ಮಹಾರಾಷ್ಟ್ರ ಉದ್ಧವ್ ಠಾಕ್ರೆ ಸರ್ಕಾರ ಪತನ ಸನ್ನಿಹಿತ
ಮೈಸೂರು

ಮಹಾರಾಷ್ಟ್ರ ಉದ್ಧವ್ ಠಾಕ್ರೆ ಸರ್ಕಾರ ಪತನ ಸನ್ನಿಹಿತ

June 23, 2022

ಏಕನಾಥ್ ಶಿಂಧೆ ನೇತೃತ್ವದಲ್ಲಿ ೩೮ ಶಾಸಕರು ಬಂಡಾಯ
ಮುAಬೈ: ಮಹಾರಾಷ್ಟç ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ಪತನ ಸನ್ನಿಹಿತವಾಗಿದ್ದು, ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬರುವ ಲಕ್ಷಣ ಗಳು ಗೋಚರಿ ಸುತ್ತಿವೆ. ೫೬ ಶಾಸಕ ಬಲದ ಶಿವಸೇನೆಯ ೩೮ ಶಾಸಕರು ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಜೊತೆ ಕೈಜೋಡಿಸಿದ್ದಾರೆ.

ಉದ್ಧವ್ ವಿರುದ್ಧ ಬಂಡಾಯವೆದ್ದಿ ರುವ ಏಕ್‌ನಾಥ್ ಶಿಂಧೆ, ತಮ್ಮ ಜೊತೆ ೪೬ ಶಾಸಕರಿದ್ದು, ನಮ್ಮದೇ ನಿಜವಾದ ಶಿವಸೇನೆ ಎಂದು ಪ್ರತಿಪಾದಿಸುವುದರ ಜೊತೆಗೆ ಬಿಜೆಪಿ ಜೊತೆ ಸೇರಿ ಹಿಂದೂ ಪರ ಸರ್ಕಾರ ರಚಿಸುವ ಇಂಗಿತ ವ್ಯಕ್ತ ಪಡಿಸಿದ್ದಾರೆ. ಮತ್ತೊಂದೆಡೆ ಶಿವಸೇನೆಯ ೩೪ ಶಾಸಕರು ಸಭೆ ಸೇರಿ ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಏಕನಾಥ್ ಶಿಂಧೆ ಅವರನ್ನು ಆಯ್ಕೆ ಮಾಡಿ, ನಿರ್ಣಯವನ್ನು ರಾಜ್ಯಪಾಲರಿಗೆ ರವಾನಿಸಿದ್ದಾರೆ. ಜೊತೆಗೆ ಶಿವಸೇನಾ ಶಾಸಕ ಸುನಿಲ್ ಪ್ರಭು ಅವರನ್ನು ಮುಖ್ಯ ಸಚೇತಕ ಸ್ಥಾನದಿಂದ ತೆಗೆದುಹಾಕಿ ಭರತ್ ಗೊಗಾವಾಲೆ ಅವರನ್ನು ನೂತನ ಮುಖ್ಯ ಸಚೇತಕರನ್ನಾಗಿ ನೇಮಿಸಿ ಕೊಂಡಿದ್ದಾರೆ. ಅಲ್ಲದೆ ಇಂದು ಸಂಜೆ ಉದ್ಧವ್ ಠಾಕ್ರೆ ಕರೆದಿದ್ದ ತುರ್ತು ಶಾಸಕಾಂಗ ಪಕ್ಷದ ಸಭೆ ಕಾನೂನುಬಾಹಿರ ಎಂದು ಘೋಷಿಸಿದ್ದಾರೆ. ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿ ಕೂಟದ ೧೬೯ ಶಾಸಕರ ಬೆಂಬಲದೊAದಿಗೆ ಉದ್ಧವ್ ಠಾಕ್ರೆ ಸಿಎಂ ಸ್ಥಾನಕ್ಕೇರಿದ್ದರು. ಇದೀಗ ಶಿವಸೇನೆಯ ೫೬ ಶಾಸಕರ ಪೈಕಿ ೩೮ ಶಾಸಕರು ಬಂಡಾಯ ನಾಯಕ ಏಕನಾಥ್ ಶಿಂಧೆ ಜೊತೆ ತೆರಳಿರುವುದರಿಂದ ಶಿವಸೇನೆ ಬಲ ೧೮ಕ್ಕೆ ಕುಸಿದಿದೆ. ಏಕನಾಥ್ ಶಿಂಧೆ ಹೇಳುತ್ತಿರುವಂತೆ ಅವರೊಂದಿಗೆ ೪೬ ಶಾಸಕರು ಇದ್ದ ಪಕ್ಷದಲ್ಲಿ ಶಿವಸೇನಾ ಬಲ ಕೇವಲ ೧೦ಕ್ಕೆ ಹಾಗೂ ಎಂ.ವಿ.ಎ. ಬಲ ೧೨೩ಕ್ಕೆ ಕುಸಿಯಲಿದೆ. ಬಂಡಾಯ ಶಾಸಕರು ಬಿಜೆಪಿ ಜೊತೆ ಕೈಜೋಡಿಸಿದರೆ, ಎನ್‌ಡಿಎ ಬಲ ೧೫೯ಕ್ಕೆ ಏರಲಿದ್ದು, ೨೮೮ ಶಾಸಕರ ಬಲ ಹೊಂದಿರುವ ಮಹಾರಾಷ್ಟçದಲ್ಲಿ ಎನ್‌ಡಿಎ ಬೆಂಬಲದೊAದಿಗೆ ಏಕನಾಥ್ ಶಿಂಧೆ ಸರ್ಕಾರ ರಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಶಿವಸೇನೆ ಶಾಸಕರ ಬಂಡಾಯದ ಹಿಂದೆ ಮಹಾರಾಷ್ಟç ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕಾರ್ಯತಂತ್ರವಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ನೊಂದಿಗಿನ ಮೈತ್ರಿಯನ್ನು ವಿರೋಧಿಸಿದ್ದ ಬಂಡಾಯ ಶಾಸಕರು, ಎಂವಿಎ ಮೈತ್ರಿಕೂಟ ದಿಂದ ಹೊರಬರುವಂತೆ ಉದ್ಧವ್ ಠಾಕ್ರೆ ಅವರಿಗೆ ಒತ್ತಡ ಹೇರುತ್ತಿದ್ದರು. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ, ೧೦ ಶಿವಸೇನಾ ಶಾಸಕರು ಮೊದಲು ಸೂರತ್‌ಗೆ ತೆರಳಿದ್ದರು. ನಂತರ ಏಕನಾಥ್ ಶಿಂಧೆ ಜೊತೆ ಮತ್ತೆ ೨೬ ಶಾಸಕರು ಸೂರತ್‌ಗೆ ತೆರಳಿ, ಅಲ್ಲಿನ ಲಿ ಮೆರಿಡಿಯನ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಮಧ್ಯರಾತ್ರಿ ಈ ಶಾಸಕರು ಸೂರತ್‌ನಿಂದ ಅಸ್ಸಾಂನ ಗುವಾಹಟಿಗೆ ತೆರಳಿದ್ದಾರೆ.
ಈ ಮಧ್ಯೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾದ ‘ವರ್ಷಾ’ ತೊರೆದು ತಮ್ಮ ಸ್ವಂತ ನಿವಾಸ ‘ಮಾತೋಶ್ರೀ’ಗೆ ಕುಟುಂಬ ಸಮೇತ ಸ್ಥಳಾಂತರವಾಗಿ ದ್ದಾರೆ. ಆದರೆ, ಈ ಕುರಿತು ಸಂಜಯ್ ರಾವತ್ ಸ್ಪಷ್ಟನೆ ನೀಡಿದ್ದು, ಉದ್ಧವ್ ಠಾಕ್ರೆ ಅಧಿಕೃತ ನಿವಾಸವನ್ನು ತೊರೆದಿದ್ದಾರೆಯೇ ಹೊರತು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ತಿಳಿಸಿದ್ದಾರೆ.
ಶಾಸಕರ ಬಂಡಾಯದ ಹಿನ್ನೆಲೆಯಲ್ಲಿ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿರುವ ಉದ್ಧವ್ ಠಾಕ್ರೆ, ನಾನು ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದೇನೆ. ಮುಖ್ಯಮಂತ್ರಿ ಸ್ಥಾನ ಬರುತ್ತದೆ ಹೋಗುತ್ತದೆ. ಆದರೆ, ಜನರ ಪ್ರೀತಿಯೇ ನಿಜವಾದ ಆಸ್ತಿ. ನನಗೆ ಸಿಎಂ ಸ್ಥಾನದ ಮೇಲೆ ಯಾವುದೇ ಆಸೆ ಇಲ್ಲ ಹಾಗೂ ನಮ್ಮ ಪಕ್ಷ ಶಿವಸೇನೆಯು ಹಿಂದುತ್ವವನ್ನು ಎಂದಿಗೂ ಬಿಟ್ಟು ಕೊಡುವುದಿಲ್ಲ. ಸೂರತ್ ಮತ್ತು ಇತರ ಸ್ಥಳಗಳಲ್ಲಿ ಕುಳಿತು ಏಕೆ ಹೇಳಿಕೆಗಳನ್ನು ನೀಡುತ್ತೀರಿ. ಮುಖ್ಯಮಂತ್ರಿ ಮತ್ತು ಶಿವಸೇನೆ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಲು ನಾನು ಅಸಮರ್ಥನೆಂದು ನನ್ನ ಮುಂದೆ ಬಂದು ಹೇಳಿ. ಆಗ ತಕ್ಷಣ ರಾಜೀನಾಮೆ ನೀಡುತ್ತೇನೆ. ನನ್ನ ರಾಜೀನಾಮೆ ಪತ್ರವನ್ನು ಸಿದ್ದಪಡಿಸಿದ್ದೇನೆ. ನೀವೆ ಬಂದು ಅದನ್ನು ರಾಜಭವನಕ್ಕೆ ಕೊಂಡೊಯ್ಯಿರಿ ಎಂದು ಶಿವಸೇನೆ ಶಾಸಕರಿಗೆ ಕರೆ ನೀಡಿದ್ದಾರೆ.

ಈ ನಡುವೆ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಕೊರೊನಾ ದೃಢಪಟ್ಟಿದೆ ಎಂದು ಕಾಂಗ್ರೆಸ್ ವೀಕ್ಷಕ ಕಮಲ್‌ನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅತ್ತ ಮಹಾರಾಷ್ಟç ರಾಜ್ಯಪಾಲ ಭರತ್ ಸಿಂಗ್ ಕೊಶ್ಯಾರಿ ಅವರಿಗೂ ಕೊರೊನಾ ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿ ದ್ದಾರೆ. ಶಿವಸೇನೆ ಬಂಡಾಯದಿAದಾಗಿ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದ ರಿದ್ದು, ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ.

Translate »