ಮುಡಾ ಸಭೆಯಲ್ಲಿ ಮಹತ್ವದ ನಿರ್ಣಯ
ಮೈಸೂರು

ಮುಡಾ ಸಭೆಯಲ್ಲಿ ಮಹತ್ವದ ನಿರ್ಣಯ

June 23, 2022

೨೦ ಗುಂಟೆ ಒಳಗಿನ ಸಿಂಗಲ್ ಲೇಔಟ್ ಪ್ಲಾನ್ ಅಪ್ರೂವಲ್ ಅಧಿಕಾರ ಆಯುಕ್ತರಿಗೆ

ಎರಡು ಕಡೆ ಗುಂಪು ಮನೆ, ಪೆರಿಫೆರಲ್ ರಸ್ತೆಗೆ ಡಿಪಿಆರ್; ರಿಂಗ್ ರಸ್ತೆ ದೀಪ ಬೆಳಗಿಸಲು ೧೨ ಕೋಟಿ ಅನುದಾನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ ಅಧ್ಯಕ್ಷ ರಾಜೀವ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.

ಮೈಸೂರು, ಜೂ.೨೨(ಆರ್‌ಕೆ)-ಹಲವು ಕಾರಣ ಗಳಿಂದ ನೆನೆಗುದಿಗೆ ಬಿದ್ದಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಸಾಮಾನ್ಯ ಸಭೆ ಅಂತೂ ೮ ತಿಂಗಳ ನಂತರ ಬುಧವಾರ ನಡೆಯಿತು.
ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ೪೦೦ಕ್ಕೂ ಅಧಿಕ ವಿಷಯಗಳ ಮಂಡಿಸಲಾಗಿತ್ತಾದರೂ, ಭೂ ಉಪಯೋಗ ಬದಲಾವಣೆ, ಬದಲಿ ನಿವೇಶನ, ತುಂಡು ಭೂಮಿ ಮಂಜೂರಾತಿ, ಖಾಸಗಿ ಬಡಾವಣೆಗಳಿಗೆ ನಕ್ಷೆ ಅನು ಮೋದನೆಗಳಿಗೆ ಸಭೆಯು ಯಾವುದೇ ಚರ್ಚೆಯೂ ಇಲ್ಲದೆ ತ್ವರಿತವಾಗಿ ಅನುಮೋದನೆ ನೀಡಿತು.

ಮಾಜಿ ಸೈನಿಕರ ಸಂಘದ ಕೋರಿಕೆಯಂತೆ ಮುಡಾ ಸದಸ್ಯರಾದ ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇ ಗೌಡರ ಒತ್ತಾಯದ ಮೇರೆಗೆ ಮುಡಾದಿಂದ ಮಂಜೂ ರಾದ ಮಾಜಿ ಸೈನಿಕರ ನಿವೇಶನ, ಮನೆಗಳಿಗೆ ಶೇ. ೫೦ರಷ್ಟು ತೆರಿಗೆ ವಿನಾಯ್ತಿ ನೀಡುವ ಕುರಿತು ಚರ್ಚೆ ನಡೆದು ಬಳಿಕ, ಮುನ್ಸಿಪಲ್ ಕಾಯ್ದೆಯಲ್ಲಿ ಅವಕಾಶವಿರುವ ಬಗ್ಗೆ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ಖಾತರಿಪಡಿಸಿದ ಹಿನ್ನೆಲೆ ಯಲ್ಲಿ ಮಾಜಿ ಸೈನಿಕರಿಗೆ ಶೇ.೫೦ ತೆರಿಗೆ ವಿನಾಯಿತಿ ನೀಡಲು ತೀರ್ಮಾನಿಸಲಾಯಿತು. ೨೦ ಗುಂಟೆ ಒಳಗಿನ ಭೂಮಿಯಲ್ಲಿ ಸಿಂಗಲ್ ಲೇಔಟ್ಮಾಡುವವರಿಗೆ ನಕ್ಷೆ ಅನುಮೋದನೆಗಾಗಿ ಪ್ರಾಧಿಕಾರದ ಸಭೆಗೆ ಕಾಯುವ ಬದಲು ಆಯುಕ್ತರ ಹಂತದಲ್ಲೇ ಇತ್ಯರ್ಥಗೊಳಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾದ ಕಾರಣ ಆಯುಕ್ತರಿಗೆ ಪ್ಲಾನ್ ಅನುಮೋದನೆ ಅಧಿಕಾರ ನೀಡಲಾಯಿತು.

೨ ಕಡೆ ಮಾತ್ರ ಗುಂಪು ಮನೆ: ಕೈಗೆಟಕುವ ದರದಲ್ಲಿ ಗುಂಪು ಮನೆ ನೀಡುವ ಯೋಜನೆಗೆ ೩ ಕಡೆ ಗುರುತಿಸಲಾಗಿತ್ತಾದರೂ, ಒಂದೆಡೆ ಮಧ್ಯೆ ರಾಜ ಕಾಲುವೆ ಹಾದು ಹೋಗಿರು ವುದರಿಂದ ಉಳಿದ ಎರಡು ಕಡೆ ಗುಂಪು ಮನೆ ನಿರ್ಮಿಸಲು ನಿರ್ಧರಿಸಲಾಯಿತು.

ಪೆರಿಫೆರಲ್ ರಸ್ತೆಗೆ ಡಿಪಿಆರ್: ಉದ್ದೇಶಿತ ಪೆರಿಫೆರಲ್ ರಿಂಗ್ ರೋಡ್ ಯೋಜನೆಯ ಕಾರ್ಯಸಾಧ್ಯತಾ ವರದಿ ಪಡೆದು ಡಿಪಿಆರ್ ತಯಾರಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲು ಮುಡಾ ಸಭೆಯು ನಿರ್ಧರಿಸಿದೆ. ಕೆಟ್ಟು ನಿಂತಿರುವ ರಿಂಗ್ ರಸ್ತೆ ಬೀದಿ ದೀಪ ರಿಪೇರಿಗಾಗಿ ಮೈಸೂರು ಮಹಾನಗರ ಪಾಲಿಕೆಗೆ ೧೨ ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಪ್ರಾಧಿಕಾರ ತೀರ್ಮಾನಿಸಿತು.

ನಿವೇಶನಗಳ ಸ್ವಚ್ಛತೆ: ಮಾಲೀಕರಿಂದ ಸಂಗ್ರಹಿಸುತ್ತಿರುವ ಖಾಲಿ ನಿವೇಶನಗಳ ಸ್ವಚ್ಛತಾ ಶುಲ್ಕದಲ್ಲಿ ವರ್ಷಕ್ಕೆ ೨ ಬಾರಿ ಸ್ವಚ್ಛತೆ ಮಾಡಬೇಕೆಂದು ಸಭೆಯು ನಿರ್ಧರಿಸಿದೆ. ಮುಡಾದಿಂದ ಸ್ವಚ್ಛತೆ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿರುವುದ ರಿಂದ ಶುಲ್ಕ ವಸೂಲಿಯನ್ನೇ ಕೈಬಿಡಬೇಕೆಂದು ಕೆಲ ಸದಸ್ಯರು ಅಭಿಪ್ರಾಯಪಟ್ಟರಾ ದರೂ, ಕಡೆಗೆ ವರ್ಷಕ್ಕೆರಡು ಬಾರಿ ನಿವೇಶನಗಳನ್ನು ಸ್ವಚ್ಛಗೊಳಿಸಲು ನಿರ್ಧರಿಸಲಾಯಿತು.

ಕುಡಿಯುವ ನೀರಿಗೆ ೧೫೦ ಕೋಟಿ: ಕಬಿನಿಯಿಂದ ಮೈಸೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ೨ನೇ ಹಂತದ ಬಿದರಗೂಡು ಯೋಜನೆ ಅನುಷ್ಠಾನಕ್ಕೆ ೧೫೦ ಕೋಟಿ ರೂ. ಮಂಜೂರಾತಿಗೆ ಮುಡಾ ಸಭೆಯು ಒಪ್ಪಿಗೆ ನೀಡಿದೆ. ಸದಸ್ಯರಾದ ಜಿ.ಟಿ. ದೇವೇಗೌಡ, ಎಸ್.ಎ.ರಾಮದಾಸ್, ಎಲ್. ನಾಗೇಂದ್ರ, ಬಿ. ಹರ್ಷವರ್ಧನ್, ಮರಿ ತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಸಿ.ಎನ್. ಮಂಜೇಗೌಡ, ಡಾ. ತಿಮ್ಮಯ್ಯ, ಎಸ್‌ಬಿಎಂ ಮಂಜು, ಮುಡಾ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್, ಸೂಪರಿಂಟೆAಡೆAಟ್ ಇಂಜಿನಿಯರ್ ಶಂಕರ್ ಸೇರಿದಂತೆ ಹಲವರು ಸಭೆಯಲ್ಲಿ ಹಾಜರಿದ್ದರು.

ಸೋಮವಾರ ಉಪಸಮಿತಿ ಸಭೆ
ನಾಗರಿಕ ಸೌಲಭ್ಯ (ಅಂ) ನಿವೇಶನಗಳ ಹಂಚಿಕೆ ಸಂಬAಧ ಜೂನ್ ೨೭ರಂದು ಉಪಸಮಿತಿ ಸಭೆ ನಡೆಸಿ, ಸಲ್ಲಿಕೆಯಾಗಿರುವ ಅರ್ಜಿಗಳ ಪರಿ ಶೀಲನೆ ಪ್ರಕ್ರಿಯೆ ಪೂರ್ಣಗೊಳಿಸುವ ಬಗ್ಗೆ ಮುಡಾ ಸಾಮಾನ್ಯ ಸಭೆಯು ಸಲಹೆ ನೀಡಿದೆ.

Translate »