ಮೈಸೂರು, ಜು. 11(ಆರ್‍ಕೆ)- ಕೊರೊನಾ ವೈರಸ್ ಸೋಂಕಿನ ಪ್ರಕರಣ ಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮೈಸೂರು ಹೊರವಲಯದ ಮಂಡಕಳ್ಳಿ ವಿಮಾನ ನಿಲ್ದಾಣದ ಸಮೀಪವಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಶೈಕ್ಷ ಣಿಕ ಭವನವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದೆ.
ಸೌಮ್ಯ ಸ್ವರೂಪದ ರೋಗ ಲಕ್ಷಣಗಳಿರುವ ಕೊರೊನಾ ವೈರಸ್ ಸೋಂಕಿತರನ್ನಿರಿಸಿ ಚಿಕಿತ್ಸೆ ನೀಡಲು ಮುಕ್ತ ವಿಶ್ವವಿದ್ಯಾ ನಿಲಯದ 5 ಮಹಡಿಯ ನೂತನ ಕಟ್ಟಡ ದಲ್ಲಿ ಒಟ್ಟು 600 ಮಂದಿಗೆ ಸ್ಥಳಾವಕಾಶ ವಿದೆಯಾದರೂ, ಸದ್ಯಕ್ಕೆ 530 ಹಾಸಿಗೆ ಗಳೊಂದಿಗೆ ಕೋವಿಡ್ ಕೇರ್ ಸೆಂಟರ್ ಸಜ್ಜುಗೊಳಿಸಲಾಗಿದ್ದು, ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಭೇಟಿ ನೀಡಿ, ಸಿದ್ಧತಾ ಕಾರ್ಯ ವನ್ನು ಪರಿಶೀಲಿಸಿದರು.
ಇಲ್ಲಿ ಒಟ್ಟು 51 ಕೊಠಡಿಗಳಿದ್ದು, ಪ್ರತಿ ಯೊಂದರಲ್ಲಿ 10ರಂತೆ 530 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಕೇಂದ್ರವು ಸುವಿಶಾಲ ವಾಗಿದ್ದು, ಸಮರ್ಪಕ ರೀತಿಯಲ್ಲಿ ಗಾಳಿ-ಬೆಳಕಿನಿಂದ ಕೂಡಿದೆ. ದಾಖಲಾಗುವ ಸೋಂಕಿತರ ಮನರಂಜನೆಗೆ ಟಿವಿ, ಇಂಟರ್ ನೆಟ್, 12 ಎಂಟಿಪಿಎಸ್ ಸಾಮಥ್ರ್ಯದ ವೈ-ಫೈ ಸಂಪರ್ಕ, ಕುಡಿಯಲು, ಸ್ನಾನಕ್ಕೆ ಬಿಸಿ ನೀರು ವ್ಯವಸ್ಥೆ, ಶೌಚಾಲಯ, ಲಾಂಡ್ರಿ, ಕೇರಂ, ಟೆನ್ನಿಸ್ ಆಟವಾಡಲು ಸೌಲಭ್ಯ, 185 ಕೆವಿಲ ಸಾಮಥ್ರ್ಯದ ಜನ ರೇಟರ್ ಸೇರಿದಂತೆ ಸಕಲ ಸೌಲಭ್ಯವನ್ನು ಒದಗಿಸಿ ಸುಸಜ್ಜಿತ ಕೋವಿಡ್-ಕೇರ್ ಸೆಂಟರ್ ಆಗಿ ಸಜ್ಜುಗೊಳಿಸಲಾಗಿದೆ.
2018ರ ಡಿಸೆಂಬರ್ 1ರಂದು ಉದ್ಘಾ ಟನೆಯಾಗಿರುವ ಶೈಕ್ಷಣಿಕ ಭವನ, ಬಳ ಸದೇ ಹಾಗೆಯೇ ಖಾಲಿ ಉಳಿದಿತ್ತು. ಇದೀಗ ಕೊರೊನಾ ಸೋಂಕಿತರಿಗಾಗಿ ಉಪಯೋ ಗಿಸಲು ತಯಾರಿ ನಡೆಸಿದ್ದು, ಇನ್ನೆರಡು ದಿನಗಳಲ್ಲಿ ಸಿದ್ಧತೆ ಪೂರ್ಣಗೊಳ್ಳಲಿದೆ. ಪ್ರತೀ 100 ಮಂದಿಗೊಬ್ಬರಂತೆ ವೈದ್ಯರು, 50 ಮಂದಿಗೊಬ್ಬರಂತೆ ನರ್ಸ್‍ಗಳು ಹಾಗೂ ‘ಡಿ’ ಗ್ರೂಪ್ ನೌಕರರನ್ನು ನಿಯೋಜಿಸಿ ಸ್ವಚ್ಛತೆ, ಸ್ಯಾನಿಟೈಸ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಸೋಂಕಿತರಿರುವ ಕೊಠಡಿ ಗಳನ್ನು ರೆಡ್‍ಝೋನ್ ಎಂದೂ, ವೈದ್ಯರು, ನರ್ಸ್‍ಗಳಿರುವ ಭಾಗವನ್ನು ಗ್ರೀನ್ ಝೋನ್ ಎಂದು ಘೋಷಿಸಲಾಗಿದ್ದು, ದಿನದ 24×7 ಆಂಬುಲೆನ್ಸ್ ವ್ಯವಸ್ಥೆ ಮತ್ತು ಪೊಲೀಸ್ ಭದ್ರತೆಯನ್ನು ಕಟ್ಟಡಕ್ಕೆ ಒದಗಿಸಲಾಗಿದೆ.
ನಿವೃತ್ತ ಸೈನಿಕರಾದ ಕೆಎಎಸ್ ಅಧಿಕಾರಿ, ಲೆಫ್ಟಿನಂಟ್ ಕರ್ನಲ್ ಡಾ. ಅಶೋಕ ಅವ ರನ್ನು ಕೋವಿಡ್ ಕೇರ್ ಸೆಂಟರ್‍ನ ನೋಡಲ್ ಅಧಿಕಾರಿಯಾಗಿ ನಿಯೋಜಿ ಸಿದ್ದು, ಅವರ ಮಾರ್ಗದರ್ಶನದಂತೆ ನಿರ್ಮಿತಿ ಕೇಂದ್ರದ ನಿರ್ದೇಶಕ ಮಂಜು ನಾಥ ಅವರು ಕಟ್ಟಡಕ್ಕೆ ಸಕಲ ಸೌಲಭ್ಯ ಒದಗಿಸಿ, ಕೋವಿಡ್ ಸೋಂಕಿತರ ಚಿಕಿತ್ಸೆ ಗಾಗಿ ಸಜ್ಜುಗೊಳಿಸಿದ್ದಾರೆ. ಶಾಸಕ ಎಲ್. ನಾಗೇಂದ್ರ, ಬಿಜೆಪಿ ಮುಖಂಡ ಹೆಚ್.ವಿ. ರಾಜೀವ್, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಎಸ್ಪಿ ಸಿ.ಬಿ.ರಿಷ್ಯಂತ್, ಮುಡಾ ಕಮೀ ಷ್ನರ್ ಡಾ.ಡಿ.ಬಿ.ನಟೇಶ್ ಹಾಗೂ ಇತರರು ಸಚಿವರ ಪರಿಶೀಲನೆ ವೇಳೆ ಉಪಸ್ಥಿತರಿದ್ದರು.
ಮೈಸೂರಿಗೆ 2,300 ತ್ವರಿತ ಪರೀಕ್ಷಾ ಪರಿಕರ: ಜಿಲ್ಲಾಧಿಕಾರಿ
ಮೈಸೂರು, ಜು. 11(ಆರ್‍ಕೆ)- ಕ್ಷಿಪ್ರವಾಗಿ ಕೋವಿಡ್-19 ಸೋಂಕಿನ ಪರೀಕ್ಷೆ ನಡೆಸಲು ಮೈಸೂರು ಜಿಲ್ಲೆಗೆ 2,300 ರ್ಯಾಪಿಡ್ ಆಂಟಿಜೆನ್ ಕಿಟ್‍ಗಳನ್ನು ಸರ್ಕಾರ ಪೂರೈಸುತ್ತದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಮೈಸೂರಿನ ಮಂಡಕಳ್ಳಿ ಸಮೀಪ ಸಿದ್ಧಗೊಳ್ಳುತ್ತಿರುವ ಕೋವಿಡ್ ಕೇರ್ ಸೆಂಟರ್ ಪರಿಶೀಲನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಪ್ರತೀ ದಿನ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅತೀ ವೇಗವಾಗಿ ಪರೀಕ್ಷೆ ನಡೆಸಿ ವರದಿ ನೀಡಲು ಅನುಕೂಲವಾಗುವಂತೆ ಕ್ಷಿಪ್ರ ಟೆಸ್ಟ್ ಕಿಟ್‍ಗಳ ಅಗತ್ಯವಿದೆ ಎಂದು ಕೇಳಿಕೊಂಡ ಹಿನ್ನೆಲೆಯಲ್ಲಿ ಸರ್ಕಾರ ಇನ್ನೆರಡು ದಿನಗಳಲ್ಲಿ 2,300 ರ್ಯಾಪಿಡ್ ಆಂಟಿಜೆನ್ ಕಿಟ್‍ಗಳನ್ನು ನೀಡುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಕೋವಿಡ್-19 ಲಕ್ಷಣ ಕಂಡು ಬಂದವರನ್ನು ವೇಗವಾಗಿ ಗಂಟಲು ದ್ರವ ಸಂಗ್ರಹಿಸಿ, ಪರೀಕ್ಷೆ ನಡೆಸಿ ಪಾಸಿಟಿವ್ ವರದಿಗನುಗುಣವಾಗಿ ಚಿಕಿತ್ಸೆಗೆ ಅಥವಾ ಐಸೋಲೇಷನ್‍ಗೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ತಯಾರಿ ನಡೆಸಿದೆ. ಒಂದು ವೇಳೆ ಸೋಂಕು ಸ್ಫೋಟಗೊಂಡಲ್ಲಿ ಗ್ರಾಮಾಂತರ ಪ್ರದೇಶ ದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಬಳಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಇತ್ತೀಚೆಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವ ಕಾರಣ ಅಂತ್ಯಸಂಸ್ಕಾರಕ್ಕೆ ಮೈಸೂರಿನಿಂದ 15 ಕಿಮೀ ದೂರದ ಸರ್ಕಾರಿ ಜಾಗವನ್ನು ಗುರುತಿಸಿ ಸ್ಮಶಾನ ವನ್ನಾಗಿ ಬಳಸಿಕೊಳ್ಳಲು ಚಿಂತನೆ ನಡೆಸಿದ್ದೇವೆ. ಮೈಸೂರು ನಗರದಲ್ಲೂ ಸಮು ದಾಯದವರ ಅಂತ್ಯಸಂಸ್ಕಾರಕ್ಕೂ ವ್ಯವಸ್ಥೆ ಮಾಡಿದ್ದೇವೆ ಎಂದ ಜಿಲ್ಲಾಧಿಕಾರಿಗಳು, ಪ್ಲಾಸ್ಟಿಕ್‍ನಲ್ಲಿ ಸುತ್ತಿ ಮೃತದೇಹ ಹೂಳುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಆಕ್ಷೇಪಿಸುತ್ತಿದ್ದಾರೆ. ಆದರೆ ರಾಷ್ಟ್ರೀಯ ಮಟ್ಟದಲ್ಲಿ ಈ ಮೆಟ್ರೋಕಾಲ್ ಅಳವಡಿಸುತ್ತಿರುವುದರಿಂದ ನಾವೂ ಅದನ್ನೇ ಅನುಸರಿಸಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.