ಮಾಮೂಲಿಯಂತೆ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದ ವಿಶೇಷ ಪೂಜೆ
ಮೈಸೂರು

ಮಾಮೂಲಿಯಂತೆ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದ ವಿಶೇಷ ಪೂಜೆ

June 23, 2022

ಮೈಸೂರು: ಕೊರೊನಾ ಸೋಂಕಿನಿA ದಾಗಿ ಕಳೆದ ೨ ವರ್ಷ ನಿರ್ಬಂಧಿತವಾಗಿ, ಸಾಂಪ್ರದಾಯಿಕವಾಗಷ್ಟೇ ನಡೆದಿದ್ದ ಆಷಾಢ ಶುಕ್ರವಾರ ವಿಶೇಷ ಪೂಜಾ ಕೈಂಕರ್ಯವನ್ನು ಈ ಬಾರಿ ಮಾಮೂ ಲಿನಂತೆ ನಡೆಸಲು ಜಿಲ್ಲಾಡಳಿತ ನಿರ್ಧ ರಿಸಿದೆ. ಮೈಸೂರಿನ ಸರ್ಕಾರಿ ಅತಿಥಿ ಗೃಹ ದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಈ ವಿಷಯ ತಿಳಿಸಿದರು.

ಮೈಸೂರು, ಜೂ. ೨೨(ಆರ್‌ಕೆ)- ಕೊರೊನಾ ಸೋಂಕಿ ನಿಂದಾಗಿ ಕಳೆದ ಎರಡು ವರ್ಷ ನಿರ್ಬಂಧಿತವಾಗಿ, ಸಾಂಪ್ರ ದಾಯಿಕವಾಗಷ್ಟೇ ನಡೆದಿದ್ದ ಆಷಾಢ ಶುಕ್ರವಾರ ವಿಶೇಷ ಪೂಜಾ ಕೈಂಕರ್ಯವನ್ನು ಈ ಬಾರಿ ಮಾಮೂಲಿನಂತೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಬುಧವಾರ ಅಧಿ ಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಈ ಬಾರಿ ಚಾಮುಂಡೇಶ್ವರಿಗೆ ಆಷಾಢ ಮಾಸದ ಶುಕ್ರವಾರಗಳಂದು ಅದ್ಧೂರಿ ಯಾಗಿ ವಿಶೇಷ ಪೂಜೆ ಸಲ್ಲಿಸಿ, ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಧಾರ್ಮಿಕ ಕೈಂಕರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕೆಂದು ತಿಳಿಸಿದರು.

ಎಲ್ಲಾ ಆಷಾಢ ಶುಕ್ರವಾರಗಳಂದು ಚಾಮುಂ ಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಿ ಎಂದಿನAತೆ ಪೂಜಾ ಕೈಂಕರ್ಯ ನಡೆಸಬೇಕು. ಭಕ್ತಾದಿಗಳಿಗೆ ತಾಯಿಯ ದರ್ಶನ ಪಡೆಯಲು ಅವಕಾಶ ಕಲ್ಪಿಸ ಬೇಕು. ಅದಕ್ಕೆ ಸೂಕ್ತ ವ್ಯವಸ್ಥೆ ಮಾಡ ಬೇಕಾಗಿದೆ ಎಂದು ಹೇಳಿದರು.

ಈ ಬಗ್ಗೆ ಜೂನ್ ೨೫ರಂದು ಜನ ಪ್ರತಿನಿಧಿಗಳು, ಅಧಿಕಾರಿಗಳೊಂ ದಿಗೆ ಮತ್ತೊಮ್ಮೆ ಸಭೆ ನಡೆಸಿ ಅಂತಿಮ ರೂಪು-ರೇಷೆ ನಿರ್ಧರಿಸಿ, ಭಕ್ತಾದಿ ಗಳಿಗೆ ಮಾಹಿತಿ ನೀಡುತ್ತೇವೆ ಎಂದು ಸಚಿವ ಸೋಮ ಶೇಖರ್ ಗೋಷ್ಠಿಯಲ್ಲಿ ತಿಳಿಸಿದರು. ಪ್ರತೀ ವರ್ಷದಂತೆ ಈ ಬಾರಿಯೂ ಲಲಿತ ಮಹಲ್ ಹೆಲಿಪ್ಯಾಡ್‌ನಿಂದ ಕೆಎಸ್‌ಆರ್‌ಟಿಸಿ ಸಿಟಿ ಬಸ್‌ಗಳಲ್ಲಿ ಚಾಮುಂಡಿಬೆಟ್ಟಕ್ಕೆ ಭಕ್ತರನ್ನು ಕರೆದೊಯ್ಯಲು ವ್ಯವಸ್ಥೆ ಕಲ್ಪಿಸ ಲಾಗುತ್ತದೆ. ಶುಕ್ರವಾರಗಳಂದು ಸಾರ್ವಜನಿಕರಿಗೆ ತಮ್ಮ ವಾಹನ ಗಳಲ್ಲಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗುವುದು ಎಂದರು.

ಆದರೆ ಚಾಮುಂಡಿಬೆಟ್ಟಕ್ಕೆ ಬರುವವರು ಎರಡು ಡೋಸ್ ಲಸಿಕೆಯನ್ನು ಪಡೆದಿರಬೇಕು ಅಥವಾ ೭೨ ಗಂಟೆ ಹಿಂದಿನ ಕೊರೊನಾ ನೆಗೆಟಿವ್ ರಿಪೋರ್ಟ್ ತೋರಿ ಸುವುದನ್ನು ಕಡ್ಡಾಯಗೊಳಿಸಲಾಗುವುದು. ಈ ಕುರಿತಂತೆ ಜೂನ್ ೨೫ರಂದು ಸಭೆ ನಡೆಸಿ ಆಷಾಢ ಶುಕ್ರವಾರ ವೇಳಾಪಟ್ಟಿ, ಬಸ್ಸುಗಳ ಸೌಲಭ್ಯ, ಖಾಸಗಿ ವಾಹನಗಳ ನಿಲುಗಡೆ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಜನಸಾಮಾನ್ಯರಿಗೆ ನೀಡ ಲಾಗುತ್ತದೆ ಎಂದು ಸಚಿವರು ನುಡಿದರು.
ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ. ರಾಮದಾಸ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಎಡಿಸಿ ಡಾ.ಬಿ.ಎಸ್. ಮಂಜು ನಾಥಸ್ವಾಮಿ, ಜಿಪಂ ಸಿಇಓ ಬಿ.ಆರ್. ಪೂಣ ðಮಾ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿ ಗಳಾದ ಎಂ.ಎಸ್. ಗೀತಾ ಪ್ರಸನ್ನ, ಪ್ರದೀಪ್ ಗುಂಟಿ ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತ ರಿದ್ದರು. ಜುಲೈ ೧, ೮, ೧೫ ಹಾಗೂ ೨೨ರಂದು ಆಷಾಢ ಶುಕ್ರವಾರದ ಪೂಜೆ ನಡೆಯಲಿದ್ದು, ಜುಲೈ ೨೦ರಂದು ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ವರ್ಧಂತಿ ಉತ್ಸವ ನೆರವೇರಲಿದೆ. ಸಹಸ್ರಾರು ಭಕ್ತಾದಿಗಳು ಚಾಮುಂಡಿಬೆಟ್ಟಕ್ಕೆ ತೆರಳಿ, ದೇವಿ ದರ್ಶನ ಪಡೆಯಲಿದ್ದಾರೆ.

Translate »