ಮುಂಬೈ, ಜು.11- `ಬಿಗ್ ಬಿ’ ಎಂದೇ ಖ್ಯಾತರಾದ ಬಾಲಿ ವುಡ್‍ನ ಹಿರಿಯ ನಟ ಅಮಿತಾಭ್ ಬಚ್ಚನ್ ಹಾಗೂ ಅವರ ಪುತ್ರ ಅಭಿ ಷೇಕ್ ಬಚ್ಚನ್‍ಗೂ ಕೊರೊನಾ ಸೋಂಕು ದೃಢ ಪಟ್ಟಿದೆ. ಆರೋಗ್ಯ ದಲ್ಲಿ ದಿಢೀರ್ ಏರು ಪೇರು ಕಂಡು ಬಂದ ಹಿನ್ನೆಲೆಯಲ್ಲಿ ಅಭಿ ತಾಬ್ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ಶನಿವಾರ ರಾತ್ರಿ ಕರೆದೊಯ್ಯಲಾಗಿತ್ತು. ನಾನು ಕೋವಿಡ್-19 ಪರೀಕ್ಷೆಗೊಳ ಪಟ್ಟೆ. ವರದಿ `ಪಾಸಿಟಿವ್’ ಎಂದು ಬಂದಿದೆ. ಹಾಗಾಗಿ ಆಸ್ಪತ್ರೆಗೆ ದಾಖ ಲಾಗುತ್ತಿದ್ದೇನೆ ಎಂದು ಖುದ್ದು ಅಮಿ ತಾಭ್ ಬಚ್ಚನ್ ಶನಿವಾರ ರಾತ್ರಿ ಟ್ವೀಟ್ ಮಾಡಿದ್ದಾರೆ. ಈ ಮಧ್ಯೆ ಅವರ ಪುತ್ರ ಅಭಿಷೇಕ್ ಬಚ್ಚನ್ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಈ ಮಧ್ಯೆ ಜಯಾ ಬಾಧುರಿ ಹಾಗೂ ಐಶ್ವರ್ಯ ರೈ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಅವರ ಮನೆಯ ಕೆಲಸಗಾರ ರನ್ನು ಪರೀಕ್ಷೆಗೊಳಪಡಿಸಲಾಗಿದೆ. ಅಮಿತಾಬ್ ಹಾಗೂ ಪುತ್ರ ಅಭಿಷೇಕ್‍ಗೆ ಚಿಕಿತ್ಸೆ ನೀಡುತ್ತಿರುವ ನಾನಾವತಿ ಆಸ್ಪತ್ರೆ ವೈದ್ಯರು, ಹಿರಿಯ ನಟನ ದೇಹಾ ರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದಿದ್ದಾರೆ.
