ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪುನರ್ವಸತಿ ಕಾರ್ಯಕರ್ತರಿಂದ ಪ್ರತಿಭಟನೆ
ಮೈಸೂರು

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪುನರ್ವಸತಿ ಕಾರ್ಯಕರ್ತರಿಂದ ಪ್ರತಿಭಟನೆ

September 11, 2020

ಮೈಸೂರು, ಸೆ.10(ಎಂಟಿವೈ)- ವಿಕಲಚೇತನರ ಕಲ್ಯಾಣ ಇಲಾಖೆ ಯಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧೋದ್ದೇಶ ಪುನರ್ ವಸತಿ ಕಾರ್ಯಕರ್ತರನ್ನೇ(ಎಂಆರ್‍ಡಬ್ಲ್ಯೂ) ತಾಲೂಕು ನೋಡಲ್ ಅಧಿಕಾರಿ ಯಾಗಿ ನಿಯೋಜಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ವಿಕಲಚೇತನರ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ಸದಸ್ಯರು ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿರುವ ವಿಕಲಚೇತನರು ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಹಾಗೂ ಇಲಾಖೆಗೆ ನೆರವಾಗಲು ಶ್ರಮಿಸುತ್ತಿದ್ದ ವಿವಿಧೋದ್ದೇಶ ಪುನರ್ ವಸತಿ ಕಾರ್ಯಕರ್ತರನ್ನೇ(ಎಂಆರ್‍ಡಬ್ಲ್ಯೂ) ತಾಲೂಕು ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿತ್ತು. ಆದರೆ ಇದೀಗ ತಾಲೂಕು ನೋಡಲ್ ಅಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯನ್ನು ನಿಯೋಜಿಸಲಾಗಿದೆ. ಇದರಿಂದ ವಿಕಲಚೇತನರ ಸಂಕಷ್ಟ ನಿವಾರಣೆಗೆ ತೊಡಕಾಗಲಿದೆ ಎಂದು ಆಕ್ಷೇಪಿಸಿದರು.

ಆ.26ರಂದು ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ವಿಕಲ ಚೇತನರ ಏಳಿಗೆಗಾಗಿ ತಾಲೂಕು ನೋಡಲ್ ಅಧಿಕಾರಿಯಾಗಿ ನಿಯೋಜಿಸಿದ್ದ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ವಿಕಲ ಚೇತನರು, ಅವರ ಕಾರ್ಯ ಮಾಡಲು ವಿಕಲಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯನ್ನು ಪ್ರಾರಂಭಿಸಿದ್ದು, ಅಂಗವಿಕಲರಿಗೆ ಆರ್ಥಿಕ, ಸಾಮಾಜಿಕ, ಶೈP್ಷÀಣಿಕ, ವೈದ್ಯಕೀಯ ಸೇವೆ ನೀಡುವಲ್ಲಿ ಪುನರ್ವಸತಿ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಕಳೆದ 13 ವರ್ಷ ದಿಂದಲೂ ರಾಜ್ಯದ 176 ತಾಲೂಕುಗಳಲ್ಲಿ 6,225 ಗ್ರಾಮ ಪಂಚಾ ಯಿತಿಯಲ್ಲಿ ಎಂಆರ್‍ಡಬ್ಲ್ಯೂ ಮತ್ತು ವಿಆರ್‍ಡಬ್ಲ್ಯೂಗಳಾಗಿ, ನಗರ ಪ್ರದೇಶಗಳಲ್ಲಿ ಯುಆರ್‍ಡಬ್ಲ್ಯೂಗಳಾಗಿ ಕಡಿಮೆ ಗೌರವಧನ ಪಡೆದು ಅಂಗವಿಕಲರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಸೇವೆ ಯನ್ನು ಪರಿಗಣಿಸದೆ ಎಸಿಡಿಪಿಒ ಅವರನ್ನು ತಾಲೂಕು ನೋಡಲ್ ಅಧಿಕಾರಿಗಳ ಹುz್ದÉಗೆ ನೇಮಕ ಮಾಡಿದ್ದು, ಇದು ತಾರತಮ್ಯ ಧೋರಣೆ ಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ವಿಕಲಚೇತನರ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರ ರಾಜ್ಯ ಒಕ್ಕೂಟದ ಜಿಲ್ಲಾಧ್ಯಕ್ಷ  ಮಹ ದೇವಯ್ಯ, ದೇವರಾಜು, ಸ್ವಾಮಿ, ಲಕ್ಷ್ಮಿ, ಹೇಮಂತ್ ಕುಮಾರ್, ದಿನೇಶ್, ರಂಗಸ್ವಾಮಿ ಇನ್ನಿತರರು ಪಾಲ್ಗೊಂಡಿದ್ದರು.

 

 

Translate »