ಬೆಂಗಳೂರು,ಜೂ.23 (ಕೆಎಂಶಿ)-ನಾಡಪ್ರಭು ಕೆಂಪೇಗೌಡರ ಗೌರ ವಾರ್ಥ ಈ ವರ್ಷದಿಂದ ಮೂವರು ಸಾಧಕರಿಗೆ ತಲಾ 5 ಲಕ್ಷ ರೂ. ನಗದುಸಹಿತ ಅಂತಾರಾಷ್ಟ್ರೀಯ ಪ್ರಶಸ್ತಿ ಕೊಡಲಾಗುವುದು ಎಂದು ಸಚಿವ ಡಾ.ಅಶ್ವತ್ಥ ನಾರಾ ಯಣ ಹೇಳಿದ್ದಾರೆ. ಕೆಂಪೇಗೌಡರ 513ನೇ ಜಯಂತಿಯಲ್ಲಿ ಮಾತನಾಡಿದ ಅವರು, ‘ಕೆಂಪೇಗೌಡರು ಕಟ್ಟಿಸಿರುವ ಐತಿಹಾಸಿಕ ಕೋಟೆ ಯನ್ನು ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಿ, ಸಂರಕ್ಷಿಸಲಾಗುವುದು’ ಎಂದು ಭರವಸೆ ನೀಡಿದರು. ಕೆಂಪೇಗೌಡರ ವೀರಸಮಾಧಿ ಇರುವ ಕೆಂಪಾಪುರ ಗ್ರಾಮದಲ್ಲಿ ಪರಂಪರೆಯ ಸಂರಕ್ಷಣೆಯನ್ನು ಸರಕಾರ ಮಾಡುತ್ತಿದೆ. ಜತೆಗೆ, ನಾಡಪ್ರಭುವಿಗೆ ಸೇರಿದ ಸಾವನದುರ್ಗ, ಹುಲಿಯೂರುದುರ್ಗ ಮುಂತಾದ ಸ್ಥಳಗಳನ್ನು ಕೂಡ ಆಕರ್ಷಕವಾಗಿ ಅಭಿವೃದ್ಧಿ ಮಾಡಲಾಗುವುದು. ಜತೆಗೆ, ಇದೇ 27 ರಂದು ಕೆಂಪೇಗೌಡರ ಜಯಂತಿಯನ್ನು ವಿಧಾನಸೌಧದಲ್ಲಿ ವಿಜೃಂಭಣೆಯಿಂದ ಆಚರಿಸ ಲಾಗುವುದು. ಕೆಂಪೇಗೌಡರಿಗೆ ಸೂಕ್ತ ಗೌರವ ನೀಡುವ ಉದ್ದೇಶದಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಬೃಹತ್ ಪ್ರತಿಮೆ ಸ್ಥಾಪಿಸಲಾಗುತ್ತಿದೆ ಎಂದರು.

Leave a Reply