ಹಿಂದೆಂದಿಗಿಂತ ಈಗ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಹಾರ ಅವಶ್ಯ
ಮೈಸೂರು

ಹಿಂದೆಂದಿಗಿಂತ ಈಗ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಹಾರ ಅವಶ್ಯ

May 1, 2021

ಇತ್ತೀಚಿನ ದಿನಗಳಲ್ಲಿ ಮನುಕುಲವನ್ನು ನಾಶ ಮಾಡಲು ಹೊರಟಿರುವ ಕೊರೊನಾ ಎಂಬ ಮಹಾಮಾರಿ ಅನೇಕ ಜೀವಗಳನ್ನು ಬಲಿ ಪಡೆ ಯುತ್ತಿದೆ. ಯಾರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಯಿರುವುದೋ, ಯಾರ ಶ್ವಾಸಾಂಗವ್ಯೂಹ ದುರ್ಬಲವಾಗಿದೆಯೋ ಅಂಥವರಲ್ಲಿ ಈ ವೈರಸ್‍ನ ಪ್ರಭಾವ ಮತ್ತು ಸಾವಿನ ಸಾಧ್ಯತೆ ಹೆಚ್ಚು.

ಈ ರೋಗದಿಂದ ರಕ್ಷಿಸಿಕೊಳ್ಳಲು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿದೆ. ಆಧುನಿಕ ಜೀವನ ಶೈಲಿಯೊಂದಿಗೆ ಆಧುನಿಕ ಆಹಾರಕ್ಕೆ ನಾವು ಮಾರು ಹೋಗಿರುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ. ಭಾರತೀಯ ಚಿಕಿತ್ಸಾ ಪದ್ಧತಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳಲು ಅನೇಕ ಮಾರ್ಗಗÀಳಿವೆ.

ನಾವು ಸೇವಿಸುವ ಆಹಾರದಲ್ಲಿ ಶುಂಠಿ, ಅರಿಶಿಣ, ಲವಂಗ, ದಾಲ್ಚಿನ್ನಿ (ಚಕ್ಕೆ), ಜೀರಿಗೆ, ಕಾಳುಮೆಣಸು, ಕೊತ್ತಂಬರಿ ಹಾಗೂ ಬೆಳ್ಳುಳ್ಳಿಯನ್ನು ಹೆಚ್ಚಾಗಿ ಬಳಸ ಬೇಕು. ಕರಿದ ಆಹಾರ ಪದಾರ್ಥಗಳ ಸೇವನೆ ಕಡಿಮೆ ಮಾಡುವುದು, ಮೊಸರಿನ ಬದಲು ಮಜ್ಜಿಗೆಗೆ ಶುಂಠಿ, ಕಾಳುಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ಸೇವಿಸ ಬೇಕು. ವೈರಸ್‍ಗಳ ವಿರುದ್ಧ ಹೋರಾಡಲು ಅಥವಾ ರೋಗನಿರೋಧಕ ಶಕ್ತಿ ಹೆಚ್ಚಾಗಲು ವಿಟಮಿನ್ ಸಿ ಹೇರಳವಾಗಿರುವ ನೆಲ್ಲಿಕಾಯಿ, ಲಿಂಬೆ, ಸೀಬೆ, ಕಿತ್ತಳೆ, ಮೊಳಕೆ ಬರಿಸಿದ ಕಾಳುಗಳನ್ನು ಹೆಚ್ಚಾಗಿ ಸೇವಿಸಬೇಕು. ಜೀವಸತ್ವ ‘ಎ’ ¨Àsರಿತ ಆಹಾರಗಳಾದ ಮಾವಿನ ಹಣ್ಣು, ಕ್ಯಾರೆಟ್, ಕುಂಬಳಕಾಯಿ, ನುಗ್ಗೆ ಸೊಪ್ಪು, ಮೆಂತ್ಯೆ ಸೊಪ್ಪು, ಪಪ್ಪಾಯ, ಕಲ್ಲಂಗಡಿ, ಟೊಮ್ಯಾಟೊ, ಮತ್ತು ಬಾಳೆ ಹಣ್ಣನ್ನು ಉಪಯೋಗಿಸಬೇಕು. ತಂಪು ಪಾನೀಯ ಹಾಗೂ ಐಸ್‍ಕ್ರೀಮ್ ಸೇವನೆ ನಿಲ್ಲಿಸಬೇಕು.

ಹತ್ತರಿಂದ ಹದಿನೈದು ತುಳಸಿ ಎಲೆಗಳನ್ನು ನೀರಿಗೆ ಹಾಕಿ ಕುದಿಸಿ ಕಷಾಯ ತಯಾರಿಸಿ ಕುಡಿಯುವು ದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಪದೇ ಪದೆ ಕಾಡುವ ಶೀತ, ನೆಗಡಿಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಬೆಳಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿ ಬಾಯಿ ಮಕ್ಕಳಿಸುವುದರಿಂದ ಯಾವುದೇ ರೀತಿಯ ಸೋಂಕು ತಗಲುವ ಸಾಧ್ಯತೆ ಕಡಿಮೆಯಾಗುತ್ತದೆ.

ನೀರಿಗೆ ಚಕ್ಕೆ(2 ಗ್ರಾಂ), ಕಾಳುಮೆಣಸು(5 ಗ್ರಾಂ), ಏಲಕ್ಕಿ (2ಗ್ರಾಂ) ಮತ್ತು ಒಣಶುಂಠಿಯನ್ನು(5 ಗ್ರಾಂ) ಜಜ್ಜಿ ಹಾಕಿ ಕುದಿಸಬೇಕು. ಹೀಗೆ ತಯಾರಾದ ಕಷಾಯವನ್ನು ಕುಡಿಯುವುದರಿಂದ ಶೀತ, ನೆಗಡಿ, ಕೆಮ್ಮು, ಕಫ, ಮೈಕೈನೋವು, ಹೊಟ್ಟೆ ಉಬ್ಬರ ಹಾಗೂ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿ. ದಾಳಿಂಬೆ ಹಣ್ಣು ಸೇವನೆ ಹಾಗೂ ದಾಳಿಂಬೆ ಸಿಪ್ಪೆಯ ಕಷಾಯ ಸೇವನೆಯಿಂದ ದೇಹದಲ್ಲಿ ರೋಗನಿರೋ ಧಕ ಶಕ್ತಿಯು ಹೆಚ್ಚಾಗುವುದು. ಜೊತೆಗೆ ಅಮೃತಬಳ್ಳಿ, ಶುಂಠಿ ಮತ್ತು ಜೀರಿಗೆಗಳ ಕಷಾಯವನ್ನು ಸೇವಿ ಸುವುದರಿಂದ ವೈರಸ್ ಒಂದೇ ಅಲ್ಲ, ಹಲವಾರು ರೋಗಗಳಿಂದ ದೂರವಿರಬಹುದು.

ಹಣ್ಣು ಮತ್ತು ತರಕಾರಿಗಳು ದೇಹಕ್ಕೆ ರೋಗನಿರೋ ಧಕ ಶಕ್ತಿಯನ್ನು ಒದಗಿಸುವುದರಿಂದ ಆರೋಗ್ಯ ನಿರ್ವ ಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಹಣ್ಣು ಮತ್ತು ತರಕಾರಿಗಳ ಸೇವನೆ ಅತ್ಯಂತ ಅಗತ್ಯ ವಾಗಿದೆ. ಉತ್ತಮ ಆರೋಗ್ಯಕ್ಕಾಗಿ ಮನೆಯ ಹತ್ತಿರ ಜಾಗವಿದ್ದರೆ ತಮ್ಮ ಕುಟುಂಬಕ್ಕಾಗಿ ಬೇಕಾಗುವ ಹಣ್ಣು ಮತ್ತು ತರಕಾರಿಗಳನ್ನು ತಾವೇ ಸ್ವತಃ ಬೆಳೆಯಲು ಪೌಷ್ಠಿಕ ತೋಟ ನಿರ್ಮಾಣ ಮಾಡುವುದು ಅತ್ಯವಶ್ಯವಾಗಿದೆ.
ನಾವು ಆರೋಗ್ಯವಾಗಿರಲು ಸಮ ತೋಲನ ಆಹಾರವನ್ನು ಸೇವಿಸಬೇಕು. ಸಮತೋಲನ ಆಹಾರವು ಐದು ರೀತಿಯಾದ ಆಹಾರದ ಗುಂಪು ಗಳನ್ನು ಒಳಗೊಂಡಿರುತ್ತದೆ. ಅವು ಈ ಕೆಳಕಂಡವು.

ಏಕದಳ ಧಾನ್ಯ ಮತ್ತು ಸಿರಿಧಾನ್ಯಗಳು : ಅಕ್ಕಿ, ರಾಗಿ, ಜೋಳ, ಸಜ್ಜೆ, ಸಾಮೆ, ನವಣೆ, ಹಾರಕ, ಊದಲು, ಬರಗು ಹಾಗೂ ಕೊರಲೆ.
ದ್ವಿದಳ ಧಾನ್ಯಗಳು: ಹೆಸರು, ತೊಗರಿ, ಉದ್ದು, ಅಲಸಂದೆ, ಅವರೆ, ಮಡಕೆಕಾಳು, ಹುರುಳಿ, ಇತ್ಯಾದಿ
ಹಸಿರು ಸೊಪ್ಪುಗಳು, ತರಕಾರಿಗಳು ಹಾಗೂ ಹಣ್ಣುಗಳು: ಪಾಲಕ್, ದಂಟು, ಸಬ್ಸಿಗೆ, ನುಗ್ಗೆ, ಮೆಂತ್ಯೆ, ಪುದೀನ ಹಾಗೂ ಎಲ್ಲ ರೀತಿಯಾದ ತರಕಾರಿ ಮತ್ತು ಹಣ್ಣುಗಳು ಹಾಲು ಹಾಗೂ ಹಾಲಿನ ಉತ್ಪನ್ನಗಳು: ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ ಮತ್ತು ತುಪ್ಪ,

ಎಣ್ಣೆ ಮತ್ತು ಬೆಲ್ಲ: ನಮ್ಮ ಆಹಾರದಲ್ಲಿ ಎಣ್ಣೆ, ಸಕ್ಕರೆ, ಉಪ್ಪು ಹಾಗೂ ಮೈದಾಗಳನ್ನು ಅತೀ ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ಸಮತೋಲನ ಆಹಾರವು ದೇಹಕ್ಕೆ ಬೇಕಾಗುವ ಶಕ್ತಿ, ಪ್ರೋಟೀನ್, ಕೊಬ್ಬು, ಜೀವಸತ್ವಗಳು ಹಾಗೂ ಖನಿಜ ಲವಣಗಳು ಹಾಗೂ ನಾರಿನಾಂಶವನ್ನು ಒದಗಿಸುತ್ತದೆ.
ಆಹಾರವನ್ನು ಸೇವಿಸುವಾಗ ನೆನಪಿನಲ್ಲಿಡಬೇಕಾದ ಅಂಶಗಳು: ಆಹಾರವನ್ನು ಔಷಧಿಯ ಹಾಗೆ ಬಳಸ ಬೇಕು, ಒಳ್ಳೆಯ ಆಹಾರದಿಂದ ಮಾತ್ರ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಬೆಳಗ್ಗಿನ ಉಪಹಾರ ಹೆಚ್ಚಾಗಿರಲಿ ಹಾಗೂ ವೈವಿಧ್ಯತೆಯಿಂದ ಕೂಡಿರಲಿ ಇದರಿಂದ ನಮಗೆ ಬೇಗ ಹಸಿವಾಗುವುದಿಲ್ಲ. ಮಧ್ಯಾಹ್ನದ ಊಟ ಸಾಧಾರಣವಾಗಿರಬೇಕು ಹಾಗೂ ರಾತ್ರಿ ಊಟ ಬಹಳ ಸರಳವಾಗಿರಬೇಕು.

ವಾರಕ್ಕೆ ಒಂದು ಬಾರಿ ಪೂರ್ಣ ಹಣ್ಣಿನ/ಪಾನೀಯ ಉಳ್ಳ ಆಹಾರ ಸೇವನೆ ಮಾಡುವುದರಿಂದ ದೇಹದ ಇಡಿ ಅಂಗಾಗಗಳಿಗೆ ಪುನರ್ ಚೇತನ ನೀಡುವುದಕ್ಕೆ ಸಹಕಾರಿಯಾಗಿರುತ್ತದೆ.

ನಮ್ಮ ಆಹಾರ ಬಾಯಿಂದ ಪಚನವಾಗಲು ಪ್ರಾರಂಭವಾಗುತ್ತದೆ ಆದ್ದರಿಂದ ಹೆಚ್ಚು ಹೊತ್ತು ಆಹಾರವನ್ನು ಅಗಿದು ತಿನ್ನಿ (ಇದರಿಂದ ಕಡಿಮೆ ಆಹಾರ ಸೇವನೆ ಮಾಡುವುದಕ್ಕೆ ಸಹಾಯವಾಗುತ್ತದೆ ಹಾಗೂ ತೂಕ ಕಡಿಮೆ ಮಾಡುವ ವ್ಯಕ್ತಿಗಳಿಗೆ ಅನುಕೂ¯ವಾಗುತ್ತದೆ). ಹಸಿದಾಗ ಮಾತ್ರ ಆಹಾರ ಸೇವಿಸಿ ಎಕೆಂದರೆ ಜೀರ್ಣಗೊಂಡ ಆಹಾರ ಹೀರು ವಿಕೆಯಾಗಲು ಕನಿಷ್ಠ 4 ರಿಂದ 5 ಗಂಟೆಗಳ ಕಾಲ ಬೇಕು. ಆದ್ದರಿಂದ ಎರಡು ಊಟದ ನಡುವೆ 4-5 ಗಂಟೆಗಳ ಕಾಲ ಅಂತರವಿರುವುದು ಒಳ್ಳೆ ಯದು. ಬೇಳೆಗಿಂತ ಕಾಳುಗಳನ್ನು ಸೇವಿಸಿ, ಇದರಲ್ಲಿ ನಾರಿ ನಂಶ ಹೆಚ್ಚಾಗಿರುತ್ತದೆ ಕಾಳುಗಳನ್ನು ಮೊಳಕೆ ಬರಿಸಿ ಸೇವಿಸುವುದದರಿಂದ ಸುಲಭವಾಗಿ ಪಚನವಾಗುತ್ತದೆ ಅಲ್ಲದೆ ಗ್ಯಾಸ್ ತೊಂದರೆಯನ್ನು ಕಡಿಮೆ ಮಾಡುತ್ತದೆ. ಮೊಳಕೆ ಕಾಳುಗಳ ಸೇವನೆ ಯಿಂದ ಬಿ ಹಾಗೂ ಸಿ ಜೀವಸತ್ವಗಳು ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಲಭ್ಯವಾಗುವವು.

ಬಾಯಿ ಚಪಲಕ್ಕೆ ಜಂಕ್ ಫುಡ್‍ಗಳ ಆಕರ್ಷಣೆ ಗೊಳಗಾಗದೆ ಸರಳ ಸತ್ವಭರಿತ ಹಾಗೂ ನೈಸರ್ಗಿಕ ವಾಗಿ, ಸ್ಥಳೀಯವಾಗಿ ಸಿಗುವ ಆಹಾರ ಸೇವನೆ ಯಿಂದ ನಮ್ಮ ಆರೋಗ್ಯವನ್ನು ಕಾಪಾಡಬಹುದು.

ಹಸಿಯಾಗಿ ಸೇವಿಸುವ ಆಹಾರಗಳನ್ನು ಹಸಿಯಾಗಿಯೇ ಸೇವಿಸುವುದರಿಂದ ಹೆಚ್ಚಿನ ಪೌಷ್ಠಿಕಾಂಶ ದೇಹಕ್ಕೆ ಸಿಗುತ್ತದೆ ಹಾಗೂ ಇದರಲ್ಲಿ ನಾರಿನಂಶ ಹೆಚ್ಚಾಗಿರುವುದರಿಂದ ಮಲಬದ್ದತೆ ನಿವಾರಣೆಯಾಗುವುದು ಉದಾಹರಣೆಗೆ ಕ್ಯಾರೆಟ್, ಸವತೆಕಾಯಿ, ಮೂಲಂಗಿ, ಮೆಂತ್ಯೆ, ಇತ್ಯಾದಿ.
ನಮ್ಮ ದೇಹದಲ್ಲಿ ಶೇಕಡ 70 ಭಾಗ ನೀರಿನಾಂಶ ಇದೆ, ಶೇ.2ರಷ್ಟು ನೀರು ದೇಹದಲ್ಲಿ ಕಡಿಮೆಯಾದರೆ ದೇಹದ ವಿವಿಧ ಅಂಗಾಂಗಗಳ ಕಾರ್ಯ ನಿರ್ವಹಣೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ದಿನಕ್ಕೆ 8-10 ಲೋಟ ನೀರು ಸೇವಿಸಿ. ಆಹಾರ ಪಚನ ವಾಗುವುದಕ್ಕೆ ಪೌಷ್ಟಿಕಾಂಶ ಹೀರುವಿಕೆಗೆ ಜೀವ ಕೋಶಗಳ ಚಲನೆಗೆ, ದೇಹದ ಉಷ್ಣಾಂಶವನ್ನು ಕಾಪಾಡುವುದಕ್ಕೆ ಹಾಗೂ ನಮ್ಮ ದೇಹದಲ್ಲಿ ಪಚನ ಕ್ರಿಯೆಯ ಮೂಲಕ ಉತ್ಪಾದನೆಯಾಗುವ ಕಲ್ಮಶ ಗಳನ್ನು ಹೊರ ಹಾಕಲು ನೀರು ಸಹಕಾರಿಯಾಗಿದೆ.

ಒಳ್ಳೆಯ ಆಹಾರ ಪದ್ಧತಿ ಜೊತೆಗೆ ಪ್ರತಿನಿತ್ಯ ಯೋಗ, ವ್ಯಾಯಾಮ, ಧ್ಯಾನ ಹಾಗೂ ಪ್ರಾಣಾಯಾಮ ಮಾಡುವುದರಿಂದ ರೋಗಗಳ ವಿರುದ್ಧ ಹೋರಾ ಡುವ ಶಕ್ತಿ ದೊರೆಯುವುದು.

ನೇತ್ರಾವತಿ ಎತ್ತಿನಮನಿ
(ಗೃಹ ವಿಜ್ಞಾನಿ), ಐಸಿಎಆರ್ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು

Translate »