ಜಮ್ಮು ಬಸ್ ನಿಲ್ದಾಣದಲ್ಲಿ 7 ಕೆಜಿ ಐಇಡಿ ಸ್ಫೋಟಕ ಪತ್ತೆ
ಮೈಸೂರು

ಜಮ್ಮು ಬಸ್ ನಿಲ್ದಾಣದಲ್ಲಿ 7 ಕೆಜಿ ಐಇಡಿ ಸ್ಫೋಟಕ ಪತ್ತೆ

February 15, 2021

ಜಮ್ಮು, ಫೆ.14- ಇತ್ತೀಚೆಗಷ್ಟೇ ಲೋಕಾರ್ಪಣೆ ಯಾದ ಜಮ್ಮು ಬಸ್ ನಿಲ್ದಾಣದಲ್ಲಿ ಭಾನು ವಾರ ಬರೋಬ್ಬರಿ ಏಳು ಕೆಜಿ ತೂಕದ ಐಇಡಿ ಸ್ಫೋಟಕ ಪತ್ತೆಯಾಗಿದೆ. ಜಮ್ಮು ನಗರದ ಅತ್ಯಂತ ಜನಸಂದಣಿ ಇರುವ ಬಸ್ ನಿಲ್ದಾಣ ಪ್ರದೇಶ ದಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆಯಾ ಗಿದ್ದು, ಈ ಮೂಲಕ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಜಮ್ಮು ಐಜಿ ಮುಖೇಶ್ ಸಿಂಗ್ ಅವರು, `ಪುಲ್ವಾಮಾ ದಾಳಿಯ ವಾರ್ಷಿ ಕೋತ್ಸವದಂದು ಅಂತಾರಾಷ್ಟ್ರೀಯ ಭಯೋ ತ್ಪಾದಕ ಗುಂಪುಗಳು ದಾಳಿ ನಡೆಸಲು ಯೋಜನೆ ರೂಪಿಸುತ್ತಿವೆ. ಈ ಬಗ್ಗೆ ನಮಗೆ ಮೊದಲೇ ಗುಪ್ತಚರ ಇಲಾಖೆಗಳು ಎಚ್ಚರಿಕೆ ನೀಡಿದ್ದವು. ಹೀಗಾಗಿ ಮುಂಜಾ ಗ್ರತಾ ಕ್ರಮಗಳನ್ನು ವಹಿಸಿದ್ದೆವು. ಇದೇ ನಿಟ್ಟಿನಲ್ಲಿ ಕಳೆದ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ನಾವು ಸೊಹೈಲ್ ಎಂಬ ವ್ಯಕ್ತಿಯನ್ನು ಬಂಧಿಸಿ, ಸುಮಾರು 6ರಿಂದ 6.5 ಕೆಜಿ ಐಇಡಿ ವಶಪಡಿಸಿಕೊಂಡಿದ್ದೇವೆ. ಅಲ್ಲದೆ ಸಾಂಬಾದಿಂದ 15 ಸಣ್ಣ ಐಇಡಿ ಸ್ಪೋಟಕಗಳು ಮತ್ತು 6 ಪಿಸ್ತೂಲ್‍ಗಳನ್ನು ಸಹ ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಅಂತೆಯೇ ಚಂಡೀಗಢ ದ ಖಾಜಿ ವಸೀಮ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಈತನೊಂದಿಗೆ ಅಬಿದ್ ನಬಿ ಎಂಬ ವ್ಯಕ್ತಿಯನ್ನೂ ಬಂಧಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ದಾಳಿ ಸಂಚು ವಿಫಲ: 2019ರ ಪುಲ್ವಾಮಾ ದಾಳಿಯ ಎರಡನೇ ವರ್ಷಾಚರಣೆಯ ಪ್ರಯುಕ್ತ ಮತ್ತೊಂದು ಸ್ಫೋಟ ನಡೆಸುವ ಉಗ್ರರ ಯೋಜನೆಯು ವಿಫಲಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮುವಿನ ಕುಂಜ್ವಾನಿ ಮತ್ತು ಸಾಂಬಾ ಜಿಲ್ಲೆಯ ಬಡೀ ಬ್ರಾಹ್ಮಣ ಪ್ರದೇಶದಿಂದ ಇಬ್ಬರು ಪ್ರಮುಖ ಉಗ್ರರನ್ನು ಬಂಧಿಸಿರುವ ಬೆನ್ನಲ್ಲೇ ಐಇಡಿ ಪತ್ತೆ ಮಾಡಲಾಗಿದೆ. ನಿರ್ಧಿಷ್ಟ ಮಾಹಿತಿಯನ್ನು ಆಧರಿಸಿ ನಡೆಸಿದ ಕಾರ್ಯಾ ಚರಣೆಯಲ್ಲಿ ಸ್ಫೋಟಕ ಸಾಧನ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Translate »