ರಾಮದಾಸರಿಗೆ ಪ್ರಧಾನಿ ಮೋದಿ ಗುದ್ದು…! ಬಾಂಧವ್ಯ ಬೆಸೆಯುವ ಮದ್ದು…!?
ಮೈಸೂರು

ರಾಮದಾಸರಿಗೆ ಪ್ರಧಾನಿ ಮೋದಿ ಗುದ್ದು…! ಬಾಂಧವ್ಯ ಬೆಸೆಯುವ ಮದ್ದು…!?

June 23, 2022

ತಾಯಿ ಅಗಲಿಕೆ ನಂತರ ಮೋದಿ ಹುಟ್ಟುಹಬ್ಬಕ್ಕೆ ರಾಮದಾಸ್ ಕುಟುಂಬ ಹೋಗದೇ ಇದ್ದರೂ, ಮೋದಿಯವರ ಹುಟ್ಟುಹುಬ್ಬ ಸಂದರ್ಭದಲ್ಲಿ ಜನಪರ ಕೆಲಸಗಳನ್ನು ಮಾಡುತ್ತಿದ್ದರು ಎಂಬುದಕ್ಕೆ ೨೦೨೧ರ ಸೆಪ್ಟೆಂಬರ್‌ನಲ್ಲಿ ಮೋದಿ ಯವರ ಹುಟ್ಟುಹಬ್ಬದ ಅಂಗವಾಗಿ `ಮೋದಿ ಯುಗ ಉತ್ಸವ್’ ಹೆಸರಿನಲ್ಲಿ ಸುದೀರ್ಘ ೨೦ ದಿನಗಳ ಕಾಲ ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು
ತನ್ನ ಕ್ಷೇತ್ರದ ಜನರಿಗೆ ತಲುಪಿಸುವ ಕಾರ್ಯವನ್ನು ರಾಮದಾಸ್ ಮಾಡಿದ್ದರು. ಈ ಉತ್ಸವಕ್ಕೆ ಕೇಂದ್ರ ಮತ್ತು ರಾಜ್ಯ ಸಚಿವರನ್ನು ಆಹ್ವಾನಿಸಿ, ಬಹುತೇಕ ಎಲ್ಲಾ ಇಲಾಖೆಗಳಿಂದ ದೊರೆಯುವ ಸೌಲಭ್ಯ ಗಳನ್ನು ತನ್ನ ಕ್ಷೇತ್ರದ ಜನತೆಗೆ ನೀಡುವ ಮೂಲಕ ಮೋದಿ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದರು. ಇಂತಹ ಒಂದು ಬಾಂಧವ್ಯವೇ ರಾಮದಾಸ್ ಅವರಿಗೆ ಪ್ರಧಾನಿ ನೀಡಿದ ಗುದ್ದಿನ ಗುಟ್ಟು.

ಗುಜರಾತ್ ವಿಧಾನಸಭೆ ಚುನಾವಣೆ ನಡೆಯುವ ವೇಳೆ ರಾಮದಾಸ್ ಮತ್ತು ಸಹೋದರ ಶ್ರೀಕಾಂತ್ ದಾಸ್ ಗುಜರಾತ್‌ಗೆ ಪ್ರತಿ ಬಾರಿಯೂ ಭೇಟಿ ನೀಡಿ, ಅವರಿಗೆ ನೈತಿಕ ಸ್ಥೆöÊರ್ಯ, ಸ್ಫೂರ್ತಿ ತುಂಬುತ್ತಾ ಬಂದಿದ್ದಾರೆ. ೧೦ರಿಂದ ೧೫ ದಿನಗಳ ಕಾಲ ಅಲ್ಲೇ ಠಿಕಾಣ ಹೂಡಿ ಅಲ್ಲಿನ ಕನ್ನಡ ಸಂಘಟನೆಗಳನ್ನು ಒಗ್ಗೂಡಿಸಿ ಪ್ರಚಾರ ಮಾಡುವುದರ ಜೊತೆಗೆ ಇಂತಹ ಸಭೆಗಳಿಗೆ ಮೋದಿಯವರನ್ನು ಕರೆಸಿ, ಅಲ್ಲಿನ ಕನ್ನಡಿಗರ ಬೆಂಬಲವನ್ನು ಕೊಡಿಸುತ್ತಿದ್ದರು. ಮೋದಿ ಮೂರು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗಲೂ ರಾಮದಾಸ್ ಕುಟುಂಬ ಅಲ್ಲಿ ಹಾಜರಿರುತ್ತಿತ್ತು.

ಅಂದು ಜೂನ್ ೨೦, ಮೈಸೂರಿನ ಮಹಾರಾಜ ಕಾಲೇಜು ಮೈದಾನ ದಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೃಷ್ಣ ರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಅವರಿಗೆ ಗುದ್ದಿದ ಒಂದು ಪ್ರೀತಿ-ಮಮಕಾರದ ಗುದ್ದು ಇಡೀ ಮೈಸೂರಿನಲ್ಲಿ ಸಂಚಲನವನ್ನುAಟು ಮಾಡಿದ್ದು, ಹಾಗಾದರೆ ಈ ಗುದ್ದಿನ ಗುಟ್ಟು ಏನಿರಬಹುದು ಎಂಬುದರ ಬಗ್ಗೆ ಭಾರೀ ಪ್ರಮಾಣದ ಚರ್ಚೆಗಳು ಆರಂಭವಾಗಿವೆ.

ನರೇAದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಆಗುವುದಕ್ಕೆ ಮೊದ ಲಿನಿಂದಲೂ ಎಸ್.ಎ.ರಾಮದಾಸ್ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿರುವುದು ಬ್ರಹ್ಮ ರಹಸ್ಯ. ಆಗ ಮೋದಿ ಅವರು ಪಕ್ಷ ಸಂಘಟನೆ ಯಲ್ಲಿ ಮಾತ್ರ ತೊಡಗಿಕೊಂಡಿದ್ದರು. ಒಮ್ಮೆ ಮೈಸೂರಿಗೆ ಆಗಮಿಸಿದಂದಿ ನಿಂದ ರಾಮದಾಸ್ ಅವರೊಂದಿಗಿನ ಒಡನಾಟ ಇನ್ನು ಹೆಚ್ಚಾಯಿತು. ಮೋದಿ ಗುಜರಾತ್ ಮುಖ್ಯಮಂತ್ರಿಯಾದ ನಂತರ ಇಡೀ ದೇಶದ ಗಮನ ಸೆಳೆದರು. ಆದರೆ, ಅದಕ್ಕೂ ಮುನ್ನವೇ ಹಲವಾರು ಬಾರಿ ಸಂಘಟನೆಯ ಕೆಲಸ ಕಾರ್ಯಗಳಿಗಾಗಿ ಮೈಸೂರಿಗೆ ಭೇಟಿ ನೀಡಿದ್ದರು. ಆಗ ರಾಮದಾಸ್ ಅವರ ಮನೆಗೆ ತಪ್ಪದೇ ಭೇಟಿ ನೀಡುತ್ತಿದ್ದರು. ಅವರ ಮನೆಯಲ್ಲೇ ತಾಯಿಯ ಸವಿಯೂಟ. ರಾಮದಾಸ್ ಕುಟುಂಬದ ಜೊತೆ ಅವರದು ಗಾಢ ಸಂಬAಧ.

ಮಾತ್ರವಲ್ಲ, ಮೋದಿಯವರ ಪ್ರತಿ ಹುಟ್ಟುಹಬ್ಬಕ್ಕೆ ರಾಮದಾಸ್ ಅವರು, ತಾಯಿ ಮತ್ತು ಸಹೋದರರಾದ ಖ್ಯಾತ ಉದ್ಯಮಿ ಶ್ರೀಕಾಂತ್‌ದಾಸ್ ಅವರೊಂದಿಗೆ ಅಹಮದಾಬಾದ್‌ಗೆ ಭೇಟಿ ನೀಡಿ, ಚಾಮುಂಡೇಶ್ವರಿ ಪ್ರಸಾದ, ಮೋದಿಯವರಿಗೆ ಇಷ್ಟವಾದ ಮೈಸೂರು ಪಾಕ್ ಮತ್ತು ಕಾಟನ್ ಬಟ್ಟೆಗಳನ್ನು ಉಡುಗೊರೆಯಾಗಿ ನೀಡುತ್ತಾ ಬಂದಿದ್ದರು. ಇದು ರಾಮದಾಸ್ ಅವರ ತಾಯಿ ನಿಧನರಾಗುವವರೆಗೂ ನಿರಂತರವಾಗಿ ಮುಂದುವರೆದಿತ್ತು. ಆನಂತರ ರಾಮದಾಸ್ ಕುಟುಂಬ ಮೋದಿಯವರ ಹುಟ್ಟುಹಬ್ಬಕ್ಕೆ ಅಲ್ಲಿಗೆ ಹೋಗಿದ್ದಿಲ್ಲ. ಮೋದಿಯವರು ಪ್ರಧಾನಿಯಾದ ನಂತರ ರಾಮದಾಸ್ ಅವರ ಮಾತೃಶ್ರೀ ಅವರು ಇಹಲೋಕ ತ್ಯಜಿಸಿದ್ದರು. ಮೋದಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಅಹಮದಾಬಾದ್‌ಗೆ ಹೋಗುತ್ತಿದ್ದ ರಾಮದಾಸ್ ಕುಟುಂಬ, ಅವರು ಪ್ರಧಾನಿಯಾದ ನಂತರವAತೂ ಹುಟ್ಟುಹಬ್ಬದ ಶುಭಾ ಶಯ ಕೋರಲು ಇಲ್ಲಿವರೆಗೂ ದೆಹಲಿಗೆ ಹೋಗಲೇ ಇಲ್ಲ. ಇದೇ ವಿಚಾರ ವನ್ನು ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರೊAದಿಗೆ ಪ್ರಸ್ತಾಪಿಸಿದ ಮೋದಿ, “ನನಗೆ ಬಹಳ ಉಡುಗೊರೆಗಳು ತಪ್ಪಿ ಹೋಗಿದೆ’’ ಎಂದು ಹೇಳುತ್ತಾ ಹುಸಿ ಕೋಪದಿಂದ ಅವರ ಬೆನ್ನಿಗೆ ವಾತ್ಸಲ್ಯದಿಂದಲೇ ಗುದ್ದಿ, ತಟ್ಟುತ್ತಾ ನಂತರ ಸವರುತ್ತಾ “ತಾಯಿ ಹೋದ ಮೇಲೆ ಅಣ್ಣ ತಮ್ಮಂದಿರು ನನ್ನ ಮರೆತು ಬಿಟ್ಟಿದ್ದೀರಾ’’ ಎಂದು ನಯವಾಗಿ ತರಾಟೆಗೆ ತೆಗೆದುಕೊಂಡರು.

ಸುಮಾರು ಎರಡೂವರೆ ದಶಕದಿಂದ ಮೋದಿಯವರೊಂದಿಗೆ ಆತ್ಮೀಯ ಸಂಬAಧ ಹೊಂದಿದ್ದ ರಾಮದಾಸ್, ವೈಯಕ್ತಿಕ ವಿಚಾರವಾಗಲಿ, ತಮ್ಮ ರಾಜ ಕೀಯ ಬೆಳವಣ ಗೆಗೆ ಮೋದಿಯವರನ್ನು ಬಳಸಿಕೊಂಡಿಲ್ಲ. ಅದೇ ರೀತಿ ಉದ್ಯಮಿಯಾಗಿರುವ ಶ್ರೀಕಾಂತ್‌ದಾಸ್ ಕೂಡ ತನ್ನ ಉದ್ಯಮದ ಬೆಳವಣ ಗೆಗಾಗಿ ಮೋದಿಯವರನ್ನು ಎಂದೂ ಬಳಸಿಕೊಂಡಿಲ್ಲ. ಬದಲಾಗಿ ರಾಮದಾಸ್ ತನ್ನ ಕ್ಷೇತ್ರದ ಜನರಿಗಾಗಿ ಮೋದಿಯವರನ್ನು ಬಳಸಿಕೊಂಡಿದ್ದಾರೆ. ಗರಿಷ್ಠ ಮಟ್ಟದಲ್ಲಿ ಜನರಿಗೆ ಅನುಕೂಲ ಕಲ್ಪಿಸಿದ್ದಾರೆ. ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ತನ್ನ ಕ್ಷೇತ್ರಕ್ಕೆ ಮೋದಿ ಪ್ರಭಾವ ಬಳಸಿಯೇ ತಂದಿದ್ದಾರೆ. ಉದಾಹರಣೆಗೆ ಕೊರೊನಾ ಸಂದರ್ಭದಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ ಇಷ್ಟೇ ಪ್ರಮಾಣದ ಲಸಿಕೆಯೆಂದು ನಿಗದಿಪಡಿಸಿ ವಿತರಿಸಲಾಗಿತ್ತು. ಆದರೆ, ರಾಮ ದಾಸ್ ಅವರ ಕೆ.ಆರ್. ಕ್ಷೇತ್ರಕ್ಕೆ ಮಾತ್ರ ಲಸಿಕೆಗೆ ಕೊರತೆಯೇ ಇಲ್ಲ. ರಾಮ ದಾಸ್ ಮೋದಿಯವರೊಂದಿಗಿನ ತಮ್ಮ ಬಾಂಧವ್ಯ ಬಳಸಿಕೊಂಡು ಹೆಚ್ಚಿನ ಪ್ರಮಾಣದ ಲಸಿಕೆಯನ್ನು ತಂದು ತನ್ನ ಕ್ಷೇತ್ರದ ಜನತೆಗೆ ನೀಡಿದ್ದರು. ಹೀಗಾಗಿಯೇ ಇಡೀ ರಾಜ್ಯದಲ್ಲಿ ಶೇ.೧೦೦ರಷ್ಟು ಲಸಿಕೆ ನೀಡಿದ ಮೊದಲ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಕೆ.ಆರ್.ಕ್ಷೇತ್ರ ಪಾತ್ರವಾಗಿದೆ. ಅದೇ ರೀತಿ ಆಯುಷ್ಮಾನ್ ಕಾರ್ಡ್ ವಿತರಣೆಯಲ್ಲೂ ರಾಮದಾಸ್ ಸಾಧನೆ ಮಾಡಿದ್ದಾರೆ.

ಬೀದಿಬದಿ ವ್ಯಾಪಾರಿಗಳು ಪ್ರತಿದಿನ ಬೆಳಗ್ಗೆ ಶೇ.೧೦ರಿಂದ ೨೦ರವರೆಗೆ ಬಡ್ಡಿ ದರದಲ್ಲಿ ಲೇವಾದೇವಿದಾರರಿಂದ ದೈನಂದಿನ ವ್ಯಾಪಾರ ವಹಿವಾಟಿಗೆ ಸಾಲ ಪಡೆಯುತ್ತಿದ್ದರು. ವ್ಯಾಪಾರ ಮುಗಿಸಿ ಸಂಜೆ ಆ ಹಣವನ್ನು ಹಿಂತಿರುಗಿಸಿ ಮರುದಿನ ಮತ್ತೆ ಸಾಲದ ಮೊರೆ ಹೋಗುತ್ತಿದ್ದರು. ಇದನ್ನು ಗಮನಿಸಿದ ರಾಮದಾಸ್ ತಾವು ಸಚಿವರಾಗಿದ್ದಾಗ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಬೀದಿಬದಿ ವ್ಯಾಪಾರಿಗಳಿಗಾಗಿ ಬ್ಯಾಂಕ್ ಸ್ಥಾಪಿಸಿ ಪ್ರತಿದಿನ ಅತೀ ಕಡಿಮೆ ಬಡ್ಡಿಯಲ್ಲಿ ಅವರಿಗೆ ಸಾಲ ಸೌಲಭ್ಯ ನೀಡುವ ಒಂದು ಯೋಜನೆಯನ್ನು ಪ್ರಕಟಿಸಿದ್ದರು. ಆದರೆ, ಅಷ್ಟರಲ್ಲಿ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಯಿತು. ನಂತರದ ಚುನಾವಣೆಯಲ್ಲಿ ಪರಾಭವ ಗೊಂಡಿದ್ದರಿAದ ಈ ಯೋಜನೆ ಕಾರ್ಯಗತವಾಗಲೇ ಇಲ್ಲ. ಆದರೆ, ರಾಮದಾಸ್ ಅವರು ಇದೇ ಚಿಂತನೆಯಲ್ಲಿ ಮೋದಿಯವರು ಬೀದಿ ಬದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ವಿಶೇಷ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದರೆ ನರೇಂದ್ರ ಮೋದಿ ಮತ್ತು ಎಸ್.ಎ.ರಾಮದಾಸ್ ಅವರ ಚಿಂತನೆಗಳ ಸಾಮ್ಯತೆ ಗಮನಿಸಬಹುದಾಗಿದೆ.

ಇನ್ನು ಮೋದಿಯವರಂತೆಯೇ ರಾಮದಾಸ್ ಕೂಡ ಸದಾ ಜನಪರ ಚಿಂತನಾಶೀಲರು. ಅವರು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾಗ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೆನರಿಕ್ ಔಷಧಿ ಮಳಿಗೆಗಳನ್ನು ತೆರೆದು ಬಡ ಜನರಿಗೆ ಕಡಿಮೆ ದರದಲ್ಲಿ ಮಾತ್ರೆ, ಔಷಧಿ ದೊರೆಯುವಂತೆ ಮಾಡಿದ್ದರು. ಆನಂತರ ಬಂದ ಸರ್ಕಾರ ಜೆನರಿಕ್ ಔಷಧಿ ಮಳಿಗೆಗಳ ಬಗ್ಗೆ ಅಷ್ಟೇನೂ ಗಮನಹರಿಸಲಿಲ್ಲ. ಆದರೆ, ಮೋದಿಯವರು ರಾಮದಾಸ್ ಜಾರಿಗೆ ತಂದಿದ್ದ ಜೆನರಿಕ್ ಔಷಧಿ ಮಳಿಗೆಯಂತೆಯೇ ಇಡೀ ರಾಷ್ಟçದಲ್ಲಿ ಜನೌಷಧಿ ಮಳಿಗೆಗಳನ್ನು ತೆರೆದು ಬಡಜನರಿಗೆ ಕಡಿಮೆ ದರದಲ್ಲಿ ಔಷಧಿ ಕಲ್ಪಿಸುತ್ತಿದೆ. ಈ ಯೋಜನೆ ಜಾರಿಗೆ ಬಂದಾಗಲೂ ರಾಮದಾಸ್ ಆಗ ಶಾಸಕರಾಗಿಲ್ಲದಿದ್ದರೂ ತನ್ನ ಕ್ಷೇತ್ರದಲ್ಲಿ ಜನೌಷಧಿ ಮಳಿಗೆ ತೆರೆಯುವಂತೆ ನೋಡಿಕೊಂಡರು.

Translate »