ನಾಳೆಯಿಂದ ನ.20ರವರೆಗೆ 67ನೇ ಅಖಿಲ ಭಾರತ ಸಹಕಾರ ಸಪ್ತಾಹ
ಮೈಸೂರು

ನಾಳೆಯಿಂದ ನ.20ರವರೆಗೆ 67ನೇ ಅಖಿಲ ಭಾರತ ಸಹಕಾರ ಸಪ್ತಾಹ

November 13, 2020

ಮೈಸೂರು,ನ.12(ಎಂಟಿವೈ)- `ಕೊರೊನಾ ಸೋಂಕು-ಆತ್ಮನಿರ್ಭರ ಭಾರತ -ಸಹಕಾರ ಸಂಸ್ಥೆಗಳು’ ಎಂಬ ಧ್ಯೇಯ ದೊಂದಿಗೆ ನ.14ರಿಂದ 20ರವರೆಗೆ 67ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಮುಡಾ ಅಧ್ಯಕ್ಷರೂ ಆದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರದ ಸಭಾಂಗಣದಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ವತಿಯಿಂದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ವನ್ನು ಆಯೋಜಿಸಲಾಗಿದೆ. ಪ್ರತಿವರ್ಷ ನ.14ರಿಂದ 20ರವರೆಗೆ ರಾಷ್ಟ್ರಾದ್ಯಂತ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ನಡೆಸ ಲಾಗುತ್ತಿದೆ.  ಪಂಡಿತ್ ಜವಾಹರಲಾಲ್ ನೆಹರು ಅವರು ಸಹಕಾರ ಕ್ಷೇತ್ರಕ್ಕೆ ನೀಡಿದ ಪ್ರೋತ್ಸಾಹ, ಬೆಂಬಲಕ್ಕಾಗಿ ಅವರ ಹುಟ್ಟು ಹಬ್ಬದ ದಿನದಂದು ಸಹಕಾರ ಸಪ್ತಾಹ ಆರಂಭಿಸಿ ಗೌರವಿಸಲಾಗುತ್ತಿದೆ. ಈ ಸಪ್ತಾಹ ದಲ್ಲಿ ಸಹಕಾರ ಚಳವಳಿಯ ಸಾಧನೆ, ವೈಫಲ್ಯಗಳನ್ನು ಗುರುತಿಸಿ ವಿಮರ್ಶೆ ಮಾಡ ಲಾಗುತ್ತದೆ. ಅಲ್ಲದೆ ಸಹಕಾರ ಕ್ಷೇತ್ರವನ್ನು ಭವಿಷ್ಯದಲ್ಲಿ ಯಶಸ್ವಿಯಾಗಿ ಮುನ್ನಡೆಸಲು ಅಗತ್ಯವಾಗಿರುವ ಕಾರ್ಯಕ್ರಮ ಜಾರಿಗೆ ತರಲು ರೂಪುರೇಷೆÉ ಸಿದ್ಧಪಡಿಸಲಾಗುತ್ತದೆ. ಪ್ರಸಕ್ತ ಸಾಲಿನ ಸಪ್ತಾಹವನ್ನು ಕೊರೊನಾ ವೈರಸ್ ಹಾವಳಿಯಿಂದಾಗಿ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಅದರಲ್ಲೂ `ಕೊರೊನಾ ಸೋಂಕು-ಆತ್ಮ ನಿರ್ಭರ ಭಾರತ- ಸಹಕಾರ ಸಂಸ್ಥೆಗಳು’ ಎಂಬ ಧ್ಯೇಯವನ್ನಿಟ್ಟುಕೊಂಡು  ಆಚರಿ ಸುವ ಮೂಲಕ ಜಿಲ್ಲೆಯಲ್ಲಿ ಸಹಕಾರ ಸಪ್ತಾಹ ದಲ್ಲೂ ಕೊರೊನಾ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಸಪ್ತಾಹದಲ್ಲಿ: ನ.14ರಂದು ಬೆಳಗ್ಗೆ 10ಕ್ಕೆ ಮೈಸೂರಿನ ಸಹಕಾರ ಭವನದ ಆವರಣ ದಲ್ಲಿ ಕೊರೊನೊತ್ತರ ಸಹಕಾರ ಸಂಸ್ಥೆ ಗಳ ಜವಾಬ್ದಾರಿ ಮತ್ತು ಪಾತ್ರ, 15ರಂದು ಮೈಸೂರು ತಾಲೂಕಿನ ಸಹಕಾರ ಸಂಕೀರ್ಣ ಸಭಾಂಗಣದಲ್ಲಿ ಸಹಕಾರಿ ಮಾರಾಟ, ಗ್ರಾಹಕ, ರೂಪಾಂತರ ಮತ್ತು ಮೌಲ್ಯ ವರ್ಧನೆ, 16ರಂದು ಹೆಚ್.ಡಿ.ಕೋಟೆ ಮೈಮುಲ್ ಉಪ ಕಚೇರಿಯಲ್ಲಿ ಅಂತ ರ್ಜಾಲ ಸಂಪರ್ಕದ ಮೂಲಕ ಸಹಕಾರ ಶಿಕ್ಷಣ ತರಬೇತಿಯ ಪುನರ್‍ಮನನ,  17ರಂದು ನಂಜನಗೂಡು ತಾಲೂಕಿನ ನಗರ್ಲೆ ಪಿಎಸಿಸಿಸ್‍ನಲ್ಲಿ ಸಹಕಾರ ಸಂಸ್ಥೆ ಗಳ ನಡುವೆ ಸಹಕಾರವನ್ನು ಬಲಪಡಿ ಸುವುದು, 18ರಂದು ನರಸೀಪುರ ತಾಲೂಕಿ ಚಾಮನಹಳ್ಳಿ ಪಿಎಸಿಸಿಎಸ್‍ನಲ್ಲಿ ವ್ಯವ ಹಾರ, ಉದ್ಯೋಗ ಕಳೆದುಕೊಂಡವರು, ಬಾಧಿತರು ಪುನರುದ್ಯೋಗಸ್ಥರಾಗಲು ಕೌಶಲ್ಯಾಭಿವೃದ್ಧಿ, 19ರಂದು ಹುಣಸೂರು ತಾಲೂಕಿನ ಅಂಕನಹಳ್ಳಿ ಪಿಎಸಿಸಿಎಸ್ ನಲ್ಲಿ ಯುವಜನ, ಮಹಿಳಾ ಮತ್ತು ಅಬಲ ವರ್ಗದವರಿಗೆ ಸಹಕಾರ ಸಂಸ್ಥೆಗಳು, 20ರಂದು ಪಿರಿಯಾಪಟ್ಟಣ ತಾಲೂಕಿನ ಹಿಟ್ನೆಬಾಗಿಲು ಪಿಎಸಿಸಿಎಸ್‍ನಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಆರ್ಥಿಕ ಸೇರ್ಪಡೆ, ಡಿಜಿಟಲೈಜೇಷನ್ ಮತ್ತು ಸಾಮಾಜಿಕ ಜಾಲತಾಣ ಕುರಿತ ವಿಷಯದಲ್ಲಿ ಚರ್ಚೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಬಿ. ಎನ್.ಸದಾನಂದ ಉಪಸ್ಥಿತರಿದ್ದರು.

 

 

 

 

Translate »