ಮನೆ ಕಿಟಕಿ ಗಾಜು ಒಡೆದು 6.56 ಲಕ್ಷ ಚಿನ್ನಾಭರಣ ಕಳವು
ಮೈಸೂರು

ಮನೆ ಕಿಟಕಿ ಗಾಜು ಒಡೆದು 6.56 ಲಕ್ಷ ಚಿನ್ನಾಭರಣ ಕಳವು

June 23, 2022

ಮೈಸೂರು, ಜೂ.೨೨- ಇಂಜಿನಿಯರ್‌ರೊಬ್ಬರ ಮನೆ ಕಿಟಕಿ ಗಾಜು ಒಡೆದು ಒಳ ನುಗ್ಗಿದ ಖದೀಮರು ೪ ಲಕ್ಷ ನಗದು ಸೇರಿದಂತೆ ೬.೫೬ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘÀಟನೆ ಮೈಸೂರು ತಾಲೂಕು ಮೂಗನಹುಂಡಿ ಗ್ರಾಮದಲ್ಲಿ ಜೂ.೧೯ರ ರಾತ್ರಿ ನಡೆದಿದೆ.

ವಿವರ: ಮೂಗನಹುಂಡಿ ಗ್ರಾಮದ ಇಂಜಿನಿಯರ್ ಎಂ.ಚAದ್ರ ಅವರ ಸಹೋದರ ರವಿ ಅವರ ರಿಸೆಪ್ಷನ್ ಜೂ.೧೯ರಂದು ಸಂಜೆ ಪರಸಯ್ಯನಹುಂಡಿ ಗ್ರಾಮದ ಟಿ.ಎನ್. ಕನ್ವೆನ್ಷನ್ ಹಾಲ್‌ನಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ಮನೆಯವರೆಲ್ಲ ಅಂದು ಸಂಜೆ ೬ ಗಂಟೆ ಸುಮಾರಿನಲ್ಲಿ ಮನೆ ಬೀಗ ಹಾಕಿಕೊಂಡು ಹೋಗಿದ್ದರು. ರಾತ್ರಿ ೧೨ ಗಂಟೆ ಸುಮಾರಿನಲ್ಲಿ ಚಂದ್ರ ಅವರ ಕೆಲ ಸಂಬAಧಿಕರು ಮಲಗಲು ಮನೆಗೆ ಬಂದಾಗ ಮನೆ ಬಾಗಿಲ ಪಕ್ಕದಲ್ಲಿದ್ದ ಕಿಟಕಿ ಗಾಜು ಒಡೆದಿರುವುದು ಹಾಗೂ ಮನೆಯ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ.

ಮಾಹಿತಿ ಅರಿತು ಮನೆಗೆ ಬಂದ ಚಂದ್ರ ನೋಡಿದಾಗ ೫ ಗ್ರಾಂ. ಡೈಮಂಡ್ ರಿಂಗ್, ಒಟ್ಟು ೩೪ ಗ್ರಾಂನ ತೂಕದ ೬ ಚಿನ್ನದ ಉಂಗುರಗಳು, ೫ ಗ್ರಾಂ. ಕಿವಿಯ ರಿಂಗ್, ೧೬ ಗ್ರಾಂ ನೆಕ್ಲೆಸ್, ತಲಾ ೩ ಗ್ರಾಂ. ೨ ಓಲೆ, ೪ ಲಕ್ಷದ ೩ ಸಾವಿರ ನಗದು ಸೇರಿದಂತೆ ೬,೫೬,೫೦೦ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವುದು ಗೊತ್ತಾಗಿದೆ. ಮದುವೆ ಕಾರ್ಯ ಮುಗಿದ ನಂತರ ಚಂದ್ರ ಅವರು ನೀಡಿದ ದೂರನ್ನು ದಾಖ ಲಿಸಿಕೊಂಡಿರುವ ಜಯಪುರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Translate »