ಆಸ್ಪತ್ರೆಗಳಲ್ಲಿ ಪ್ರತಿದಿನ ಲಭ್ಯವಿರುವ ಬೆಡ್,  ವೆಂಟಿಲೇಟರ್‍ಗಳ ಮಾಹಿತಿ ನೀಡಲು ಒತ್ತಾಯ
ಮೈಸೂರು

ಆಸ್ಪತ್ರೆಗಳಲ್ಲಿ ಪ್ರತಿದಿನ ಲಭ್ಯವಿರುವ ಬೆಡ್, ವೆಂಟಿಲೇಟರ್‍ಗಳ ಮಾಹಿತಿ ನೀಡಲು ಒತ್ತಾಯ

May 1, 2021

ಮೈಸೂರು,ಏ.30(ಆರ್‍ಕೆಬಿ)-ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ಸಮರ್ಪಕವಾಗಿ ಬೆಡ್, ವೆಂಟಿಲೇಟರ್‍ಗಳು ಸಿಗದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಡ್‍ಗಾಗಿ ಆಸ್ಪತ್ರೆ ಯಿಂದ ಆಸ್ಪತ್ರೆಗೆ ಅಲೆ ದಾಡುತ್ತಿ ದ್ದಾರೆ. ಹೀಗಿದ್ದು ಸರ್ಕಾರ ಆಸ್ಪತ್ರೆಗಳಲ್ಲಿ ಸಮರ್ಪಕ ಬೆಡ್, ವೆಂಟಿ ಲೇಟರ್ ವ್ಯವಸ್ಥೆ ಇದೆ ಎಂದು ಸಮರ್ಥಿಸಿ ಕೊಳ್ಳುವ ಮೂಲಕ ಬರೀ ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ಸೇನಾ ಪಡೆ, ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಶುಕ್ರವಾರ ವಿವೇಕಾ ನಂದನಗರದ ತಮ್ಮ ಕಚೇರಿ ಮುಂದೆ ಸಾಂಕೇತಿಕವಾಗಿ ಘೋಷಣಾ ಫಲಕ ಪ್ರದರ್ಶಿಸಿದರು.

ರಾಜ್ಯದ ಇಂದಿನ ಈ ವೈಫಲ್ಯಕ್ಕೆ ರಾಜ್ಯ ಸರ್ಕಾರ, ಶಾಸಕರು, ಜನಪ್ರತಿನಿಧಿಗಳೇ ನೇರ ಹೊಣೆ ಎಂದು ಆರೋಪಿಸಿದ ಅವರು, ಕೊರೊನಾದಿಂದ ನರಳುತ್ತಿರುವ ಜನರನ್ನು ಕಾಪಾಡುವಂತೆ ಒತ್ತಾ ಯಿಸಿದರು. ಪ್ರತಿದಿನ ಜಿಲ್ಲೆ ಮತ್ತು ತಾಲೂಕುವಾರು ಇಂತಿಷ್ಟು ಜನರಿಗೆ ಕೊರೊನಾ ಸೋಂಕಿನ ಮಾಹಿತಿ ನೀಡುತ್ತಿರುವ ಜಿಲ್ಲಾ ಡಳಿತ ಮೈಸೂರು ನಗರದಲ್ಲಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಬೆಡ್ ಹಾಗೂ ವೆಂಟಿಲೇಟರ್‍ಗಳ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.

ಜಿಲ್ಲಾಡಳಿತ ಕೂಡಲೇ ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್, ವೆಂಟಿಲೇಟರ್‍ಗಳು ಖಾಲಿ ಇವೆ ಎಂಬ ಕ್ಷಣ ಕ್ಷಣದ ಮಾಹಿತಿಯನ್ನು ಪ್ರಕಟಿಸುವಂತಾದರೆ ಜನರು ಆಸ್ಪತ್ರೆ ಯಿಂದ ಆಸ್ಪತ್ರೆಗೆ ಅಲೆಯುವುದು ತಪ್ಪುತ್ತದೆ. ಈ ಮೂಲಕ ಕೊರೊನಾ ಶೀಘ್ರ ನಿಯಂತ್ರಣಕ್ಕೂ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

Translate »