10ರಲ್ಲಿ 7 ಕಡೆ ಕಾಂಗ್ರೆಸ್‍ಗೆ ಗೆಲುವು; ರಾಜ್ಯದ  ಜನರ ಸಂದೇಶ ಸ್ಪಷ್ಟವಾಗಿದೆ; ಡಿ.ಕೆ.ಶಿವಕುಮಾರ್
News

10ರಲ್ಲಿ 7 ಕಡೆ ಕಾಂಗ್ರೆಸ್‍ಗೆ ಗೆಲುವು; ರಾಜ್ಯದ ಜನರ ಸಂದೇಶ ಸ್ಪಷ್ಟವಾಗಿದೆ; ಡಿ.ಕೆ.ಶಿವಕುಮಾರ್

May 1, 2021

ಬೆಂಗಳೂರು, ಏ. 30- ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜನರು ನಮ್ಮ ಕೈ ಹಿಡಿದಿದ್ದಾರೆ. ನಮ್ಮ ಗೆಲುವಿಗೆ ಸಹಕಾರಿಯಾದ ರಾಜ್ಯದ ಜನತೆಗೆ ನಾನು ಅಭಿನಂದನೆ ತಿಳಿಸುತ್ತೇನೆ. ರಾಜ್ಯದಲ್ಲಿ 7 ಕಡೆ ನಾವು ಗೆಲುವು ಸಾಧಿಸಿದೆ. ಈ ಚುನಾವಣೆಯಿಂದ ಸರ್ಕಾ ರದ ಬಗ್ಗೆ ಜನರಿಗೆ ಇರುವ ಅಭಿಪ್ರಾಯ ಗೊತ್ತಾಗುತ್ತಿದೆ. ಇದು ಪಕ್ಷದ ಚಿಹ್ನೆ ಮೇಲೆ ನಡೆದಿರುವ ಚುನಾವಣೆ. ಕಾಂಗ್ರೆಸ್ ಗೆಲ್ಲಿಸುವ ಮೂಲಕ ರಾಜ್ಯದ ಜನತೆ ವಿಶ್ವಾಸ ಇಡಲು ಪ್ರಾರಂಭ ಮಾಡಿದ್ದಾರೆ. ಹಿಂದೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಈಗ ಮತ್ತೊಮ್ಮೆ ಕಾಂಗ್ರೆಸ್ ಪರ ಒಲವು ತೋರುವ ಮೂಲಕ ರಾಜ್ಯದ ಜನರು ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, 10 ಸ್ಥಳೀಯ ಸಂಸ್ಥೆಗಳಲ್ಲಿ 7 ಕಡೆ ಗೆಲುವು ಸಾಧಿಸಿದ್ದೇವೆ. ಬಳ್ಳಾರಿ ಮಹಾನಗರ ಪಾಲಿಕೆ ಕಾಂಗ್ರೆಸ್ ಪಾಲಿಗೆ ಬಂದಿದೆ. ಮಡಿಕೇರಿ ನಾವು ಸೋತಿದ್ದೇವೆ. ತೀರ್ಥಹಳ್ಳಿಯಲ್ಲಿ 25 ವರ್ಷದ ಬಳಿಕ ಅಧಿಕಾರ ಸಿಕ್ಕಿದೆ. ರಾಮನಗರದ ಫಲಿತಾಂಶ ಕಾಂಗ್ರೆಸ್ ಪಾಲಾಗಿದೆ. ಈ ಮೂಲಕ ರಾಜ್ಯದ ಜನರು ಕಾಂಗ್ರೆಸ್ ಸರ್ಕಾರವನ್ನು ಬಯಸುತ್ತಿದ್ದಾರೆ ಎಂಬುದು ಸ್ಪಷ್ಟ ವಾಗಿದೆ ಎಂದರು.
ಇದೇ ವೇಳೆ ಸೋಂಕಿನ ವಿರುದ್ಧ ಹೋರಾಟದಲ್ಲಿರುವ ಜನರ ಸಹಾ ಯಕ್ಕೆ ಕಾಂಗ್ರೆಸ್ ಮುಂದಾಗಿದೆ. ಈ ಕುರಿತು ಸಭೆ ನಡೆಸಿದ್ದೇವೆ. ಜನರಿಗೆ ಹೇಗೆ ಸಹಾಯ ಮಾಡಬಹುದು ಎಂದು ನಾವು ಪ್ರಸ್ತಾಪ ಮಾಡಿದ್ದೇವೆ. ಸುಮಾರು 3500ಕ್ಕೂ ಹೆಚ್ಚು ಜನ ನಮ್ಮನ್ನ ಈಗಾಗಲೇ ಸಂಪರ್ಕ ಮಾಡಿದ್ದಾರೆ. ಫ್ರೀ ಮೆಡಿಸಿನ್ ಸಂಬಂಧಿಸಿದಂತೆ ನಮ್ಮಿಂದ ಆಗುವ ಸಹಾಯ ಮಾಡುತ್ತಿದ್ದೇವೆ. ಕಾರ್ಯಕರ್ತರು ಜೀವ, ಜೀವನವನ್ನು ಮುಡುಪಾಗಿಟ್ಟು ಕೆಲಸ ಮಾಡುತ್ತಿ ದ್ದಾರೆ. 10 ಆಂಬುಲೆನ್ಸ್ ರೆಡಿ ಮಾಡಿದ್ದೇವೆ ಎಂದರು.

ಕೊರೊನಾ ಲಸಿಕೆಗಾಗಿ ಆನ್‍ಲೈನ್ ರಿಜಿಸ್ಟರ್ ಮಾಡಿ ಕೊಳ್ಳಿ ಎಂದು ಹೇಳಿದ್ದಾರೆ. ಆದರೆ, ಬಡಜನರ ಬಗ್ಗೆ ಯಾಕೆ ಯೋಚನೆ ಮಾಡುತ್ತಿಲ್ಲ. ಅವರು ಆನ್‍ಲೈನ್‍ನಲ್ಲಿ ಹೇಗೆ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತೆ. ಸರ್ಕಾರ ಯಾಕೆ ಒಂದು ವರ್ಗದ ಜನರ ಬಗ್ಗೆ ಯೋಚನೆ ಮಾಡುತ್ತಿದೆ. ನಿಜವಾಗಿಯು ಕೇಂದ್ರ ಸರ್ಕಾರಕ್ಕೆ ಬಡ ಜನರ ಕಾಳಜಿ ಇದ್ಯಾ ಎಂದು ಪ್ರಶ್ನಿಸಿದರು. ಇದೇ ವೇಳೆ ಆನ್‍ಲೈನ್ ಬಿಟ್ಟು ಎಲ್ಲರಿಗೂ ಲಸಿಕೆ ಕೊಡಿ ಎಂದು ಒತ್ತಾಯಿಸಿದರು. ಇನ್ನು ರಾಜ್ಯದಲ್ಲಿ ಲಸಿಕೆಯೇ ಸಿದ್ಧವಿಲ್ಲ. ಆದರೂ ಸರ್ಕಾರ ನರಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ಸೋಂಕಿತರಿಗೆ ಸರ್ಕಾರದ ಕಡೆಯಿಂದ ಕೊಟ್ಟಿರುವ ಹೆಲ್ಪ್‍ಲೈನ್‍ನಲ್ಲಿ ಕರೆ ಸ್ವೀಕರಿಸುತ್ತಿಲ್ಲ ಎಂದು ನಮಗೆ ಕರೆ ಮಾಡುವವರು ಹೇಳ್ತಿದ್ದಾರೆ. ನಮಗೆ ನೂರಕ್ಕಿಂತಲೂ ಹೆಚ್ಚು ಜನ ಕರೆ ಮಾಡಿದ್ದಾರೆ. ಅವರಿಗೆ ಮಾರ್ಗದರ್ಶನ ನೀಡಿದ್ದೇವೆ. ಜಿಲ್ಲೆಗಳಲ್ಲೂ ಕಾಂಗ್ರೆಸ್‍ನಿಂದ ಸೇವೆ ಮುಂದುವರೆಸುವಂತೆ ಹೇಳಿದ್ದೇನೆ ಎಂದರು.

ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪಿರುವ ಕುಟುಂಬದ ಬಳಿ ಕಾಂಗ್ರೆಸ್ ಕಾರ್ಯಕರ್ತರು ತೆರೆಳಿ ಧೈರ್ಯ ಹೇಳಬೇಕು. ಈ ಕುರಿತು ನಾನು ನಮ್ಮ ಕಾರ್ಯಕರ್ತರಿಗೆ ಒತ್ತಾಯ ಮಾಡುತ್ತೇನೆ. ಅವರ ಮನೆಗಳಿಗೆ ಹೋಗಿ ಅವರ ಮನೆಯ ಪರಿಸ್ಥಿತಿ ನೋಡಿ, ವಿಡಿಯೋ ಮಾಡಿ ಕಕಳುಹಿಸಿ. ಅದನ್ನ ಸರ್ಕಾರಕ್ಕೆ ತಲುಪಿಸೋಣ ಎಂದಿದ್ದೇವೆ. ಈ ಮೂಲಕ ಸರ್ಕಾರ ಮಾಡುವ ಕೆಲಸ ನಾವು ಮಾಡುತ್ತೇವೆ ಎಂದರು.

Translate »