ಬೆಂಗಳೂರು, ಸೆ.10- ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾದ ನಂಟಿದೆ ಎಂದು ಸಿಸಿಬಿ ಪೆÇಲೀಸರ ಅತಿಥಿಯಾಗಿರುವ ನಟಿ ಸಂಜನಾ ಗಲ್ರಾನಿ ಅವರ ಮದುವೆ ಕುರಿತವಾಗಿ ಸ್ಫೋಟಕ ಫೆÇೀಟೋ ವೊಂದು ಹೊರಬಿದ್ದಿದ್ದು, ನನಗೆ ಮದುವೆ ಆಗಿಲ್ಲ ಎಂದು ನಟಿ ಸುಳ್ಳು ಹೇಳಿದರಾ ಎಂಬ ಅನುಮಾನ ಮೂಡಲು ಕಾರಣವಾಗಿದೆ.
ನಟಿ ಸಂಜನಾರನ್ನು ಪೆÇಲೀಸರು ಬಂಧಿಸಿದ ಸಂದರ್ಭದಲ್ಲಿ ಅವರ ಡ್ರಗ್ ನಂಟಿನ ಜೊತೆ ಮದುವೆ ವಿಚಾರವೂ ಕೂಡ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಂಧನವಾಗುವ ಒಂದು ದಿನಕ್ಕೂ ಮೊದಲು ನನಗಿನ್ನು ಮದುವೆಯಾಗಿಲ್ಲ. ನಾನು ಹುಡುಗಿ. ನನ್ನ ಬಗ್ಗೆ ಸುಳ್ಳು ವರದಿ ಮಾಡಬೇಡಿ ಎಂದು ಹೇಳಿ ಮದುವೆ ಸುದ್ದಿಗೆ ಬ್ರೇಕ್ ಹಾಕಿ ನುಣುಚಿಕೊಳ್ಳಲು ಸಂಜನಾ ಪ್ರಯತ್ನಿಸಿದ್ದರು. ಮಾಧ್ಯಮಗಳ ಎದುರು ತನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಬೇಡಿ ಎಂದು ಕಣ್ಣೀರಿಟ್ಟಿದ್ದರು. ಆದರೆ ಒಂದು ವರ್ಷದ ಹಿಂದೆಯೇ ನಟಿ ಸಂಜನಾಗೆ ಮದುವೆ ಆಗಿದೆ ಎಂಬ ಸುದ್ದಿ ಈಗ ಹರಿದಾಡಲು ಆರಂಭವಾಗಿದೆ.
ನಟಿ ಸಂಜನಾ ಒಂದು ವರ್ಷದ ಹಿಂದೆಯೇ ಮುಸ್ಲಿಂ ಸಂಪ್ರ ದಾಯದಲ್ಲಿ ವೈದ್ಯ ಅಜೀಜ್ ಪಾಷ ಅವರೊಂದಿಗೆ ಮದುವೆ ಯಾಗಿದ್ದಾರೆ ಎನ್ನಲಾಗಿದೆ. ಅಜೀಜ್ ಪಾಷ ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು, ಆಗಾಗ ಇಂದಿರಾನಗರದಲ್ಲಿರುವ ಸಂಜನಾ ಮನೆಗೆ ಬರುತ್ತಿದ್ದರು. ಮದುವೆಯ ಬಳಿಕ ಒಂದು ವರ್ಷ ದಿಂದ ಗಂಡನ ಜೊತೆಗೆ ಸಂಜನಾ ಇದ್ದರು. ಅಲ್ಲದೇ ಸಂಜನಾ ಮಾಡುತ್ತಿದ್ದ ಪಾರ್ಟಿಗಳಲ್ಲಿ ಅಜೀಜ್ ಪಾಷ ಭಾಗಿಯಾಗುತ್ತಿದ್ದರು ಎನ್ನಲಾಗುತ್ತಿದೆ. ಸಂಜನಾ ಡ್ರಗ್ ಮಾಫಿಯಾ ನಂಟಿನ ಬಗ್ಗೆ ಅಜೀಜ್ ಪಾಷಗೂ ಮಾಹಿತಿ ಇತ್ತಾ ಎಂಬ ಅನುಮಾನ ಜೋರಾಗಿದೆ.
ಇದಕ್ಕೆ ಪೂರಕ ಎಂಬಂತೆ ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಸೆ.8 ರಂದು ಬೆಳ್ಳಂಬೆಳಗ್ಗೆ ನಟಿ ಸಂಜನಾ ಮನೆಯ ಮೇಲೆ ದಾಳಿದ್ದರು. ಈ ವೇಳೆ ಸಂಜನಾ ನ್ಯೂರೋ ಸರ್ಜನ್ ಕರೆಯಲು ಗಲಾಟೆ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಅದೇ ಅಪಾರ್ಟ್‍ಮೆಂಟ್‍ನಲ್ಲಿ ಡಾಕ್ಟರ್ ವಾಸಿಸುತ್ತಿದ್ದು, ಆತನ ಜೊತೆ ಸಂಜನಾ ಸ್ನೇಹ ಇಟ್ಟುಕೊಂಡಿ ದ್ದಾರೆ ಎಂದು ತಿಳಿದಿತ್ತು. ಅಲ್ಲದೇ ಅವರಿಬ್ಬರು ಅಮೆರಿಕಾಗೆ ಹೋಗಿ ಮದುವೆ ಆಗಿದ್ದಾರೆ ಎಂದು ಗುಮಾನಿ ಸಹ ಕೇಳಿ ಬಂದಿತ್ತು. ಆದರೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಸಂದರ್ಭದಲ್ಲಿ ರಾಹುಲ್ ತಂದೆ ರಾಮಚಂದ್ರ ಅವರು ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡುವ ವೇಳೆ ಸಂಜನಾ ಪತಿ ಚಿಕಿತ್ಸೆ ನೀಡಿದ್ದರು ಎಂದು ಹೇಳಿಕೆ ನೀಡಿದ್ದರು.
ನನ್ನ ಮಗನಿಗೆ ಸಂಜನಾ ಒಬ್ಬರೇ ಪರಿಚಯ ಇರುವುದು. ರಾಹುಲ್ ಎಂಜಿನಿಯರ್ ಮಾಡಿ ಆರ್ಕಿಟೆಕ್ಚರ್ ಕೆಲಸ ಮಾಡು ತ್ತಿದ್ದಾನೆ. ಒಮ್ಮೆ ಸಂಜನಾ ಮನೆಗೆ ಹೋಗಿ ಇಂಟಿರಿಯರ್ ಡಿಸೈನರ್ ಕೆಲಸ ಮಾಡಿಕೊಟ್ಟಿದ್ದನು. ಅಂದಿನಿಂದ ಇಬ್ಬರಿಗೂ ಪರಿಚಯವಾಗಿದೆ. ಅವರ ಮನೆಗೆ ಇವನು, ನಮ್ಮ ಮನೆಗೆ ಸಂಜನಾ ಬಂದು ಹೋಗುತ್ತಿದ್ದರು ಎಂದು ಹೇಳಿದ್ದರು. ಆ ವೇಳೆಯೇ ನಟಿ ಸಂಜನಾ ಗಲ್ರಾನಿ ಅವರ ಮದುವೆ ವಿಚಾರದ ಚರ್ಚೆ ಆರಂಭವಾಗಲು ಕಾರಣವಾಗಿತ್ತು.