ನಮೋ ಯೋಗ
ಮೈಸೂರು

ನಮೋ ಯೋಗ

June 22, 2022

ಮೈಸೂರು,ಜೂ.21(ಎಂಟಿವೈ)- ನಸುಕಿನ ಜಾವ ಚುಮು ಚುಮು ಚಳಿ, ತಂಗಾಳಿಯ ನಡುವೆÉ ಮೈಸೂರು ಅರಮನೆ ಆವ ರಣದಲ್ಲಿ ಯೋಗದ ಸಂಭ್ರಮ ಕಳೆಗಟ್ಟಿತ್ತು. `8ನೇ ಅಂತಾರಾಷ್ಟ್ರೀಯ ಯೋಗ ದಿನ’ದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖ ದಲ್ಲಿ ಯಶಸ್ವಿ ಯೋಗ ಪ್ರದರ್ಶನ ದಾಖಲೆ ಪುಟ ಸೇರಿತು.

ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವುದರೊಂದಿಗೆ ಅತೀ ಮಹತ್ವ ಪಡೆದುಕೊಂಡಿತು. ಅದಕ್ಕಾಗಿ ವಿವಿಧ ಶಾಲಾ-ಕಾಲೇಜು, ಯೋಗ ಸಂಸ್ಥೆಗಳು ಜೊತೆಗೆ ಹಲವಾರು ಸ್ವಯಂ ಸಂಸ್ಥೆಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರಮನೆ ಆವರಣದಲ್ಲಿ ನಡೆಯುವ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಆಕಾಂಕ್ಷೆ ಹೊಂದಿದ್ದರು. ಆದರೆ ಭದ್ರತೆಯ ದೃಷ್ಟಿಯಿಂದ 12 ಸಾವಿರ ಸಾರ್ವಜನಿಕರು ಹಾಗೂ 3 ಸಾವಿರ ಗಣ್ಯರು, ಒಟ್ಟು 15 ಸಾವಿರ ಮಂದಿ ಯೋಗಾಸನ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅರಮನೆ ಆವರಣ ಮಾತ್ರವಲ್ಲದೆ, ಮೈಸೂರು ನಗರದ ಹೃದಯಭಾಗದಲ್ಲಿ ಯೋಗ ಸಂಭ್ರಮ ಮನೆ ಮಾಡಿತ್ತು.

ಮುಂಜಾನೆಯಿಂದಲೇ ಯೋಗ ವೈಭವ: ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಯೋಗ ಪ್ರದರ್ಶನಕ್ಕೆ ಹೆಸರು ನೋಂದಾಯಿಸಿದವರು ತಂಡೋಪತಂಡದಲ್ಲಿ ಮುಂಜಾನೆ 2 ಗಂಟೆಯಿಂದಲೇ ಮೈಸೂರು ಅರಮನೆಯತ್ತ ಧಾವಿಸುತ್ತಿದ್ದ ದೃಶ್ಯ ಕಂಡು ಬಂದಿತು.

ಅಚ್ಚುಕಟ್ಟಾದ ವ್ಯವಸ್ಥೆ: ಅರಮನೆ ಆವರಣದಲ್ಲಿ 53 ಬ್ಲಾಕ್‍ಗಳ ವ್ಯವಸ್ಥೆ ಮಾಡಿ, ನಿಗದಿತ ಸ್ಥಳದಲ್ಲೇ ಯೋಗ ಪ್ರದರ್ಶನಕ್ಕೆ ಸೂಚಿಸಲಾಗಿತ್ತು. ಅಲ್ಲದೆ, ಎಲ್ಲೆಂದರಲ್ಲಿ ಓಡಾಡಿ ಮುಜುಗರಕ್ಕೆ ಅವಕಾಶವಾಗದಂತೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಇದರಿಂದ ಪ್ರಧಾನಿ ಮೋದಿ
ಪಾಲ್ಗೊಂಡಿದ್ದ ಯೋಗ ಕಾರ್ಯಕ್ರಮ ಅತ್ಯಂತ ವ್ಯವಸ್ಥಿತ ಹಾಗೂ ಯಶಸ್ವಿಯಾಗಿ ನೆರವೇರಿತು.

ನಿದ್ದೆಗೆಟ್ಟ ಹಲವರು: ಕೇಂದ್ರ ಆಯುಷ್ ಮಂತ್ರಾಲಯ, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ `ಮಾನವೀಯತೆಗಾಗಿ ಯೋಗ’ ಘೋಷ ವಾಕ್ಯದಡಿ ನಡೆದ ಯೋಗ ಪ್ರದರ್ಶನಕ್ಕೆ ಪ್ರಧಾನಿ ಆಗಮನ ಕಳೆಕಟ್ಟಿತ್ತು. ಈ ದಿನವನ್ನು ಅವಿಸ್ಮರಣೀಯವಾಗಿ ಸಲು ಯೋಗದ ಕನವರಿಕೆಯಲ್ಲೇ ಯೋಗಾಸಕ್ತರು ಮುಂಜಾನೆಯೇ ನಿದ್ದೆಯಿಂದ ಎದ್ದು ಬಿಳಿಬಣ್ಣದ ಟಿ-ಶರ್ಟ್ ಧರಿಸಿ ಅರ ಮನೆ ಆವರಣಕ್ಕೆ ಬಂದಿದ್ದರು.

ಕಟ್ಟುನಿಟ್ಟಿನ ತಪಾ ಸಣೆ: ಅರಮನೆ ಆವರಣ ಪ್ರವೇಶಿಸುವ ಎಲ್ಲಾ ದ್ವಾರಗಳಲ್ಲೂ ಭದ್ರತಾ ಸಿಬ್ಬಂದಿ ಪ್ರತಿಯೊಬ್ಬರನ್ನು ಮೂರು ಬಾರಿ ತಪಾಸಣೆ ಮಾಡಿ ಅರಮನೆ ಒಳಗೆ ಬಿಟ್ಟರು. ಅರಮನೆಯ ಗೇಟ್ ಹೊರಗೆ ಒಮ್ಮೆ, ಮತ್ತೊಮ್ಮೆ ಗೇಟ್ ಪ್ರವೇಶಿಸುವ ವೇಳೆ, ಬಳಿಕ ಅರಮನೆ ಪ್ರವೇಶಿಸಿದ ನಂತರ ಮೆಟಲ್ ಡಿಟೆಕ್ಟರ್ ಹಾಗೂ ಲೋಹ ಶೋಧಕ ಉಪಕರಣದಿಂದ ತಪಾಸಣೆ ಮಾಡಿ ಯೋಗಾಸನ ಪ್ರದರ್ಶನ ಸ್ಥಳಕ್ಕೆ ಬಿಡಲಾಗುತ್ತಿತ್ತು.

ಮುದ ನೀಡಿದ ವಾತಾವರಣ: ಅರಮನೆ ಆವರಣದಲ್ಲಿ ಮುಂಜಾನೆಯೇ ಸಾವಿರಾರು ಮಂದಿ ನೆರೆದಿದ್ದರು. ಮಕ್ಕಳು, ಹಿರಿಯ ನಾಗರಿಕರಾದಿಯಾಗಿ ಎಲ್ಲಾ ವಯೋಮಾನದವರೂ ಯೋಗ ಮಾಡಲು ಬಂದಿದ್ದರು. ನೀಲಿ ಬಣ್ಣದ ಆಗಸ, ತಂಪಾದ ತಿಳಿಗಾಳಿ, ಹಕ್ಕಿಗಳ ಚಿಲಿಪಿಲಿಯ ವಾತಾವರಣ ಯೋಗಪಟುಗಳ ಉಲ್ಲಾಸ ಹೆಚ್ಚಿಸಿತು. ಇಂತಹ ಆಹ್ಲಾದಕರ ವಾತಾವರಣದಲ್ಲಿ ಅರಮನೆಯ ವೈಭವ ನೋಡುತ್ತ ಯೋಗಪಟುಗಳು ಸಂಭ್ರಮಿಸಿದರು.

ಬೆಳಗ್ಗೆ 6.26ಕ್ಕೆ ಅರಮನೆಗೆ ಮೋದಿ ಆಗಮನ: ಕಳೆದ ರಾತ್ರಿ ರ್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 6.26ಕ್ಕೆ ಜಯಮಾರ್ತಾಂಡ ದ್ವಾರದಿಂದ ಅರಮನೆ ಆವರಣ ಪ್ರವೇಶಿಸಿದರು. ಬಳಿಕ 6.32ಕ್ಕೆ ಯೋಗ ದಿನದ ವೇದಿಕೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮಿಸಿ, ಯೋಗಪಟುಗಳತ್ತ ಕೈ ಬೀಸಿ ಉತ್ಸಾಹ ತುಂಬಿದರು. ಇದೇ ವೇಳೆ ಯೋಗಪಟುಗಳು ಅವರಿಗೆ ಜಯ ಘೋಷಣೆ ಕೂಗುವುದರೊಂದಿಗೆ ಸ್ವಾಗತಿಸಿದರು.

45 ನಿಮಿಷ ಯೋಗಾಸನ: 38 ನಿಮಿಷ ನಡೆದ ಸಭಾ ಕಾರ್ಯಕ್ರಮದ ಬಳಿಕ ಯೋಗಾಸನ ಪ್ರದರ್ಶನ ಆರಂಭಿಸಲಾಯಿತು. ಈ ವೇಳೆ ಯೋಗಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ, 45 ನಿಮಿಷ ಯೋಗಾಸನ ಪ್ರದರ್ಶಿಸಿದರು. 4 ನಿಮಿಷ ಸಾಮಾನ್ಯ ಚಲನಕ್ರಿಯೆ ಅಭ್ಯಾಸದೊಂದಿಗೆ ದೇಹವನ್ನು ಅಣಿಗೊಳಿಸಿಕೊಂಡು 25 ನಿಮಿಷ ಕಾಲ ವಿವಿಧ ಯೋಗ ಆಸನಗಳನ್ನು ಪ್ರದರ್ಶಿಸಲಾಯಿತು. ಬಳಿಕ 14 ನಿಮಿಷ ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪ, ಕೊನೆಗೆ ಓಂಕಾರ ಝೇಂಕರಿಸಿತು.

ಖಾಲಿಯಿದ್ದ ಯೋಗಾಸನÀ ಸ್ಥಳ: ಅರಮನೆ ಆವರಣದಲ್ಲಿ 53 ಬ್ಲಾಕ್‍ನಲ್ಲಿ 15 ಸಾವಿರ ಮಂದಿಗೆ ಯೋಗಾಸನ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೆಲವು ಗೊಂದಲ ಹಾಗೂ ನಿಗದಿತ ಸಮಯದೊಳಗೆ ಸಾಕಷ್ಟು ಮಂದಿ ಅರಮನೆ ಪ್ರವೇಶಿಸಲು ಸಾಧ್ಯವಾಗದ ಕಾರಣ, ಅರಮನೆ ಮುಂಭಾಗದ ಪ್ರಾಂಗಣದಲ್ಲಿ ವ್ಯವಸ್ಥೆ ಮಾಡಿದ್ದ 5ರಿಂದ 6 ಬ್ಲಾಕ್‍ಗಳು ಯೋಗ ಪಟುಗಳಿಲ್ಲದೆ ಖಾಲಿ ಇದ್ದವು. ಮೋದಿ ಅರಮನೆ ಪ್ರವೇಶದ ಬಳಿಕ ಭದ್ರತಾ ದೃಷ್ಟಿಯಿಂದ ಅರಮನೆ ಒಳಪ್ರವೇಶಕ್ಕೆ ಯಾರಿಗೂ ಅವಕಾಶ ನೀಡದ ಹಿನ್ನೆಲೆಯಲ್ಲಿ ಯೋಗ ಮಾಡಲು ಹೆಸರು ನೋಂದಾಯಿಸಿದ್ದ 5ರಿಂದ 6 ಸಾವಿರ ಮಂದಿ ಅವಕಾಶದಿಂದ ವಂಚಿತರಾದರು. ಹಾಗಾಗಿ ಅರಮನೆಯ ಆವರಣದಲ್ಲಿ 8ರಿಂದ 10 ಸಾವಿರ ಮಂದಿ ಯೋಗಾಸನ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

40 ಎಲ್‍ಇಡಿ: ಯೋಗ ಕಾರ್ಯಕ್ರಮ ವೀಕ್ಷಿಸಲು ಅರಮನೆ ಸುತ್ತ 40 ಎಲ್‍ಇಡಿ ಬೃಹತ್ ಪರದೆಯನ್ನು ಅಳವಡಿಸÀಲಾಗಿತ್ತು. ವಿವಿಧ ಯೋಗ ಸಂಸ್ಥೆಗಳಿಂದ ನೋಂದಾಯಿತರಾದ ಯೋಗಪಟುಗಳೇ ಇಂದಿನ ಯೋಗ ಪ್ರದರ್ಶನದಲ್ಲಿ ಹೆಚ್ಚಿದ್ದರು.

ಬೆರಳೆಣಿಕೆಯಷ್ಟು ವಿದೇಶಿಯರು: ಇಂದು ನಡೆದ ಯೋಗ ದಿನದ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 8 ಹಾಸ್ಟೆಲ್‍ಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಹೆಚ್.ಎಸ್.ಬಿಂದ್ಯಾ ನೇತೃತ್ವದಲ್ಲಿ 600 ವಿದ್ಯಾರ್ಥಿಗಳು ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಸರ್ಕಾರಿ ಶಾಲೆಗಳ 2,500, ಖಾಸಗಿ ಶಾಲೆಗಳ 1,500 ಹಾಗೂ ಯೋಗ ಶಾಲೆಗಳ 3500 ಮಂದಿ ಸೇರಿದಂತೆ 13 ಮಂದಿ ತೃತೀಯ ಲಿಂಗಿಗಳು, 15ಕ್ಕೂ ಹೆಚ್ಚು ಮಂದಿ ವಿಕಲಚೇತನರು, 20ಕ್ಕೂ ಹೆಚ್ಚು ವಿದೇಶಿಗರು ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.

ಕಪ್ಪು ಬಣ್ಣದ ಹಿಜಾಬ್ ಧರಿಸಿದ್ದವರಿಗೆ ಪ್ರವೇಶ ನಿರಾಕರಣೆ: ಪ್ರಧಾನಿ ಮೋದಿ ಪಾಲ್ಗೊಂಡಿದ್ದ ಯೋಗ ಪ್ರದರ್ಶನದÀ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಪ್ಪು ಬಣ್ಣದ ಹಿಜಾಬ್ ಧರಿಸಿ ಬಂದಿದ್ದ 11 ವಿದ್ಯಾರ್ಥಿನಿಯರಿಗೆ ಪಾಲ್ಗೊಳ್ಳಲು ಅವಕಾಶ ನಿರಾಕರಿಸಲಾಯಿತು. ಆದರೆ ಬಿಳಿ, ಕಂದು ಬಣ್ಣದ ಹಿಜಾಬ್ ಧರಿಸಿದ್ದ ಕೆಲವರಿಗೆ ಯೋಗ ಮಾಡಲು ಅವಕಾಶ ನೀಡಲಾಗಿತ್ತು.

ಪಾಸ್ ಗೊಂದಲ: ಅರಮನೆಯಲ್ಲಿ ನಡೆಯುವ ದಸರಾ ಸೇರಿದಂತೆ ಯಾವುದೇ ಕಾರ್ಯ ಕ್ರಮಗಳ ವೀಕ್ಷಣೆಗೆ ಬರುವ ಜನರಿಗೆ ಈ ಹಿಂದೆ ಆಗುತ್ತಿದ್ದಂತೆ ಯೋಗ ಕಾರ್ಯಕ್ರಮಕ್ಕೂ ಪಾಸ್ ಗೊಂದಲ ಪುನರಾವರ್ತನೆಯಾಯಿತು. ಕ್ಯೂಆರ್ ಕೋಡ್ ಇದ್ದರೂ ಸ್ಕ್ಯಾಬ್ ಕೋಡ್‍ನಲ್ಲಿ ಸ್ಕಾನ್ ಆಗಲಿಲ್ಲ. ಇಂತಹ ಪಾಸ್ ಹೊಂದಿದವರಿಗೆ ಪೆÇಲೀಸರು ಒಳಗೆ ಬಿಡಲಿಲ್ಲ. ಇದರಿಂದ ಬೇಸರಗೊಂಡು ವಾಪಸ್ ತೆರಳಿದ ಯೋಗಪಟುಗಳು, ನಾವು 15 ದಿನ ಮುಂಚಿತವಾಗಿಯೇ ನೋಂದಣಿ ಮಾಡಿದ್ದೆವು. ಆದರೀಗ ತಾಂತ್ರಿಕ ಕಾರಣ ನೀಡಿ ಒಳಗೆ ಬಿಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮತ್ತಷ್ಟು ಮಂದಿಗೆ ಯಾವ ಗೇಟ್‍ನಲ್ಲಿ ಹೋಗಬೇಕು ಎಂಬ ಗೊಂದಲ ಉಂಟಾದ ಕಾರಣ ನಿಗದಿತ ಸಮಯದಲ್ಲಿ ಅರಮನೆ ಒಳಗೆ ಪ್ರವೇಶ ಪಡೆಯಲು ಸಾಧ್ಯವಾಗದೆ ಬೇಸರದಿಂದ ವಾಪಸ್ಸಾದರು.

ವೇದಿಕೆಯಲ್ಲಿ ಸಂಸದ ಪ್ರತಾಪ ಸಿಂಹ: ಯೋಗ ದಿನಾಚರಣೆಯ ಸಭಾ ವೇದಿಕೆಯ ಮೇಲೆ ಪ್ರಧಾನಿ ಮೋದಿ ಅವರೊಂದಿಗೆ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಸಂಸದ ಪ್ರತಾಪ ಸಿಂಹ ಮಾತ್ರ ಅಸೀನರಾಗಿದ್ದರು. ಇನ್ನಿತರ ಜನಪ್ರತಿನಿಧಿಗಳು ಜನಸಾಮಾನ್ಯ ರೊಂದಿಗೆ ನೆಲಹಾಸಿನ ಮೇಲೆ ಕುಳಿತುಕೊಂಡಿದ್ದರು.

Translate »