ಕೊರೊನಾ ಕಫ್ರ್ಯೂ: ಮೈಸೂರಲ್ಲಿ ಜನಜೀವನ ಅತಂತ್ರ
ಮೈಸೂರು

ಕೊರೊನಾ ಕಫ್ರ್ಯೂ: ಮೈಸೂರಲ್ಲಿ ಜನಜೀವನ ಅತಂತ್ರ

May 1, 2021

ಮೈಸೂರು, ಏ.30(ಆರ್‍ಕೆ)-ಒಂದೆಡೆ ಕಫ್ರ್ಯೂ, ಮತ್ತೊಂದೆಡೆ ಮಹಾಮಾರಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಳದಿಂದ ಕಂಗೆಟ್ಟ ನಾಗರಿಕರು ಆತಂಕದಲ್ಲಿ ದಿನ ದೂಡುವಂತಾಗಿದೆ.

ಕೊರೊನಾ ಕಫ್ರ್ಯೂ ಜಾರಿಯಾಗಿ 3 ದಿನ ಕಳೆದರೂ ಕೋವಿಡ್ ಪಾಸಿಟಿವ್ ಪ್ರಕರಣಗಳು ಮಾತ್ರ ಇಳಿಮುಖವಾಗ ದಿರುವುದು, ಸಾವಿನ ಸಂಖ್ಯೆ ಏರಿಕೆ ಯಾಗುತ್ತಿರುವುದು ಜನರಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಇದೀಗ ಗಾಳಿಯಿಂದಲೂ ಕೊರೊನಾ ವೈರಸ್ ಸೋಂಕು ಹರಡುತ್ತಿದೆ ಎಂಬ ಸುದ್ದಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

ನೋಡ ನೋಡುತ್ತಿದ್ದಂತೆಯೇ ಕೋವಿಡ್ ಸೋಂಕಿತರು ಸಾವನ್ನಪ್ಪುತ್ತಿರುವುದು ಜನ ಜೀವನದಲ್ಲಿ ಭೀತಿ ಉಂಟು ಮಾಡಿದೆ. ದಿನೇ ದಿನೆ ಆರೋಗ್ಯ ಪರಿಸ್ಥಿತಿ ಗಂಭೀರ ಸ್ವರೂಪ ತಾಳುತ್ತಿರುವುದರಿಂದ ಜನರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ.

ಮಹಾಮಾರಿ ಕೊರೊನಾ ಅಟ್ಟಹಾಸ ಮೇಲುಗೈ ಸಾಧಿಸಿರುವ ಈ ಸಂದರ್ಭ ದಲ್ಲಿ ಕಫ್ರ್ಯೂ ನಿರ್ಬಂಧಕಾಜ್ಞೆಯಿಂದ ವ್ಯಾಪಾರ-ವಹಿವಾಟು, ಎಲ್ಲಾ ಬಗೆಯ ಚಟುವಟಿಕೆಗಳೂ ಬಂದ್ ಆಗಿರುವು ದರಿಂದ ವರ್ತಕರು, ವೃತ್ತಿನಿರತರು, ಕೂಲಿ ಕಾರ್ಮಿಕರು, ಪ್ರವಾಸೋದ್ಯಮದ ಮೇಲೆ ಅವಲಂಬನೆಯಾಗಿರುವವರು ಸೇರಿದಂತೆ ಸಮಾಜದ ಎಲ್ಲಾ ಕ್ಷೇತ್ರಗಳ ಜನರು ಕೆಲಸ ವಿಲ್ಲದೆ, ಆದಾಯವೂ ಇಲ್ಲದೆ ಜೀವನ ನಡೆಸಲು ಪರದಾಡುವಂತಾಗಿದೆ.

ಕೊರೊನಾ ಕಫ್ರ್ಯೂ ಮೂರನೇ ದಿನ ವಾದ ಇಂದು ಆಟೋ, ಟ್ಯಾಕ್ಸಿ, ಓಲಾ, ಊಬರ್, ಪ್ರವಾಸಿ ವಾಹನ, ಬಸ್ ಸೇರಿ ದಂತೆ ಪ್ರಯಾಣಿಕರ ವಾಹನ ಸಂಚಾರ ಸ್ಥಗಿತಗೊಂಡಿದ್ದರಿಂದ ಬೆಳಿಗ್ಗೆ 10 ಗಂಟೆ ನಂತರ ಇಡೀ ಮೈಸೂರು ನಗರದ ರಸ್ತೆ ಗಳು ಬಿಕೋ ಎನ್ನುತ್ತಿದ್ದವು. ಸದಾ ಜನ ದಟ್ಟಣೆಯಿಂದಿರುತ್ತಿದ್ದ ಶಿವರಾಂಪೇಟೆ, ಸಂತೆಪೇಟೆ, ಸಯ್ಯಾಜಿರಾವ್ ರಸ್ತೆ, ಜೆಎಲ್‍ಬಿ ರಸ್ತೆ, ಅರಸು ರಸ್ತೆ, ಬಿ.ಎನ್. ರಸ್ತೆಗಳಲ್ಲೂ ವಾಹನ, ಜನರಿಲ್ಲದೇ ಭಣ ಗುಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮೆಡಿಕಲ್ ಸ್ಟೋರ್, ಹಾಲಿನ ಬೂತ್, ಪೆಟ್ರೋಲ್ ಬಂಕ್‍ಗಳು ತೆರೆದಿದ್ದವಾ ದರೂ, ಜನ ಸಂಚಾರವೇ ಇಲ್ಲದಿರುವುದ ರಿಂದ ಅಲ್ಲಿಯೂ ವ್ಯಾಪಾರ ಅಷ್ಟಕಷ್ಟೇ. ಆಸ್ಪತ್ರೆಗಳು, ಡಯಾಗ್ನೋಸ್ಟಿಕ್ ಸೆಂಟರ್ ಗಳಲ್ಲಿ ಮಾತ್ರ ರೋಗಿಗಳು ಚಿಕಿತ್ಸೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರಲ್ಲದೆ, ಖಾಸಗಿ ಕ್ಲಿನಿಕ್ ಮತ್ತು ನರ್ಸಿಂಗ್ ಹೋಂ ಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ.

ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾ ರಿಕೆಗಳು, ಕಟ್ಟಡ ನಿರ್ಮಾಣ ಕಾಮ ಗಾರಿಗಳಿಗೆ ಅವಕಾಶವಿದೆಯಾದರೂ, ಕಾರ್ಮಿಕರ ಹಾಜರಾತಿ ಕಡಿಮೆ ಇರುವುದ ರಿಂದ ಎಷ್ಟೋ ಕೈಗಾರಿಕೋದ್ಯಮಗಳು ಬಂದ್ ಆಗಿವೆ. ಗುರುವಾರ ರಾತ್ರಿಯಿಂದ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವುದರಿಂದ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿರುವುದು ಕಂಡುಬರುತ್ತಿದೆ.

ಹಣ್ಣು, ತರಕಾರಿ, ಹಾಲು, ದಿನಸಿ ಖರೀ ದಿಗೆ ಬೆಳಗ್ಗೆ 6ರಿಂದ 10 ಗಂಟೆವರೆಗೆ ಅವ ಕಾಶ ನೀಡಿರುವುದರಿಂದ ಜನರು ಒಮ್ಮೆಲೇ ಹೊರಬಂದು ಮುಗಿ ಬೀಳುತ್ತಿದ್ದ ಕಾರಣ, ಎಂ.ಜಿ.ರಸ್ತೆಯ ತರಕಾರಿ ಮಾರುಕಟ್ಟೆ, ಶಿವರಾಂಪೇಟೆ, ಸಂತೆಪೇಟೆಯಂತಹ ವಾಣಿಜ್ಯ ರಸ್ತೆಗಳಲ್ಲಿ ಜನ ಮತ್ತು ವಾಹನ ದಟ್ಟಣೆ ಕಂಡು ಬಂದಿತು.

ಪೊಲೀಸರು ಪಿಸಿಆರ್, ಗರುಡ ವಾಹನಗಳಲ್ಲಿ ಮೈಕ್ ಮೂಲಕ ಅನೌನ್ಸ್ ಮಾಡಿ ತಿಳುವಳಿಕೆ ಹೇಳಿದರೂ, ಗ್ರಾಹಕರು ಗುಂಪಾಗಿಯೇ ಓಡಾ ಡುತ್ತಿದ್ದುದು ಆ ವೇಳೆ ಮೈಸೂರು ನಗರ ದಾದ್ಯಂತ ಕಂಡು ಬಂದಿತು.

ಉಳಿದಂತೆ ಸರಕು ಸಾಗಣೆ ವಾಹನ, ಆರೋಗ್ಯ ಸೇವೆ, ಸರ್ಕಾರಿ ನೌಕರರು, ಕಾರ್ಮಿಕರು, ಖಾಸಗಿ ಸಂಸ್ಥೆಗಳ ಉದ್ಯೋಗಿ ಗಳ ಸಂಚಾರ ಎಂದಿನಂತಿದ್ದು, ಗುರುತಿನ ಚೀಟಿ ಅಥವಾ ಸಮಂಜಸ ಪುರಾವೆ ಗಳನ್ನು ಪರಿಶೀಲಿಸಿ ಕರ್ತವ್ಯ ನಿರತ ಪೊಲೀಸರು ಅವಕಾಶ ನೀಡುತ್ತಿದ್ದಾರೆ.

Translate »