ಸರ್‌ಎಂವಿ ಕೊಡುಗೆಗೆ ಅವರಿಗೆ ಯಾವ ಪ್ರಶಸ್ತಿ ನೀಡಿದರೂ ಕಮ್ಮಿ
ಮೈಸೂರು

ಸರ್‌ಎಂವಿ ಕೊಡುಗೆಗೆ ಅವರಿಗೆ ಯಾವ ಪ್ರಶಸ್ತಿ ನೀಡಿದರೂ ಕಮ್ಮಿ

September 16, 2018

ಮೈಸೂರು:  ಸರ್.ಎಂ. ವಿಶ್ವೇಶ್ವರಯ್ಯ ಅವರು ನೀಡಿರುವ ಕೊಡುಗೆಗೆ ಯಾವ ಪ್ರಶಸ್ತಿಯನ್ನು ನೀಡಿದರೂ ಕಡಿಮೆ ಎಂದು ಬಾಹ್ಯಾಕಾಶ ಆಯೋಗದ ಸದಸ್ಯ ಎ.ಎಸ್.ಕಿರಣ್‍ಕುಮಾರ್ ಅಭಿಪ್ರಾಯಪಟ್ಟರು.

ನಗರದ ಜೆಎಲ್‍ಬಿ ರಸ್ತೆಯ ದಿ ಇನ್ಸ್‍ಟಿ ಟೂಷನ್ ಆಫ್ ಇಂಜಿನಿಯರಿಂಗ್ (ಇಂಡಿಯಾ) ಸಂಸ್ಥೆ ವತಿಯಿಂದ ಸರ್‌ಎಂವಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 51ನೇ ಇಂಜಿನಿಯರುಗಳ ದಿನಾಚರಣೆ ಮತ್ತು ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸರ್ ಎಂ.ವಿ. ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ, ಅವರು ಮಾತನಾಡಿದರು.

ನಮ್ಮ ದೇಶ ಕಂಡ ಅದ್ಭುತ ಪ್ರತಿಭೆ ಸರ್ ಎಂ.ವಿಶ್ವೇಶ್ವರಯ್ಯ ಅವರಿಗೆ ನಮ್ಮ ದೇಶ ಭಾರತ ರತ್ನ ನೀಡಿ ಗೌರವಿಸಿದಂತೆ ಬ್ರಿಟಿಷ್ ಸರ್ಕಾರ ಮತ್ತು ವಿಶ್ವದ ಹಲವಾರು ದೇಶಗಳು ಅವರನ್ನು ಗೌರವಿಸಿವೆ. ಆದರೆ, ಸರ್ ಎಂ.ವಿಶ್ವೇಶ್ವರಯ್ಯ ಅವರು ನೀಡಿರುವ ಕೊಡುಗೆಗೆ ಯಾವ ಪ್ರಶಸ್ತಿಯನ್ನು ನೀಡಿದರೂ ಕಡಿಮೆ ಎಂದರು.

ಪುರಾತನ ಕಾಲದಿಂದಲೂ ವೈಜ್ಞಾನಿಕ ತಳಹದಿಯ ಮೇಲೆ ನಿಂತಿರುವ ಭಾರತ ಕಾಲದಿಂದ ಕಾಲಕ್ಕೆ ಎಲ್ಲ ಕ್ಷೇತ್ರಗಳಲ್ಲೂ ತನ್ನ ಶಕ್ತಿ ಸಾಮಥ್ರ್ಯವನ್ನು ತೋರಿಸಿಕೊಟ್ಟಿ ರುವುದು ಎಲ್ಲರಿಗೂ ತಿಳಿದಿದೆ. ಆದರೆ ಮಧ್ಯಂತರದಲ್ಲಿ ಪರಕೀಯರದಾಳಿಗೆ ಸಿಲುಕಿದ ಭಾರತ ತನ್ನ ಉಜ್ವಲ ಪರಂ ಪರೆ, ಸಂಸ್ಕೃತಿಯನ್ನು ಕಳೆದುಕೊಳ್ಳಬೇಕಾಗಿ ಬಂದುದು ದುರ್ದೈವ.

ಆದರೆ ಸ್ವಾತಂತ್ರ್ಯಾನಂತರದಲ್ಲಿ ನಿಧಾನ ವಾಗಿಯಾದರೂ ಭಾರತ ತನ್ನ ಶಕ್ತಿ ಸಾಮಥ್ರ್ಯವನ್ನು ತೋರಿಸುತ್ತಿರುವುದು ಸಂತಸದ ಸಂಗತಿ. ಇಂಥ ಸಂದರ್ಭದಲ್ಲಿ ನಮ್ಮ ಯುವ ಜನಾಂಗ ಇಂದಿನ ಆಧು ನಿಕ ವಿಜ್ಞಾನವನ್ನು ನಮ್ಮ ಪರಂಪರೆ, ಸಂಸ್ಕೃತಿಯಲ್ಲಿ ಮೇಳೈಸಿಕೊಂಡು ಅಭಿವೃದ್ಧಿ ಪಥದತ್ತ ಸಾಗಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಾವು ಕಲಿತ ವಿಷಯವನ್ನು ಕೌಶಲ್ಯವಾಗಿ ಪರಿವರ್ತಿಸಿಕೊಳುವುದರತ್ತ ಹೆಚ್ಚು ಗಮನ ಹರಿಸಬೇಕಿದೆ ಎಂದು ಹೇಳಿದರು.

ದೇಶವನ್ನು ಸುಸ್ಥಿರ ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾದರೆ ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕೆಂಬುದರ ಬಗ್ಗೆ ನಮ್ಮ ಪುರಾತನರು ಬಹಳಷ್ಟು ಮಾಹಿತಿಯನ್ನು ಕೊಟ್ಟಿದ್ದಾರೆ. ಸದ್ಯ ಭಾರತ ವಿಶ್ವದ ಐದು ಅಥವಾ ಆರನೇ ಆರ್ಥಿಕ ಶಕ್ತಿಶಾಲಿ ರಾಷ್ಟ್ರವೆಂದು ಪರಿಗಣಿಸಲಾ ಗಿದ್ದು, ಮುಂಬರುವ ದಿನಗಳಲ್ಲಿ 3ನೇ ಆರ್ಥಿಕ ಶಕ್ತಿಶಾಲಿ ರಾಷ್ಟ್ರವೆನಿಸಿಕೊಳ್ಳುವ ಎಲ್ಲಾ ಸಾಧ್ಯ ತೆಯೂ ಇದೆ. ನಮ್ಮಲ್ಲಿ ವೈಜ್ಞಾನಿಕ ಚಿಂತ ನೆಗೆ ಯಾವ ಕೊರತೆಯೂ ಇಲ್ಲ ಎನ್ನುವು ದಕ್ಕೆ ಸರ್ ಎಂ.ವಿ. ಅವರು ದೊಡ್ಡ ನಿದರ್ಶನವಾಗಿದ್ದಾರೆ. ಅಂತಹವರ ಆದರ್ಶಗಳನ್ನು ನಮ್ಮ ಯುವ ಜನಾಂಗ ಅನುಸರಿಸಬೇಕೆಂದು ಸಲಹೆ ನೀಡಿದರು.

ನಂತರ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟ ಸಾಧನೆ ಮಾಡಿರುವ ವಿಜ್ಞಾನಿಗಳು, ತಂತ್ರಜ್ಞರು, ಎಂಜಿನಿಯರ್‌ಗಳಾದ ಸಿವಿಲ್ ಎಂಜಿನಿಯರ್ ಎನ್.ಜಿ.ಹರಿಕೃಷ್ಣ, ವಿಜ್ಞಾನಿ ಡಾ.ನವೀನ್ ಕೆ.ರಸ್ತೋಗಿ, ವಿಜ್ಞಾನಿ ಎ. ರಾಮಕೃಷ್ಣ, ಪ್ರೊ.ಎಸ್.ಕೆ.ಪ್ರಸಾದ್, ಉದ್ಯಮಿ ಅನಿತಾ ವೆಂಕಟೇಶ್, ಎಂಜಿನಿಯರ್ ನಾಗೇಶ್ ಪುಟ್ಟಸ್ವಾಮಿ, ಪ್ರಾಧ್ಯಾಪಕ ಡಾ.ಮೋಹನ್ ಕುಮಾರ್, ಆಕಾಶವಾಣಿ ನಿವೃತ್ತ ಎಂಜಿ ನಿಯರ್ ಜಿ.ಬಿ.ಮುರುಳೀಧರ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ದಿ ಇನ್ಸ್ ಟಿಟೂಷನ್ ಆಫ್ ಇಂಜಿನಿಯರಿಂಗ್ ಸಂಸ್ಥೆ ಅಧ್ಯಕ್ಷ ಎಂ.ಚಿನ್ನಸ್ವಾಮಿ, ಗೌರವ ಕಾರ್ಯ ದರ್ಶಿ ಬಿ.ವಿ.ರವೀಂದ್ರನಾಥ್, ಸಂಯೋ ಜಕರಾದ ಕೆ.ಬಿ.ಭಾಸ್ಕರ್, ಎನ್.ಎಸ್. ಮಹದೇವಸ್ವಾಮಿ, ಎಚ್.ಎಂ.ಸುಜಾತ, ಎಚ್.ಎಸ್.ಸುರೇಶ್‍ಬಾಬು ಇದ್ದರು.

Translate »