ದಸರಾ ಗಜಪಡೆಯ ಎರಡನೇ ತಂಡದಲ್ಲಿ ಅಭಿಮನ್ಯುವೇ ಬಲಶಾಲಿ
ಮೈಸೂರು

ದಸರಾ ಗಜಪಡೆಯ ಎರಡನೇ ತಂಡದಲ್ಲಿ ಅಭಿಮನ್ಯುವೇ ಬಲಶಾಲಿ

September 16, 2018

ಮೈಸೂರು:  ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ವಿವಿಧ ಕ್ಯಾಂಪ್‍ಗಳಿಂದ ಅರಮನೆಗೆ ಆಗಮಿಸಿರುವ ಎರಡನೇ ತಂಡದ ಆರು ಆನೆಗಳನ್ನು ಶನಿವಾರ ಹೈವೇ ವೃತ್ತದ ಬಳಿಯಿರುವ ವೇಯಿಂಗ್ ಸೆಂಟರ್‍ನಲ್ಲಿ ತೂಕ ಮಾಡಿಸಲಾಯಿತು.

ಶುಕ್ರವಾರ ಸಂಜೆಯಷ್ಟೇ ಅರಮನೆಗೆ ಎರಡನೇ ತಂಡದ ಆನೆಗಳು ಆಗಮಿಸಿದ್ದವು. ಇಂದಿನಿಂದ ಎಲ್ಲಾ ಆನೆಗಳಿಗೂ ತಾಲೀಮು ನಡೆಸಲಾಯಿತು. ಅಲ್ಲದೆ ಎರಡನೆ ಹಂತದ ಆನೆಗಳಿಗೆ ಕಳೆದ ರಾತ್ರಿಯಿಂದಲೇ ಪೌಷ್ಟಿಕ ಆಹಾರ ನೀಡವುದಕ್ಕೆ ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎರಡನೇ ತಂಡದ ಆನೆಗಳ ತೂಕವನ್ನು ನಿಖರವಾಗಿ ದಾಖಲಿಸಲು ವೇಯಿಂಗ್ ಸೆಂಟರ್‍ನಲ್ಲಿ ತೂಕ ಮಾಡಿಸಲಾಯಿತು.

ತಾಲೀಮಿಗೆ ಕರೆ ತರಲಾಗುತ್ತಿದ್ದ 12 ಆನೆಗಳಲ್ಲಿ ಆರು ಆನೆಗಳನ್ನು ಹೈವೇ ವೃತ್ತದ ಸಮೀಪವಿರುವ ವೇಯಿಂಗ್ ಸೆಂಟರ್‍ನಲ್ಲಿ ತೂಕ ಮಾಡಿಸಿ ದಾಖಲೀಕರಿಸಲಾಯಿತು. ಮೊದಲ ತಂಡದಲ್ಲಿ ಆಗಮಿಸಿದ್ದ ಅರ್ಜುನ ನೇತೃತ್ವದ ಆರು ಆನೆಗಳಿಗೆ ಸೆ.6ರಂದು ತೂಕ ಮಾಡಿಸಲಾಗಿತ್ತು.

ಎರಡನೇ ತಂಡದಲ್ಲಿ ಆಗಮಿಸಿದ ಆನೆಗಳಲ್ಲಿ ಪ್ರಮುಖ ಆನೆಯಾಗಿರುವ ಬಲರಾಮ 4910 ಕೆಜಿ ತೂಕ ಹೊಂದಿದೆ. ಅಭಿಮನ್ಯು 4930 ಕೆಜಿ, ದ್ರೋಣ 3900 ಕೆಜಿ, ಪ್ರಶಾಂತ 4650 ಕೆಜಿ, ಕಾವೇರಿ 2830 ಕೆಜಿ ಹಾಗೂ ವಿಜಯ 2790 ಕೆಜಿ ತೂಕ ಹೊಂದಿವೆ. ಎರಡನೇ ತಂಡದ ಆನೆಗಳಲ್ಲಿ ಬಲರಾಮನಿಗಿಂತ ಅಭಿಮನ್ಯು 30 ಕೆಜಿ ಹೆಚ್ಚಿನ ತೂಕ ಹೊಂದಿದ್ದಾನೆ. ಎಲ್ಲಾ ಆನೆಗಳು ಆರೋಗ್ಯದಿಂದ ಕೂಡಿವೆ. ಎಲ್ಲಾ 12 ಆನೆಗಳಿಗೂ ಪೌಷ್ಟಿಕ ಆಹಾರ ನೀಡುವುದರೊಂದಿಗೆ ಆರೋಗ್ಯದ ಮೇಲೆ ಕಾಳಜಿ ಹೆಚ್ಚಿಸಲಾಗಿದೆ.

Translate »