13 ಮಂದಿ ಸಾವು ರಾಜ್ಯದಲ್ಲಿ 9217 ಜನರಿಗೆ ಜಾಡ್ಯ
ಮೈಸೂರು,ಸೆ.10-ಮೈಸೂರಿನಲ್ಲಿ ಗುರುವಾರ 635 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 499 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆ 23,773 ಕ್ಕೇರಿದರೆ, ಒಟ್ಟು 16,408 ಮಂದಿ ಗುಣಮುಖರಾಗಿದ್ದಾರೆ. ಇಂದು 13 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಸೋಂಕಿನಿಂದ 549 ಮಂದಿ ಸಾವನ್ನಪ್ಪಿದ್ದಾರೆ. 6,816 ಸಕ್ರಿಯ ಸೋಂಕಿತರ ಪೈಕಿ 318 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 116 ಮಂದಿ ಡೆಡಿಕೇಟೆಡ್ ಹೆಲ್ತ್ ಕೇರ್‍ನಲ್ಲಿ, 817 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ, 285 ಮಂದಿ ಖಾಸಗಿ ಆಸ್ಪತ್ರೆಯಲ್ಲಿ, 264ಮಂದಿ ಖಾಸಗಿ ಕೇರ್ ಸೆಂಟರ್‍ನಲ್ಲಿ, 5,016 ಮಂದಿ ಹೋಂ ಐಸೋಲೇಷನ್‍ನಲ್ಲಿದ್ದಾರೆ. ಇಂದು ಪತ್ತೆಯಾದ ಸೋಂಕಿತರು ವಾಸಿಸುತ್ತಿದ್ದ 141 ಪ್ರದೇಶಗಳನ್ನು ಕಂಟೇನ್ಮೆಂಟ್ ವಲಯ ಎಂದು ಜಿಲ್ಲಾಡಳಿತ ಘೋಷಿಸಿದೆ.
ರಾಜ್ಯದಲ್ಲಿ 9,217 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 4,30,947 ಕ್ಕೇರಿದೆ. ಇಂದು 7,021 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಗುಣಮುಖರಾದವರ ಸಂಖ್ಯೆ 3,22,454ಕ್ಕೇರಿದೆ. 129 ಮಂದಿ ಮೃತಪಟ್ಟಿದ್ದು, 6,337 ಮಂದಿ ಸಾವನ್ನಪ್ಪಿದ್ದಾರೆ. ಉಳಿದ 1,01,537 ಮಂದಿ ಸಕ್ರಿಯ ಸೋಂಕಿತರಿದ್ದಾರೆ. ಬೆಂಗಳೂರಿನಲ್ಲಿ 3,161, ಬಾಗಲಕೋಟೆ 77, ಬಳ್ಳಾರಿ 375, ಬೆಂಗಳೂರು ಗ್ರಾಮಾಂತರ 73, ಬೀದರ್ 98, ಚಾಮರಾಜನಗರ 65, ಚಿಕ್ಕಬಳ್ಳಾಪುರ 167, ಚಿಕ್ಕಮಗಳೂರು 111, ಚಿತ್ರದುರ್ಗ 142, ದಕ್ಷಿಣ ಕನ್ನಡ 350, ಧಾರವಾಡ 264, ದಾವಣಗೆರೆ 297, ಗದಗ 180, ಹಾಸನ 218, ಹಾವೇರಿ 190, ಕಲಬುರಗಿ 243, ಕೊಡಗು 62, ಕೋಲಾರ 101, ಕೊಪ್ಪಳ 139, ಮಂಡ್ಯ 249, ಮೈಸೂರು 635, ರಾಯ ಚೂರು 107, ರಾಮನಗರ 126, ಶಿವಮೊಗ್ಗ 549, ತುಮಕೂರು 365, ಉಡುಪಿ 227, ಉತ್ತರ ಕನ್ನಡ 214, ವಿಜಯಪುರ 63, ಯಾದಗಿರಿಯಲ್ಲಿ 103 ಪ್ರಕರಣ ದಾಖಲಾಗಿದೆ.