ಜು.1ರಿಂದ ರಾಜ್ಯಾದ್ಯಂತ ಪೌರಕಾರ್ಮಿಕರ ಮುಷ್ಕರ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘಟನೆಗಳಿಂದ ಬೆಂಬಲ
ಮೈಸೂರು

ಜು.1ರಿಂದ ರಾಜ್ಯಾದ್ಯಂತ ಪೌರಕಾರ್ಮಿಕರ ಮುಷ್ಕರ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘಟನೆಗಳಿಂದ ಬೆಂಬಲ

June 23, 2022

ಮುಷ್ಕರದ ಜೊತೆಗೆ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ
ನಗರ ಸ್ಥಳೀಯ ಸಂಸ್ಥೆಗಳ ನೇರ ಪಾವತಿ ಪೌರಕಾರ್ಮಿಕರು, ಒಳಚರಂಡಿ ಸಹಾಯಕರು, ಕಸ ಸಾಗಾಣೆ ವಾಹನ ಚಾಲಕರ ಖಾಯಂಗೆ ಆಗ್ರಹ

ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಪೌರಕಾರ್ಮಿಕರ ಹೋರಾಟ ಸಂಬAಧ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಪೌರಕಾರ್ಮಿಕರ
ಮಹಾ ಸಂಘದ ಅಧ್ಯಕ್ಷ ನಾರಾಯಣ್ ಮಾತನಾಡುತ್ತಿರುವುದು.

ಮೈಸೂರು,ಜೂ.೨೨(ಪಿಎಂ)-ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ನೇರಪಾವತಿ ಪೌರಕಾರ್ಮಿಕರು, ಒಳಚರಂಡಿ ಸಹಾ ಯಕರು ಮತ್ತು ಕಸ ಸಾಗಾಣ ಕೆ ವಾಹನ ಚಾಲಕರನ್ನು ಖಾಯಂಗೊಳಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಮಹಾ ಸಂಘದ ವತಿಯಿಂದ ಜುಲೈ ೧ರಿಂದ ಬೇಡಿಕೆ ಈಡೇರುವವರೆಗೆ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ.

ಅಲ್ಲದೆ, ರಾಜ್ಯಾದ್ಯಂತ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಎದುರು ಅನಿರ್ದಿ ಷ್ಟಾವಧಿ ಅಹೋರಾತ್ರಿ ಪ್ರತಿಭಟನಾ ಧರಣ ನಡೆಸಲು ನಿರ್ಣಯಿ ಸಲಾಗಿದೆ. ಅಂತೆಯೇ ಮೈಸೂರು ಮಹಾನಗರ ಪಾಲಿಕೆ ಎದುರು ಜು.೧ರಿಂದ ಪ್ರತಿಭಟನಾ ಧರಣ ಆರಂಭಗೊಳ್ಳಲಿದ್ದು, ಸದರಿ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಲಿ ದ್ದಾರೆ. ಇವರ ಹೋರಾಟಕ್ಕೆ ಪ್ರಗತಿಪರ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ.
ಬದುಕು ನಿಕೃಷ್ಟ: ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಬುಧ ವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಹೋರಾಟದ ರೂಪು ರೇಷೆ ಬಗ್ಗೆ ಚರ್ಚಿಸಲಾಯಿತು. ಪ್ರಸ್ತಾವಿಕವಾಗಿ ಮಾತನಾಡಿದ ಮಹಾ ಸಂಘದ ರಾಜ್ಯಾಧ್ಯಕ್ಷ ನಾರಾಯಣ್, ರಾಜ್ಯದ ನಗರ ಸ್ಥಳೀಯ ಸಂಸ್ಥೆ ಗಳಲ್ಲಿ ನೇರಪಾವತಿ ಪೌರಕಾರ್ಮಿಕರು, ಒಳಚರಂಡಿ ಸಹಾಯ ಕರು ಮತ್ತು ಕಸ ಸಾಗಾಣ ಕೆ ವಾಹನ ಚಾಲಕರು ಸೇರಿದಂತೆ ಒಟ್ಟಾರೆ ಸುಮಾರು ೫೦ ಸಾವಿರ ಮಂದಿ ಖಾಯಂ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಇವರ ಬದುಕು ಅತ್ಯಂತ ನಿಕೃಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ, ಹೋರಾಟ ನಡೆಸಿದ್ದರ ಫಲವಾಗಿ ಗುತ್ತಿಗೆ ಪದ್ಧತಿ ರದ್ದುಗೊಂಡಿತು. ಆ ಮೂಲ ನೇರಪಾವತಿ ಜಾರಿಯಾಯಿತು. ಆದರೆ ಗುತ್ತಿಗೆದಾರರು ನೀಡು ತ್ತಿದ್ದ ವೇತನವನ್ನು ಈಗ ಸರ್ಕಾರ ನೀಡುವಂತೆ ಆಗಿದೆಯೇ ಹೊರತು, ನೇರಪಾವತಿ ಪಡೆಯುವ ಪೌರಕಾರ್ಮಿಕರಿಗೆ ಸೇವಾ ಭದ್ರತೆ ಸೇರಿದಂತೆ ಯಾವುದೇ ಸೌಲಭ್ಯಗಳು ಇಲ್ಲವಾಗಿವೆ ಎಂದರು.

ಗುತ್ತಿಗೆ ಪದ್ಧತಿ ಇದ್ದಾಗ ಇದ್ದ ಸಮಸ್ಯೆಗಳು ಇಂದಿಗೂ ಇವೆ. ಹಾಗಾಗಿ ಖಾಯಂ ಮಾಡಬೇಕೆಂಬ ಹೋರಾಟ ನಡೆಸಲಾಗುತ್ತಿದೆ. ಆದರೆ ಸರ್ಕಾರ ಯಾವುದೇ ರೀತಿ ಸ್ಪಂದಿಸುತ್ತಿಲ್ಲ. ಪೌರಕಾರ್ಮಿಕ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಕಾಳಜಿ ಇಲ್ಲ. ಹಾಗಾಗಿ ಜು.೧ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಬದ್ಧತೆ ಮುಖ್ಯ: ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಹೋರಾಟದಲ್ಲಿ ಗುರಿ ಮುಟ್ಟುವವರೆಗೆ ದಿಟ್ಟ ಹೆಜ್ಜೆ ಹಾಕಬೇಕು. ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು. ಹೋರಾಟದಲ್ಲಿ ಯಾವುದೇ ಗುಂಪು ಗಾರಿಕೆಗೆ ಅವಕಾಶ ನೀಡಬಾರದು. ಪ್ರಾಮಾಣ ಕವಾಗಿ ಬದ್ಧತೆಯಿಂದ ಹೋರಾಟ ನಡೆಸಬೇಕು. ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲೇ ಖಾಯಂ ಮಾಡಬಹುದಿತ್ತು. ಪ್ರಸ್ತುತ ಇರುವ ಸರ್ಕಾರವಂತೂ ಗುತ್ತಿಗೆ ಪದ್ಧತಿಗೇ ಹೆಚ್ಚಿನ ಆದ್ಯತೆ ನೀಡುತ್ತಿದೆ. ಬಿಜೆಪಿ ಸರ್ಕಾರದಲ್ಲಿ ನಾಟಕೀಯವೇ ಹೆಚ್ಚು ಎಂದು ಟೀಕಾಪ್ರಹಾರ ನಡೆಸಿದರು. ದಸಂಸ ಮುಖಂಡ ಹರಿಹರ ಆನಂದಸ್ವಾಮಿ ಮಾತನಾಡಿ, ಶೋಷಿತ ಸಮುದಾಯಗಳ ಏಳಿಗೆಗಾಗಿ ದಲಿತ ಚಳುವಳಿ ಜನ್ಮತಾಳಿತು. ಆದರೆ ದಲಿತ ಚಳುವಳಿ ದಿಕ್ಕು ತಪ್ಪಿ ಛೀದ್ರವಾಗಿದ್ದು, ಒಂದುಗೂಡಿಸುವ ಬದ್ಧತೆ ತೋರಬೇಕಿದೆ. ನಿಮ್ಮ ಹೋರಾಟ ರಾಜಕೀಯ ಕುತಂತ್ರಕ್ಕೆ ಬಲಿಯಾಗಬಾರದು. ಯಾವುದೇ ಸಂದರ್ಭ ದಲ್ಲೂ ಒಗ್ಗಟ್ಟು ಕಳೆದುಕೊಳ್ಳದೇ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು. ಕರ್ನಾಟಕ ಬುದ್ಧ ಧಮ್ಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಮಹದೇವಪ್ಪ ಪ್ರಗತಿಪರ ಚಿಂತಕರಾದ ರತಿರಾವ್, ನಾ.ದಿವಾಕರ್, ಸಿಪಿಎಂ ಮುಖಂಡ ಬಸವರಾಜು, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ.ದೀಪಕ್, ಸಂಶೋಧಕರ ಸಂಘದ ಮರಿದೇವಯ್ಯ, ಮೈಸೂರು ನಗರ ಪಾಲಿಕೆ ಖಾಯಂ ಪೌರಕಾರ್ಮಿಕರ ಹಾಗೂ ಗುತ್ತಿಗೆ ಪೌರಕಾರ್ಮಿಕರ ಮಹಾಸಂಘದ ಉನ್ನತ ಸಮಿತಿ ಅಧ್ಯಕ್ಷ ಎನ್.ಮಾರ, ಪ್ರಧಾನ ಕಾರ್ಯದರ್ಶಿ ಸಿ.ಆರ್.ರಾಚಯ್ಯ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »