ಮೈಸೂರು, ಏ.30(ಆರ್‍ಕೆಬಿ)- ದೇಶದಲ್ಲಿ ಕಾಡುತ್ತಿ ರುವ ಕೋವಿಡ್-19 ನಿರ್ನಾಮಕ್ಕೆ ಸರ್ಕಾರದೊಂ ದಿಗೆ ಸಹಕಾರ ನೀಡುವುದನ್ನು ಬಿಟ್ಟು ಕಾಂಗ್ರೆಸ್ ಕೊರೊನಾ ವಿಚಾರವನ್ನು ಅಸ್ತ್ರ ಮಾಡಿಕೊಂಡು ದೇಶದ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜೆ.ಮಹೇಶ್ ಇಂದಿಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ಬಿಜೆಪಿ ಕಚೇರಿ ಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಜಗತ್ತು ಕೋವ್ಯಾಕ್ಸಿನ್ ಒಪ್ಪುವುದಾದರೆ ಅದನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ಜನರಲ್ಲಿರುವ ಆತಂಕವನ್ನು ದೂರ ಮಾಡಬೇಕಾದ ಜವಾಬ್ದಾರಿಯುತವಾದ ಪಕ್ಷ ಬೇಜ ವಾಬ್ದಾರಿಯಿಂದ ವರ್ತಿಸುತ್ತಿದೆ. ಜನರನ್ನು ಸರ್ಕಾ ರದ ವಿರುದ್ಧ ಎತ್ತಿ ಕಟ್ಟಿ, ದಂಗೆ ಏಳುವಂತೆ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅನಗತ್ಯ ವಾಗಿ ಟೀಕೆ, ಆರೋಪಗಳನ್ನು ಮಾಡುತ್ತಲೇ ಬಂದಿದೆ. ಸಿಎಎ ವಿರುದ್ಧ ಹೋರಾಟ, ರೈತರ ಕಾಯ್ದೆ ತಿದ್ದು ಪಡಿ ವಿರುದ್ಧ ಹೋರಾಟ, ಹೀಗೆ ದೇಶದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅಶಾಂತಿ ನಿರ್ಮಿಸುವ ಕೆಲಸ ವನ್ನು ಕಾಂಗ್ರೆಸ್ ಸತತವಾಗಿ ಮಾಡಿಕೊಂಡೇ ಬರುತ್ತಿದೆ. ಕೋವಿಡ್ ವಿಚಾರದಲ್ಲಿ ರಾಜಕೀಯ ಮಾಡುವು ದನ್ನು ಬಿಡಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ದೇಶದ ಉದ್ದಗಲಕ್ಕೂ ಕೋವಿಡ್ ಸಹಾಯ ವಾಣಿ ಕೇಂದ್ರಗಳನ್ನು ತೆರೆದು ಕೋವಿಡ್ ಪೀಡಿತರಿಗೆ ಬೆಡ್, ವೆಂಟಿಲೇಟರ್, ಆಕ್ಸಿಜನ್ ಇನ್ನಿತರೆ ಕುರಿತಂತೆ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ. ಸೇವೆಯೇ ಪರಮಧರ್ಮ ಎಂದು ತಿಳಿದು ಸೇವೆ ಸಲ್ಲಿಸು ತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಇನ್ನಾದರೂ ಬೇಜ ವಾಬ್ದಾರಿ ಹೇಳಿಕೆಗಳ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಕೈಬಿಡಬೇಕು. ಕೊರೊನಾ ನಿರ್ಮೂಲನೆ ಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲಹೆ, ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
ಆಡಳಿತ ಪಕ್ಷದ ವಿರುದ್ಧವೇ ಟೀಕೆ ಮಾಡುತ್ತಿರುವ ಎಂಎಲ್‍ಸಿ ಹೆಚ್.ವಿಶ್ವನಾಥ್ ಹೇಳಿಕೆಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಅವರಿಂದ ನಾವುÀ ಇನ್ನಷ್ಟು ಪಕ್ವತೆ, ಪ್ರಬುದ್ಧತೆ ನಿರೀಕ್ಷೆ ಮಾಡುತ್ತಿದ್ದೇವೆ. ಬಿಜೆಪಿಯ ಅಪೇಕ್ಷೆಗೆ ತಕ್ಕಂತೆ ಅವರ ಹೇಳಿಕೆಗಳು ಇರಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಮಾತನಾಡಿ, ಕೋವಿಡ್ ಪಾಸಿಟಿವ್ ದೃಢಪಡುವ ಮೊದಲೇ ಐಸಿಯು, ಆಕ್ಸಿಜನ್ ಬೇಕೆಂಬ ಕರೆಗಳು ಹೆಚ್ಚುತ್ತಿರುವ ಬಗ್ಗೆ ಪ್ರಸ್ತಾಪಿಸಿ, ಐಸಿಯು, ಆಕ್ಸಿಜನ್ ಯಾರಿಗೆ ಬೇಕು ಎಂಬುದನ್ನು ನಿರ್ಧರಿಸುವವರು ವೈದ್ಯರು ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ಮೈಸೂರಿನ ಜನತೆ ಆತಂಕಪಡುವ ಅಗತ್ಯವಿಲ್ಲ. ರೆಮ್ಡಿಸಿವಿರ್ ಕೊಡಿಸುವಂತಹ ಕೆಲಸವನ್ನು ನಮ್ಮ ಸಹಾಯವಾಣಿ ಕೇಂದ್ರ ಮಾಡಿದೆ. ಅಗತ್ಯ ಸಲಹೆ, ಮಾಹಿತಿಗಳಿಗೆ ಬಿಜೆಪಿ ಸಹಾಯವಾಣಿ ಸಂಪರ್ಕಿ ಸುವಂತೆ ಜನರಿಗೆ ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರರಾದ ಎನ್. ರಾಜ್‍ಕುಮಾರ್, ವಸಂತಕುಮಾರ್, ಎಂ.ಎನ್. ಮೋಹನ್, ಸಿ.ಕೆ.ಗಿರೀಶ್ ಉಪಸ್ಥಿತರಿದ್ದರು.