ಜಯದೇವ ಆಸ್ಪತ್ರೆಯಲ್ಲಿ ತೆರೆದ ಹೃದಯ ಚಿಕಿತ್ಸೆ ಇಲ್ಲದೆಯೇ ಕವಾಟ ಅಳವಡಿಕೆ
ಮೈಸೂರು

ಜಯದೇವ ಆಸ್ಪತ್ರೆಯಲ್ಲಿ ತೆರೆದ ಹೃದಯ ಚಿಕಿತ್ಸೆ ಇಲ್ಲದೆಯೇ ಕವಾಟ ಅಳವಡಿಕೆ

June 24, 2022

ಮೈಸೂರು,ಜೂ.23(ಎಂಟಿವೈ)- ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಮೊಟ್ಟ ಮೊದಲ ಬಾರಿಗೆ ನಾಲ್ವರು ಹೃದ್ರೋಗಿಗಳಿಗೆ ತೆರೆದ ಹೃದಯ ಚಿಕಿತ್ಸೆ ಇಲ್ಲದೆ ಕವಾಟವನ್ನು ಯಶಸ್ವಿ ಯಾಗಿ ಅಳವಡಿಸಲಾಗಿದೆ(ಟಿಎವಿಐ) ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.

ಮೈಸೂರು ಜಯದೇವ ಹೃದ್ರೋಗ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ, ಕವಾಟ ಅಳವಡಿಕೆ ಶಸ್ತ್ರಚಿಕಿತ್ಸೆಯನ್ನು ಖುದ್ದಾಗಿ ಪರಿಶೀಲಿಸಿದರಲ್ಲದೆ, ಚಿಕಿತ್ಸೆಗೆ ಒಳಗಾದವರ ಆರೋಗ್ಯ ವಿಚಾರಿಸಿದರು. ಬಳಿಕ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಇದುವರೆಗೆ ಹೃದಯದ ಎಡಭಾಗದಲ್ಲಿರುವ ಅಯೋರ್ಟಿಕ್ ಕಿರಿದಾದ ಕವಾಟ ಸಮಸ್ಯೆಯಿಂದ ಬಳಲುತ್ತಿರುವ ರೋಗಿ ಗಳಿಗೆ (ಅಯೋರ್ಟಿಕ್ ಸ್ಟೆನೋಸಿಸ್) ತೆರೆದ ಹೃದಯ ಶಸ್ತ್ರಚಿಕಿತ್ಸೆ ಮೂಲಕ ಕವಾಟ ಬದಲಾಯಿಸಲಾಗುತ್ತಿತ್ತು. ಆದರೆ ಇದೀಗ ಶಸ್ತ್ರಚಿಕಿತ್ಸೆ ಇಲ್ಲದೆಯೇ ಕವಾಟ ಅಳವಡಿಸುವ ನೂತನ ವಿಧಾನದ ಚಿಕಿತ್ಸಾ ಪದ್ಧತಿ ಜಾರಿಯಲ್ಲಿದೆ. ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಹೃದ್ರೋಗಿಗಳಿಗೆ ತೆರೆದ ಹೃದಯ ಚಿಕಿತ್ಸೆ ಇಲ್ಲದೇ ಆಂಜಿಯೋಗ್ರಾಂ ತಂತ್ರಜ್ಞಾನ ಅಳವಡಿಸಿ ಕಾಲಿನ ರಕ್ತ ನಾಳದ ಮೂಲಕ ಈ ಕೃತಕ ಕವಾಟ ವನ್ನು ಜೋಡಿಸಲಾಗಿದೆ ಎಂದರು.

ಇಂದು ಮೈಸೂರು ಜಯದೇವ ಆಸ್ಪತ್ರೆ ಯಲ್ಲಿ ನಾಲ್ವರು ಹೃದ್ರೋಗಿಗಳಿಗೆ ಶಸ್ತ್ರಚಿಕಿತ್ಸೆ ಇಲ್ಲದೆ ಯಶಸ್ವಿಯಾಗಿ ಕೃತಕ ಕವಾಟ ಅಳವಡಿಸಲಾಗಿದೆ. ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಸಿ. ಶ್ರೀನಿ ವಾಸ್, ಪ್ರಾಧ್ಯಾಪಕರಾದ ಡಾ.ಹೆಚ್.ಕೆ. ಶ್ರೀನಿವಾಸ್ ನೇತೃತ್ವದ ವೈದ್ಯರÀ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ. ಈ ಎಲ್ಲಾ ನಾಲ್ಕು ರೋಗಿಗಳು ಆರೋಗ್ಯ ದಿಂದ ಕೂಡಿದ್ದು, 2 ದಿನದಲ್ಲಿ ಆಸ್ಪತ್ರೆ ಯಿಂದ ಬಿಡುಗಡೆಯಾಗಲಿದ್ದಾರೆ ಎಂದರು.

ಈ ಶಸ್ತ್ರಚಿಕಿತ್ಸಾ ವೆಚ್ಚ 20 ಲಕ್ಷ ರೂ.ಗಳಾಗಲಿದೆ. ಆದರೆ ಶೇ.50 ರಿಯಾ ಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಓರ್ವ ಬಡರೋಗಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ. ಒಂದೇ ದಿನದಲ್ಲಿ ನಾಲ್ಕು ಜನರಿಗೆ ಕವಾಟ ಬದಲಾವಣೆ ಮಾಡಿರು ವುದು ದಾಖಲೆಯಾಗಿದೆ. ಕವಾಟದ ಉತ್ಪಾದಕರಾದ ಮೆರಿಲ್ ಅವರಿಗೆ ಆಸ್ಪತ್ರೆ ಹಾಗೂ ಹೃದ್ರೋಗಿಗಳ ಪರವಾಗಿ ಅಭಿ ನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಇದೇ ವೇಳೆ ಆಸ್ಪತ್ರೆಯಲ್ಲಿ 4ನೇ ಆಪರೇಷನ್ ಥಿಯೇಟರ್‍ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವೈದ್ಯ ಕೀಯ ಅಧೀಕ್ಷಕ ಡಾ.ಸದಾನಂದ, ಡಾ. ಅನುಸೂಯ ಮಂಜುನಾಥ್, ಡಾ. ಹರ್ಷ ಬಸಪ್ಪ, ಡಾ.ಸಂತೋಷ್, ಡಾ. ರಾಜಿತ್, ಡಾ. ಜಯಪ್ರಕಾಶ್, ಡಾ.ವೀಣಾ ನಂಜಪ್ಪ, ಡಾ. ಭಾರತಿ, ಡಾ. ದಿನೇಶ್, ಡಾ. ಶ್ರೀನಿಧಿಹೆಗ್ಗಡೆ, ಡಾ. ರಶ್ಮಿ, ಡಾ. ದೇವರಾಜ್, ಆರ್.ಎಂ.ಓ, ಡಾ. ಪಶುಪತಿ, ನರ್ಸಿಂಗ್ ಅಧೀಕ್ಷಕ ಹರೀಶ್ ಕುಮಾರ್, ಪಿ.ಆರ್.ಓ, ವಾಣಿಮೋಹನ್, ಗುರುಮೂರ್ತಿ, ಯೋಗಲಕ್ಷ್ಮಿ, ಇಂಜಿನಿಯರ್ ಸ್ವರೂಪ್, ವಿಜಯ್, ಅನುಜ ಹಾಜರಿದ್ದರು.

Translate »