು ಸಂಗ್ರಹವಾಗಿದ್ದು, ಜಲಾಶಯದ ಒಳ ಹರಿವು ಕೂಡ 20 ಸಾವಿರ ಕ್ಯೂಸೆಕ್‍ಗೆ ಏರಿಕೆಯಾಗಿದೆ. ಕೊಡಗಿನಲ್ಲಿ ಹೆಚ್ಚಿನ ಮಳೆ ಬೀಳುತ್ತಿರುವುದರಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಜಲಾಶಯ ಭರ್ತಿಯಾಗುವ ಮುನ್ನವೇ ಜಿ¯್ಲÉಯ ನಾಲೆಗಳಿಗೂ ನೀರು ಹರಿಸದೆ ತಮಿಳುನಾಡಿಗೆ ನೀರು ಬಿಡುತ್ತಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಭಯದಿಂದ ನೀರು: ನಮ್ಮ ಸರ್ಕಾರಗಳು ಭಯದಿಂದ ತಮಿಳುನಾಡಿಗೆ ನೀರು ಹರಿಸುವ ಕಾರ್ಯ ಮಾಡುತ್ತಿದೆ. ಇದೀಗ ಮುಂಗಾರು ಮಳೆ ಪ್ರಾರಂಭವಾಗಿ ಇನ್ನು 15 ದಿನ ಕಳೆದಿಲ್ಲ. ಆಗಲೇ ತಮಿಳುನಾಡಿಗೆ ನೀರು ಹರಿಸಲು ಮುಂದಾಗಿದೆ. ಇಲ್ಲಿನ ರೈತರ ಬಗ್ಗೆ ಯಾವುದೇ ಚಿಂತನೆ ಇಲ್ಲದೆ ಜಲಾಶಯ ಭರ್ತಿ ಮಾಡದೆ ನದಿ ಮೂಲಕ ನೀರು ಹರಿಸುವುದು ಅಸಮಾಧಾನ ತಂದಿದ್ದು, ಕೂಡಲೇ ತಮಿಳು ನಾಡಿಗೆ ಹರಿಸುತ್ತಿರುವ ನೀರು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಚಳುವಳಿ ನಡೆಸಲಾಗು ತ್ತದೆ ಎಂದು ತಾಲೂಕು ರೈತ ಸಂಘ ಅಧ್ಯಕ್ಷ ಕೃಷ್ಣೇಗೌಡ ಮರಳಗಾಲ ಆಗ್ರಹಿಸಿದರು.

Translate »