7 ಮಂದಿ ಅಂತರಜಿಲ್ಲಾ ಕಳ್ಳರ ಬಂಧನ
ಹಾಸನ

7 ಮಂದಿ ಅಂತರಜಿಲ್ಲಾ ಕಳ್ಳರ ಬಂಧನ

August 12, 2018

ಚನ್ನರಾಯಪಟ್ಟಣ: ಏಳು ಮಂದಿ ಅಂತರ ಜಿಲ್ಲಾ ವಾಹನ ಕಳ್ಳರನ್ನು ಬಂಧಿಸುವಲ್ಲಿ ತಾಲೂಕಿನ ನುಗ್ಗೇಹಳ್ಳಿ ಪೆÇಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಮಂಜುನಾಥ್, ಸುರೇಶ್, ಮಹೇಶ್, ಯಶ್, ಮಲ್ಲಿಕ್, ಬಾಷಾ ಬಂಧಿತ ಆರೋಪಿಗಳು. ಜೂ.18 ರಂದು ಬಳಘಟ್ಟ ಗ್ರಾಮದಲ್ಲಿ ಟ್ರಾಕ್ಟರ್ ಕಳ್ಳತನ ಹಿನ್ನೆಲೆ ಪ್ರಕರಣ ದಾಖ ಲಾಗಿತ್ತು. ಕಳ್ಳರ ಜಾಡು ಹಿಡಿಯಲು ಡಿವೈಎಸ್ಪಿ ಶಶಿಧರ್ ನೇತೃತ್ವದ ತಂಡ ರಚಿಸಲಾಗಿತ್ತು. ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿ ಗಳನ್ನು ಬಂಧಿಸಿದ್ದಾರೆ. 8 ಟ್ರಾಕ್ಟರ್, 6 ಬೈಕ್, ಓಮ್ನಿ ವ್ಯಾನ್ ಸೇರಿದಂತೆ ಬಂಧಿತರಿಂದ 40 ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾ ಗಿದೆ. ನುಗ್ಗೇಹಳ್ಳಿ ಪೆÇಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Translate »